ಒಳಗಾದ ಮಾಜಿ ಸಚಿವರೊಬ್ಬರು ಆರೋಪಿಗಳ ಬ್ಲಾಕ್‌ಮೇಲ್‌ಗೆ ಬೇಸತ್ತು ಅವರ ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎಂಬ ಸಂಗತಿ ಬಯಲಾಗಿದೆ.
Advertisement
ಪ್ರಮುಖ ಆರೋಪಿ ರಾಘವೇಂದ್ರ ಅಲಿಯಾಸ್ ರಘು ಮನೆಯಲ್ಲಿ ಜಪ್ತಿ ಮಾಡಲಾದ ಸಿಡಿ ಹಾಗೂ ಆತನ ಬಳಿ ಪತ್ತೆಯಾದ ಆರು ಮೊಬೈಲ್‌ಗಳಲ್ಲಿ ಹನಿಟ್ರ್ಯಾಪ್‌ಗೆ ಒಳಗಾದವರ ವಿವರಗಳು ದಾಖಲಾಗಿದ್ದು,ಆರೋಪಿಗಳು ಸುಮಾರು 10ಕ್ಕೂ ಅಧಿಕ ಮಂದಿ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಖೆಡ್ಡಕ್ಕೆ ಕೆಡವಿದ್ದಾರೆ. ರಾಘವೇಂದ್ರನ ಸ್ನೇಹಿತೆ ಕಿರುತೆರೆಯಲ್ಲಿ ಮೇಕಪ್ ಕೆಲಸ ಮಾಡುತ್ತಿದ್ದು, ಈತ ಕೂಡ ಅದನ್ನೇ ಮಾಡುತ್ತಿದ್ದ. ಮತ್ತೂಬ್ಬ ಯುವತಿ ನಟಿಯಾಗಿದ್ದಳು.ಈ ಕಾರಣಕ್ಕೆ ಬಹಳಷ್ಟು ಜನಪ್ರತಿನಿ ಧಿಗಳು ಆರೋಪಿಗಳ ಸಾಂಗತ್ಯ ಬೆಳೆಸಿದ್ದರು. ಈ ವಿಡಿಯೋಗಳಿಂದ ತಮ್ಮ ಜೀವನ ಹಾಳಾಗುತ್ತದೆ ಎಂಬ ಭಯದಿಂದಲೇ ಕೆಲವರು ದೂರು ನೀಡುವುದಿಲ್ಲ ಎಂಬ ಭರವಸೆ ಯಿಂದಲೇ ಆರೋಪಿಗಳು ದಂಧೆ ಮುಂದುವರಿಸಿದ್ದರು. ದಂಧೆಯಿಂದ ಕೋಟಿಗಟ್ಟಲೇ ಹಣ ಸಂಪಾದನೆ ಮಾಡುತ್ತಿದ್ದ ಆರೋಪಿಗಳು
ನಟನೆಯಿಂದ ದೂರ ಉಳಿದಿದ್ದರು. ಬಳಿಕ, ರಾಘವೇಂದ್ರನ ಜತೆ ನಿರಂತರ ಸಂಪರ್ಕ ಹೊಂದಿ, ಆತ ಸೂಚಿಸಿದ ವ್ಯಕ್ತಿಗಳ ಜತೆ ಹೋಗುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಚಿವರಿಗೆ 10 ಕೋಟಿಗೆ ಬೇಡಿಕೆ ಇಟ್ಟಿದ್ದು, ನಿರಂತರ ವಾಗಿ ಕರೆ ಮಾಡಿ ತೊಂದರೆ ಕೊಡುತ್ತಿದ್ದರು. ಅದರಿಂದ ಬೇಸತ್ತ ಮಾಜಿ ಸಚಿವರು, ಆರೋಪಿಗಳ ಹತ್ಯೆಗೆ ಸುಪಾರಿ ಕೊಟ್ಟಿದ್ದರು. ಈ ಸಂಬಂಧ ಕೆಲ ಯವಕರು ರಾಘವೇಂದ್ರ ಮತ್ತು ಆತನ ಸ್ನೇಹಿತೆ ಹತ್ಯೆಗೆ ಹುಡುಕಾಟ ನಡೆಸುತ್ತಿದ್ದರು. ಈ ಆರೋಪಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದ ಗದಗ ಮತ್ತು ಹುಬ್ಬಳ್ಳಿ ಯುವಕರನ್ನು ಹುಡುಕಾಡುವಾಗ ಹುಬ್ಬಳ್ಳಿ ಪೊಲೀಸರು ಸುಪಾರಿ ಹಂತಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ.
ಕೂಡಲೇ ಎಚ್ಚೆತ್ತ ಪೊಲೀಸರು ಆ ಮಾಜಿ ಸಚಿವರು ಹಾಗೂ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ರಾಜ್ಯದ ಪ್ರಭಾವಿ ಸಚಿವರ ಸೂಚನೆ ಮೇರೆಗೆ ಬೆಂಗಳೂರಿನ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಶಾಸಕರನ್ನು ಸೇರಿ ಹತ್ತು ಮಂದಿಯನ್ನು ಖೆಡ್ಡಾಗೆ ಕೆಡವಲು ರಾಘವೇಂದ್ರ ತನ್ನ ಗೆಳತಿಯನ್ನು ಬಳಸಿಕೊಳ್ಳಲು ಮುಂದಾಗಿದ್ದ. ಆರಂಭ ದಲ್ಲಿ ಆಕೆ ಹಿಂದೇಟು ಹಾಕಿದ್ದಳು. ಆದರೆ, ಹಣದಾಸೆಗೆ ಸ್ನೇಹಿತನಿಗೆ ಸಹಕಾರ ನೀಡಿದ್ದಳು. ಈಕೆ ಹಾಗೂ ಆಕೆಯ ಸ್ನೇಹಿತೆ ಕಿರುತೆರೆಗಾಗಿ ತೆಗೆಸಿದ್ದ
ಫೋಟೋಗಳನ್ನು ಬಳಸಿ ಪ್ರಭಾವಿ ವ್ಯಕ್ತಿಗಳನ್ನು ಬಲೆಗೆ ಬೀಳಿಸಲು ರಾಘವೇಂದ್ರ ಸಂಚು ರೂಪಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Related Articles
ಕಾಲೇಜು ಯುವತಿಯರ ಹೆಸರಿನಲ್ಲಿ ಹುಡುಗಿಯರನ್ನು ರಘು ತಯಾರು ಮಾಡುತ್ತಿದ್ದ. ಅದೇ ಯುವತಿಯರು ಶಾಸಕರ ಬಳಿ ತೆರಳಿ ಅಧ್ಯಯನ ಮಾಡುತ್ತಿದ್ದೇವೆ. ವಾಸ್ತವ್ಯಕ್ಕೆ ಸ್ಥಳ ಬೇಕೆಂದು ಮನವಿ ಮಾಡಿ ಕೊಳ್ಳುತ್ತಿದ್ದರು. ಶಾಸಕರಿಗೆ ಹುಡುಗಿಯರ ನಂಬರ್ ಕೊಡಿಸಿ ಪರಿಚಯ ಮಾಡಿಸುತ್ತಿದ್ದ. ಅದನ್ನು ನಂಬಿದ ಶಾಸಕರ ನಂಬರ್ ಪಡೆದ ಯುವತಿ ಯರು ಪದೇ ಪದೇ ಕಾಲ್ ಮಾಡಿ ಶಾಸಕರು, ಮಾಜಿ ಸಚಿವರರನ್ನು ಖೆಡ್ಡಾಗೆ ಬೀಳಿಸಿಕೊಳ್ಳುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
Advertisement