Advertisement

ಕೆಲವರ ಆದ್ಯತೆ ‘ಕಲ್ಪನೆಗೆ’ನಮ್ಮದು ‘ಕಾರ್ಯಗತಗೊಳಿಸುವಿಕೆ’ : ಪ್ರಧಾನಿ

04:03 PM Dec 11, 2021 | Team Udayavani |

ಬಲರಾಂಪುರ: ಕೆಲವರ ಆದ್ಯತೆ ‘ಕಲ್ಪನೆ’, ನಮ್ಮ ಆದ್ಯತೆ ‘ಕಾರ್ಯಗತಗೊಳಿಸುವಿಕೆ,” ಎಂದು ಉತ್ತರ ಪ್ರದೇಶದ ಬಲರಾಂಪುರದಲ್ಲಿ 9,800 ಕೋಟಿ ವೆಚ್ಚದ ಸರಯು ಕಾಲುವೆ ರಾಷ್ಟ್ರೀಯ ಯೋಜನೆಯನ್ನು ಉದ್ಘಾಟಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದಾರೆ.

Advertisement

ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ಬಹುಶಃ ಕೆಲವರು ತಮ್ಮ ಯೌವನದಲ್ಲಿ ಈ ಯೋಜನೆಗೆ ರಿಬ್ಬನ್ ಕತ್ತರಿಸಬಹುದು ಎಂದು ಕಲ್ಪಿಸಿರಬಹುದು ಎಂದು ಪರೋಕ್ಷವಾಗಿ ಅಖಿಲೇಶ್ ಸಿಂಗ್ ಯಾದವ್ ಅವರಿಗೆ ಟಾಂಗ್ ನೀಡಿದರು.

ಮಾಫಿಯಾಗಳಿಗೆ ರಕ್ಷಣೆ ಇಲ್ಲ
ಹಿಂದಿನ ಸರ್ಕಾರಗಳು ಮಾಫಿಯಾಗಳಿಗೆ ರಕ್ಷಣೆ ನೀಡುತ್ತಿದ್ದವು, ಅಕ್ರಮ ಭೂ ಒತ್ತುವರಿಯನ್ನು ಪ್ರೋತ್ಸಾಹಿಸುತ್ತಿದ್ದವು, ಆದರೆ ಇಂದು ಯೋಗಿ ಸರ್ಕಾರವು ಮಾಫಿಯಾವನ್ನು ಸ್ವಚ್ಛಗೊಳಿಸುವಲ್ಲಿ ತೊಡಗಿದೆ, ಬಡವರು, ದೀನದಲಿತರು, ಹಿಂದುಳಿದ ಮತ್ತು ಬುಡಕಟ್ಟು ಎಲ್ಲರಿಗೂ ಅಧಿಕಾರ ನೀಡುತ್ತಿದೆ ಎಂದರು.

ನಾನು ಇಂದು ದೆಹಲಿಯಿಂದ ಹೊರಡುವಾಗ, ಯಾರಾದರೂ ಬಂದು ಮೋದಿ ಜೀ ಎಂದು ಹೇಳುತ್ತಾರೆ ಎಂದು ನಾನು ಬೆಳಿಗ್ಗೆಯಿಂದ ಕಾಯುತ್ತಿದ್ದೆ, ನಾನು ಈ ಯೋಜನೆಯ ರಿಬ್ಬನ್ ಅನ್ನು ಕತ್ತರಿಸಿದ್ದೇನೆ. ಕೆಲವರು ತಮ್ಮ ಬಾಲ್ಯದಲ್ಲಿ ಈ ಯೋಜನೆಯ ರಿಬ್ಬನ್ ಅನ್ನು ಕತ್ತರಿಸಿರಬಹುದು ಎಂದು ಯೋಚಿಸಿರಬಹುದು.ರಿಬ್ಬನ್ ಕತ್ತರಿಸುವುದು ಕೆಲವರ ಆದ್ಯತೆ ಎಂದು ವಿಪಕ್ಷಗಳಿಗೆ ಪರೋಕ್ಷ ಟಾಂಗ್ ನೀಡಿದರು.

ಸರಯು ಕಾಲುವೆ ಯೋಜನೆಯ ಕಾಮಗಾರಿಯು ಸುಮಾರು 50 ವರ್ಷಗಳ ಹಿಂದೆ ಪ್ರಾರಂಭವಾಯಿತು ಮತ್ತು ಇಂದು ಅದರ ಕೆಲಸ ಪೂರ್ಣಗೊಂಡಿದೆ. ಈ ಯೋಜನೆಯ ಕಾಮಗಾರಿ ಪ್ರಾರಂಭವಾದಾಗ 100 ಕೋಟಿಗಿಂತ ಕಡಿಮೆ ವೆಚ್ಚದಲ್ಲಿದ್ದು, ಇಂದು ಸುಮಾರು 10,000 ಕೋಟಿ ಖರ್ಚು ಮಾಡಿ ಪೂರ್ಣಗೊಂಡಿದೆ. ಹಿಂದಿನ ಸರ್ಕಾರಗಳ ನಿರ್ಲಕ್ಷ್ಯಕ್ಕೆ ದೇಶವು 100 ಪಟ್ಟು ಹೆಚ್ಚು ಪಾವತಿಸಬೇಕಾಗಿದೆ ಎಂದರು.

Advertisement

ದೇಶಭಕ್ತನಿಗೆ ದೊಡ್ಡ ನಷ್ಟ

ಡಿಸೆಂಬರ್ 8 ರಂದು ಹೆಲಿಕಾಪ್ಟರ್‌ನಲ್ಲಿ ಮಡಿದ ದೇಶದ ವೀರ ಯೋಧರಿಗೆ ಇಂದು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ. ಭಾರತದ ಮೊದಲ ಸಿಡಿಎಸ್ ಜನರಲ್ ಬಿಪಿನ್ ರಾವತ್ ಜಿ ಅವರ ನಿಧನವು ಪ್ರತಿಯೊಬ್ಬ ಭಾರತೀಯನಿಗೆ, ಪ್ರತಿಯೊಬ್ಬ ದೇಶಭಕ್ತನಿಗೆ ದೊಡ್ಡ ನಷ್ಟವಾಗಿದೆ ಎಂದರು.

ವರುಣ್ ಸಿಂಗ್ ಉಳಿಸಲು ಶ್ರಮ
ಯುಪಿಯ ಪುತ್ರ ಡಿಯೋರಿಯಾ ನಿವಾಸಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಜೀವ ಉಳಿಸಲು ವೈದ್ಯರು ಶ್ರಮಿಸುತ್ತಿದ್ದಾರೆ. ತಾಯಿ ಪಟೇಶ್ವರಿಯಲ್ಲಿ ಅವರ ಪ್ರಾಣ ಉಳಿಸುವಂತೆ ಪ್ರಾರ್ಥಿಸುತ್ತೇನೆ. ದೇಶವು ಇಂದು ವರುಣ್ ಸಿಂಗ್ ಅವರ ಕುಟುಂಬದೊಂದಿಗೆ ಇದೆ, ನಾವು ಕಳೆದುಕೊಂಡ ವೀರರ ಕುಟುಂಬಗಳೊಂದಿಗೆ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next