Advertisement

ಅಸಿಡಿಟಿ ನಿವಾರಣೆಗಾಗಿ ಕೆಲವು ಸಲಹೆಗಳು

09:51 PM Jan 01, 2022 | Team Udayavani |

ಬೀಜಗಳು: ಬಾದಾಮಿ, ಒಣ ಅಂಜೂರ ಮತ್ತು ಒಣ ದ್ರಾಕ್ಷಿಗಳು ಹೊಟ್ಟೆಯಲ್ಲಿನ ಉರಿಯುವ ಸಂವೇದನೆಯನ್ನು ತಗ್ಗಿಸಲು ಸಹಾಯ ಮಾಡುತ್ತವೆ.

Advertisement

ಏಲಕ್ಕಿ: ಏಲಕ್ಕಿಯು ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ ಮತ್ತು ಹೊಟ್ಟೆಯ ಸೆಡೆತವನ್ನು ಉಪಶಮನಗೊಳಿಸುತ್ತದೆ. ಮಾತ್ರವಲ್ಲದೆ ಇದು ಹೊಟ್ಟೆಯ ಒಳಪದರವನ್ನು ಶಮನಗೊಳಿಸಿ ಅಧಿಕ ಆಮ್ಲವು ಉತ್ಪತ್ತಿಯಾದ ಪರಿಣಾಮವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ.

ಬೆಲ್ಲ: ನಿಮ್ಮ ಬಾಯಿಯಲ್ಲಿ ಬೆಲ್ಲದ ಸಣ್ಣ ತುಂಡನ್ನು ಇರಿಸಿಕೊಳ್ಳಿ ಮತ್ತು ಅದನ್ನು ನಿಧಾನವಾಗಿ ಚೀಪುತ್ತಾ ಇರಿ. ಬೆಲ್ಲದ ಸಿಹಿ ರಸವು ಅಸಿಡಿಟಿಯನ್ನು ಸಂಪೂರ್ಣವಾಗಿ ಮರೆಮಾಡುತ್ತದೆ.

ತಣ್ಣಗಿನ ಹಾಲು: ಹಾಲಿನಲ್ಲಿ ಕ್ಯಾಲ್ಸಿಯಂ ವಿಶೇಷ ಪ್ರಮಾಣದಲ್ಲಿದ್ದು ಅದು ಆಮ್ಲದ ಹೆಚ್ಚಳವನ್ನು ತಡೆಯುತ್ತದೆ ಮತ್ತು ಉತ್ಪತ್ತಿಯಾದ ಹೆಚ್ಚುವರಿ ಆಮ್ಲವನ್ನು ಹೀರಿಕೊಳ್ಳುತ್ತದೆ ಆ ಮೂಲಕ ಆಸಿಡಿಟಿಯ ಲಕ್ಷಣಗಳನ್ನು ತಗ್ಗಿಸುತ್ತದೆ. ತಣ್ಣಗಿನ ಹಾಲು ಕುಡಿಯುವುದರಿಂದ ಅಸಿಡಿಟಿಯ ಬಹುಮುಖ್ಯ ರೋಗಲಕ್ಷಣವಾಗಿರುವ ಎದೆ ಉರಿಯುವಿಕೆಯು ತತ್‌ಕ್ಷಣ ನಿಲ್ಲುತ್ತದೆ.

ಪುದೀನಾ ಸೊಪ್ಪು : ಪುದೀನಾವು ಹೊಟ್ಟೆಯ ಆಮ್ಲದ ಪ್ರಮಾಣವನ್ನು ತಗ್ಗಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಶೀತಲಕಾರಿ ಗುಣವು ಅಸಿಡಿಯ ನೋವು ಮತ್ತು ಉರಿಯುವಿಕೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.

Advertisement

ಲವಂಗ: ಲವಂಗವನ್ನು ಜಗಿದಾಗ ಅದರ ತೀಕ್ಷ್ಣ ರುಚಿಗೆ ನಿಮ್ಮ ಸ್ವಾದ ಗ್ರಂಥಿಗಳು ಎಚ್ಚೆತ್ತುಕೊಳ್ಳುತ್ತವೆ ಮತ್ತು ಅಧಿಕ ಲಾಲಾರಸವನ್ನು ಉತ್ಪತ್ತಿ ಮಾಡುತ್ತವೆ, ಇದರ ಪರಿಣಾಮವಾಗಿ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಮತ್ತು ಆಸಿಡಿಟಿಯ ಲಕ್ಷಣಗಳು ನಿಯಂತ್ರಣಕ್ಕೆ ಬರುತ್ತವೆ.

ಜೀರಿಗೆ: ಜೀರಿಗೆಗೆ ಲಾಲಾರಸವನ್ನು ಉತ್ಪತ್ತಿ ಮಾಡುವ ಲಕ್ಷಣದ್ದು, ಇದು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆ ಉತ್ತಮಗೊಳ್ಳಲು ಸಹಾಯ ಮಾಡುತ್ತದೆ ಮತ್ತು ವಾಯು ಹಾಗೂ ಇನ್ನಿತರ ಗ್ಯಾಸ್ಟ್ರಿಕ್‌ ತೊಂದರೆಗಳನ್ನು ಉಪಶಮಗೊಳಿಸುತ್ತದೆ.

ಮೊಟ್ಟೆಯ ಬಿಳಿ ಭಾಗ: ಮೊಟ್ಟೆ ಪ್ರೋಟೀನಿನ ಅತ್ಯುತ್ತಮ ಮೂಲ ಮತ್ತು ಅದರಲ್ಲಿ ಆಮ್ಲದ ಅಂಶ ಇರುವುದು ಬಹಳ ಕಡಿಮೆ. ಆದರೆ ಮೊಟ್ಟೆ ಸೇವಿಸುವಾಗ ಅದರ ಹಳದಿ ಯನ್ನು ಸೇವಿಸಬೇಡಿ ಯಾಕೆಂದರೆ ಇದು ಆಸಿಡಿಟಿಯ ರೋಗಲಕ್ಷಣಗಳನ್ನು ಉಂಟು ಮಾಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next