Advertisement

ಸೋಮಯಾಜಿ ಎಸ್ಟೇಟ್ಸ್‌ ‘ಎಸ್ಸೆಲ್‌ ಹೈಟ್ಸ್‌’ಇಂದು ಲೋಕಾರ್ಪಣೆ

12:20 AM Feb 09, 2019 | Team Udayavani |

ಮಂಗಳೂರು: ರಘುನಾಥ ಸೋಮಯಾಜಿ ನೇತೃತ್ವದ ಸೋಮಯಾಜಿ ಎಸ್ಟೇಟ್ಸ್‌ ನಗರದ ದೇರೇಬೈಲಿನಲ್ಲಿ ನಿರ್ಮಿಸಿರುವ ‘ಎಸ್ಸೆಲ್‌ ಹೈಟ್ಸ್‌’ ಫೆ. 9ರಂದು ಬೆಳಗ್ಗೆ 10.15ಕ್ಕೆ ಉದ್ಘಾಟನೆಗೊಳ್ಳಲಿದೆ.

Advertisement

ಸಂಸದ ನಳಿನ್‌ ಕುಮಾರ್‌ ಕಟೀಲು ಉದ್ಘಾಟಿಸಲಿದ್ದು, ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ದೇರೇಬೈಲ್‌ ಚರ್ಚಿನ ವಂ| ಆಸ್ಟಿನ್‌ ಪೀಟರ್‌ ಪೆರೆಸ್‌ ಆಶೀರ್ವಚನ ನೀಡುವರು. ಶಾಸಕ ಡಾ| ಭರತ್‌ ಶೆಟ್ಟಿ ಜಿಮ್‌ ಅನ್ನು, ಮೇಯರ್‌ ಭಾಸ್ಕರ ಕೆ. ಮಕ್ಕಳ ಪಾರ್ಕನ್ನು ಉದ್ಘಾಟಿಸುವರು. ವಸತಿ ಸಮುಚ್ಚಯದ ಪ್ರಥಮ ಮನೆಯ ಕೀಲಿಕೈಯನ್ನು ಮನಪಾ ಸಚೇತಕ ಶಶಿಧರ ಹೆಗ್ಡೆ ಮತ್ತು ವಾಣಿಜ್ಯ ಸಂಕೀರ್ಣದ ಪ್ರಥಮ ಕೀಲಿಕೈಯನ್ನು ಕಾರ್ಪೊರೇಟರ್‌ ರಾಜೇಶ್‌ ಹಸ್ತಾಂತರಿಸಲಿದ್ದಾರೆ.

ಅತ್ಯಾಧುನಿಕ ಸೌಕರ್ಯಗಳು: 12 ಮಹಡಿಗಳ ‘ಎಸ್ಸೆಲ್‌ ಹೈಟ್ಸ್‌’ನಲ್ಲಿ ಅನೇಕ ವಿಶೇಷ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ತಳಮಹಡಿ ಮತ್ತು ನೆಲಮಹಡಿಯಲ್ಲಿ 20ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿವೆ. ಮೊದಲ, ಎರಡನೇ ಮಹಡಿಯಲ್ಲಿ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ. 3ನೇ ಮಹಡಿಯಲ್ಲಿ ‘ಚಿಲ್ಡ್ರನ್‌ ಪಾರ್ಕ್‌’ ನಿರ್ಮಿಸಲಾಗಿದೆ. ಬಾವಿ ನೀರು, ಮನಪಾ ನೀರು ಪೂರೈಕೆ ಇದೆ. ಅಡುಗೆ ಅನಿಲ ಪೈಪ್‌ಲೈನ್‌ ಸೌಲಭ್ಯವಿದ್ದರೆ, ದಿನದ 24 ಗಂಟೆ ಕಾಲ ‘ಗ್ರೀನ್‌ ಫ್ರೆಂಡ್ಲಿ’ ಸೋಲಾರ್‌ ಬಿಸಿನೀರಿನ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next