ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿರುವ ಸರ್ಕಾರದ ಹಾಗೂ ಜನರ ಖಾಸಗಿ ಮಾಹಿತಿಗಳನ್ನು ಸಂರಕ್ಷಿಸುವುದು ಸರ್ಕಾರಕ್ಕೆ ಅತ್ಯಂತ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಜನರ ಖಾಸಗಿ ಮಾಹಿತಿಗಳನ್ನು ರಕ್ಷಿಸುವುದರೊಂದಿಗೆ ಸ್ವದೇಶಿ ನಿರ್ಮಿತ ತಂತ್ರಜ್ಞಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ‘ಸಂದೇಶ್ ‘ಎಂಬ ಸರ್ಕಾರಿ ಮೆಸೇಜಿಂಗ್ ಆ್ಯಪ್ ಅನ್ನು ಬಿಡುಗಡೆ ಮಾಡಿಲು ಮುಂದಾಗಿದೆ.
ಈ ಕುರಿತಾಗಿ ಕಳೆದ ವರ್ಷವೇ ಯೋಜನೆಯನ್ನು ರೂಪಿಸಿರುವ ಸರ್ಕಾರ GIMS (Government Instant Messaging System) ಅನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದು, ಇದೀಗ ಈ ಆ್ಯಪ್ ಗೆ ‘ಸಂದೇಶ್’ ಎಂಬ ಹೆಸರಿಟ್ಟಿದೆ ಎನ್ನಲಾಗಿದೆ.
ವಿಶ್ವದ ಪ್ರಸಿದ್ಧ ಮೆಸೇಜಿಂಗ್ ಆ್ಯಪ್ ಆಗಿರುವ ವಾಟ್ಸ್ ಆ್ಯಪ್ ಒಳಗೊಂಡಂತೆ ಪ್ರಸ್ತುತ ಬಳಕೆಯಲ್ಲಿರುವ ಇತರೆ ಮೆಸೇಜಿಂಗ್ ಆ್ಯಪ್ ಗಳಿಗೆ ಪರ್ಯಾಯವಾಗಿ ಇದು ಕಾರ್ಯ ನಿರ್ವಹಿಸಲಿದ್ದು, ಇತರೆ ಎಲ್ಲಾ ಆ್ಯಪ್ ಗಳು ತನ್ನ ಬಳಕೆದಾರರಿಗೆ ಒದಗಿಸುವ ಎಲ್ಲಾ ವಿಧವಾದ ಸೌಲಭ್ಯಗಳನ್ನು ಇದು ಕೂಡಾ ನೀಡಲಿದೆ ಎನ್ನಲಾಗಿದೆ. ಈ ಆ್ಯಪ್ ಅನ್ನು ಕೇಂದ್ರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ದ ಅಡಿಯಲ್ಲಿ ಬರುವ NIC ರಾಷ್ಟ್ರೀಯ ಮಾಹಿತಿ ಕೇಂದ್ರವು ನಿರ್ವಹಣೆ ಮಾಡಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ನಿಮ್ಮ ಸರ್ಕಾರ ಇದ್ದಾಗ ಏನು ಮಂಡಕ್ಕಿ ತಿಂತಾ ಇದ್ರಾ ಸಿದ್ದರಾಮಯ್ಯನವರೇ..? ಈಶ್ವರಪ್ಪ
ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಬಳಕೆಗೆ ಅವಕಾಶ
ios ಹಾಗೂ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್ಗಳಲ್ಲಿ ಬಳಸಬಹುದಾದ ಈ ತಂತ್ರಜ್ಞಾನವನ್ನು ಪ್ರಸ್ತುತ ಪ್ರಯೋಗಾತ್ಮಕವಾಗಿ ಬಳಕೆ ಮಾಡಲಾಗುತ್ತಿದ್ದು, ಕೇವಲ ಕೆಲವೇ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ ಮತ್ತು ಇದನ್ನು ಬಳಸುವಾಗ LDAP ಸೈನ್ ಇನ್ ಹಾಗೂ ಸಂದೇಶ್ OTP ಯು ಅವಶ್ಯವಾಗಿ ಬೇಕಾಗಿದೆ ಎಂದು ತಿಳಿದು ಬಂದಿದೆ.