Advertisement
ರವಿವಾರ ಬೆಳಗ್ಗೆ ತೆಲಂಗಾಣದಿಂದ ಬಂದ ವಿದ್ಯಾರ್ಥಿಯೊರ್ವ ಸರಕಾರಿ ಕ್ವಾರೆಂಟೈನ್ ಒಪ್ಪದ ಕಾರಣ ಮಧ್ಯಾಹ್ನ ತನಕ ಚೆಕ್ ಪೋಸ್ಟ್‌ನಲ್ಲಿ ಇದ್ದು ಬಳಿಕ ಅಧಿಕಾರಿಗಳು ಖಡಕ್ ಎಚ್ಚರಿಕೆ ಬಳಿಕ ಉಡುಪಿಯಲ್ಲಿ ಸರಕಾರಿ ಕ್ವಾರಂಟೈನ್‌ಗೆ ಒಳಗಾಗಿದ್ದಾನೆ.
ಸೋಮೇಶ್ವರ ಚೆಕ್‌ಪೋಸ್ಟ್‌ನಲ್ಲಿ ಯಾವುದೇ ಕಾರಣಕ್ಕೂ ಪಾಸ್ ಇಲ್ಲದೆ ಜಿಲ್ಲಾ ಗಡಿ ಪ್ರವೇಶ ಹಾಗೂ ದಾಟಲು ಅವಕಾಶವಿಲ್ಲ ಎಂದು ಹೆಬ್ರಿ ತಹಶೀಲ್ದಾರ್ ಮಹೇಶ್ಚಂದ್ರ ತಿಳಿಸಿದ್ದಾರೆ. ನಾರಾವಿ: ತಪಾಸಣೆ ಬಿಗಿ
ವೇಣೂರು: ಹೊರ ಜಿಲ್ಲೆ ಹಾಗೂ ರಾಜ್ಯಗಳ ಜನರ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದರಿಂದ ಉಡುಪಿ-
ದ.ಕ. ಜಿಲ್ಲೆಯ ಗಡಿ ಭಾಗವಾಗಿರುವ ನಾರಾವಿಯ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ.
ಕ್ವಾರಂಟೈನ್‌ಗೆ ವೇಣೂರು, ಹೊಸಂಗಡಿ, ಆರಂಬೋಡಿ, ಗುಂಡೂರಿ, ನಾರಾವಿ, ಅಳ ದಂಗಡಿ ಹಾಗೂ ಗರ್ಡಾಡಿ ಪರಿಸರದ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಹಾಸ್ಟೆಲ್‌ಗಳನ್ನು ನಿಗದಿ ಪಡಿಸಲಾಗಿದೆ.