Advertisement

ಪ್ರತ್ಯೇಕ ಪ್ರಕರಣ : ಸಮುದ್ರ ಪಾಲಾಗುತ್ತಿದ್ದ ಎರಡು ವರ್ಷದ ಮಗು ಮತ್ತು ಯುವಕನ ರಕ್ಷಣೆ

09:14 PM Jan 30, 2022 | Team Udayavani |

ಉಳ್ಳಾಲ : ಸೋಮೇಶ್ಚರ ಸಮುದ್ರ ತೀರದಲ್ಲಿ ಎರಡು ಪ್ರತ್ಯೇಕ ಘಟನೆಯಲ್ಲಿ ಸಮುದ್ರ ಪಾಲಾಗುತ್ತಿದ್ದ ಎರಡು ವರ್ಷದ ಮಗು ಮತ್ತು ಯುವಕನನ್ನು ಸ್ಥಳೀಯ ಜೀವರಕ್ಷಕ ಈಜುಗಾರರು ರಕ್ಷಿಸಿದ ಘಟನೆ ಭಾನುವಾರ ನಡೆದಿದೆ.

Advertisement

ಸಮುದ್ರದ ಬದಿಯ ಕಲ್ಲುಗಳ ಎಡೆಯಲ್ಲಿ ತಾಯಿ ಎರಡು ವರ್ಷದ ಮಗುವಿನೊಂದಿಗೆ ದಾಟುತ್ತಿದ್ದಾಗ ಅಲೆಯೊಂದು ಬಡಿದಿದ್ದು, ತಾಯಿಯ ಕೈಯಿಂದ ಮಗು ಜಾರಿ ಸಮುದ್ರದ ಅಲೆಯಲ್ಲಿ ಸಿಲುಕಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಜೀವರಕ್ಷಕ ಈಜುಗಾರರು ಮಗುವನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ತಾಯಿಗೆ ಒಪ್ಪಿಸಿದ್ದಾರೆ.

ರುದ್ರಪಾದೆಯಿಂದ ಸಮುದ್ರಕ್ಕೆ ಬಿದ್ದ ಯುವಕನ ರಕ್ಷಣೆ : ಮಗು ರಕ್ಷಿಸಿ ಕೆಲವೇ ನಿಮಿಷಗಳಲ್ಲಿ ವಿಹಾರಕ್ಕೆಂದು ಆಗಮಿಸಿದ್ದ ಬೋಳಿಯಾರ್ ನಿವಾಸಿ ಶರೀಫ್ ರುದ್ರಪಾದೆಯಿಂದ ಜಾರಿ ಸಮುದ್ರಕ್ಕೆ ಬಿದ್ದಿದ್ದು ಈ ಸಂದರ್ಭದಲ್ಲಿ ಜೀವ ರಕ್ಷಕ ಈಜುಗಾರರು ಸಮುದ್ರ ಪಾಲಾಗುತ್ತಿದ್ದ ಶರೀಫ್ ನನ್ನು ರಕ್ಷಿಸಿದ್ದಾರೆ. ಕಳೆದೆರಡು ದಿನಗಳ ಹಿಂದೆ ಯುವತಿಯೊಬ್ಬಳನ್ನು ರಕ್ಷಿಸುವ ಮೂಲಕ ಜೀವರಕ್ಷ ಈಜುಗಾರರು ಸಾಹಸ ಮೆರೆದಿದ್ದರು. ಕರಾವಳಿ ಕಾವಲು ಪಡೆಯಿಂದ ನಿಯೋಜಿತರಾಗಿರುವ ಸ್ಥಳೀಯ ಜೀವರಕ್ಷಕರಾದ ಅಶೋಕ್ ಸೋಮೇಶ್ವರ,ಕಿರಣ್ ಭಾನುವಾರ ಇಬ್ಬರನ್ನು ರಕ್ಷಿಸುವಲ್ಲಿ ಸಾಹಸ ಮೆರದಿದ್ದು ಇವರಿಗೆ ಸ್ಥಳೀಯ ನಿವಾಸಿ ಸುನಿಲ್ ಸಹಕಾರ ನೀಡಿದ್ದರು.

ಇದನ್ನೂ ಓದಿ : ಲಾಠಿ ಹಿಡಿದು ಯುದ್ಧಕ್ಕೆ ಮುಂದಾಗಿರಲಿಲ್ಲ; ಪಾದಯಾತ್ರೆ ಹೊರಟಿದ್ದೆವಷ್ಟೆ : ಡಿಕೆಶಿ

Advertisement

Udayavani is now on Telegram. Click here to join our channel and stay updated with the latest news.

Next