Advertisement
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಮುಂಬೈನ ರಾಜಭವನದಲ್ಲಿ ಜಲ ಭೂಷಣ ಕಟ್ಟಡ ಮತ್ತು ಕ್ರಾಂತಿಕಾರಿಗಳ ಗ್ಯಾಲರಿಯನ್ನು ಉದ್ಘಾಟಿಸಿದರು. ಈ ಸಂದರ್ಭ ಮಹಾರಾಷ್ಟ್ರದ ರಾಜ್ಯಪಾಲಭಗತ್ ಸಿಂಗ್ ಕೋಶ್ಯಾರಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಉಪಸ್ಥಿತರಿದ್ದರು.
Related Articles
Advertisement
ಬಾಲಗಂಗಾಧರ ತಿಲಕ್, ಚಾಪೇಕರ್ ಸಹೋದರರು, ವಾಸುದೇವ್ ಬಲ್ವಂತ್ ಫಾಡ್ಕ್ ಮತ್ತು ಮೇಡಂ ಭಿಕಾಜಿ ಕಾಮಾ ಅವರ ಬಹುಮುಖ ಕೊಡುಗೆಯನ್ನು ಪ್ರಧಾನಮಂತ್ರಿ ಸ್ಮರಿಸಿದರು. ಸ್ವಾತಂತ್ರ್ಯ ಹೋರಾಟವು ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ವ್ಯಾಪಿಸಿದೆ ಎಂದ ಅವರು ಗದರ್ ಪಾರ್ಟಿ, ನೇತಾಜಿ ನೇತೃತ್ವದ ಆಜಾದ್ ಹಿಂದ್ ಫೌಜ್ ಮತ್ತು ಇಂಡಿಯಾ ಹೌಸ್ ಆಫ್ ಶ್ಯಾಮ್ಜಿ ಕೃಷ್ಣ ವರ್ಮಾ ಸ್ವಾತಂತ್ರ್ಯ ಹೋರಾಟದ ಜಾಗತಿಕ ಮಟ್ಟದ ಉದಾಹರಣೆಗಳಾಗಿವೆ. “ಸ್ಥಳೀಯದಿಂದ ಜಾಗತಿಕ ಮಟ್ಟಕ್ಕೆ ಈ ಮನೋಭಾವವು ನಮ್ಮ ”ಆತ್ಮನಿರ್ಭರ್ ಭಾರತ್” ಅಭಿಯಾನದ ಆಧಾರವಾಗಿದೆ” ಎಂದರು.
ಮುಂಬಯಿ ಕನಸಿನ ನಗರ, ಆದರೆ, ಮಹಾರಾಷ್ಟ್ರದಲ್ಲಿ ಇಂತಹ ಹಲವು ನಗರಗಳಿವೆ, ಅವುಗಳು 21ನೇ ಶತಮಾನದಲ್ಲಿ ದೇಶದ ಬೆಳವಣಿಗೆಯ ಕೇಂದ್ರಗಳಾಗಲಿವೆ ಎಂದರು. ಈ ಚಿಂತನೆಯಿಂದ ಒಂದೆಡೆ ಮುಂಬೈನ ಮೂಲಸೌಕರ್ಯವನ್ನು ಆಧುನೀಕರಣಗೊಳಿಸಲಾಗುತ್ತಿದೆ ಮತ್ತು ಅದೇ ಸಮಯದಲ್ಲಿ ಇತರ ನಗರಗಳಲ್ಲಿಯೂ ಆಧುನಿಕ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ ಎಂದರು.