Advertisement
ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಗಾಳಿಯಿಂದ ಉಂಟಾದ ಭೂ ಕುಸಿತ, ಪ್ರವಾಹದಿಂದ ಮನೆಗಳು, ಕಾಫಿ ತೋಟಗಳು, ಗದ್ದೆಗಳು ಜಲಾವೃತಗೊಂಡಿದ್ದು ಬೆಳೆಗಾರರು ಮತ್ತು ಕೃಷಿಕರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಪರಿಹಾರ ಕಾರ್ಯಗಳು ನಡೆದಿದ್ದರೂ, ಕೆಲವು ದಾಖಲಾತಿಗಳ ಬಗ್ಗೆ ತಾಂತ್ರಿಕ ತೊಂದರೆ ಎದುರಾದ ಹಿನ್ನೆಲೆಯಲ್ಲಿ ಅರ್ಹ ನಿರಾಶ್ರಿತರಿಗೆ ಇದೂವರೆಗೆ ಪರಿಹಾರ ದೊರೆತಿಲ್ಲ. ಈ ನಿಟ್ಟಿನಲ್ಲಿ ಇಲಾಖೆಗಳು ಕೂಡ ಕೆಲವು ಮಾನದಂಡವನ್ನು ಸಡಿಲಗೊಳಿಸಿ ಪ್ರತಿಯೋರ್ವ ನಿರಾಶ್ರಿತರಿಗೂ ಸೌಲಭ್ಯಗಳು ದೊರಕಿಸುವಂತೆ ಪ್ರಯತ್ನಿಸಬೇಕು. ಕೃಷಿ ಇಲಾಖೆಯ ಮೂಲಕ ಕೃಷಿ ಹೊಂಡ ತೆಗೆಯಲು ಮತ್ತು ರೈತರಿಗೆ ಪಂಪ್‌ಸೆಟ್ ಗಳನ್ನು ರಿಯಾಯಿತಿ ದರದಲ್ಲಿ ನೀಡಲು ಮುಂದಾಗಬೇಕು ಎಂದರು. ಕಲ್ಲಡಿ, ಹಟ್ಟಿಹೊಳೆ, ಗರಗಂದೂರು ಗ್ರಾಮಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಲವು ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ನೀಡಿಲ್ಲ .ತಕ್ಷಣವೇ ಇದರ ಬಗ್ಗೆ ಗಮನ ಹರಿಸಬೇಕೆಂದು ಸೆಸ್ಕ್ ಕಾರ್ಯ ನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು.
Related Articles
Advertisement
ತಾಲ್ಲೂಕಿನ ಸುಂಠಿಕೊಪ್ಪ, ಗರಗಂದೂರು ಕಾಲೇಜು ಸಮೀಪ, ಗುಡ್ಡೆ ಹೊಸೂರು ರಾಣಿಗೇಟ್, ಶನಿವಾರಸಂತೆ, ಸೋಮವಾರಪೇಟೆ ಪದವಿ ಪೂರ್ವ ಕಾಲೇಜು ಆವರಣದ ಬಳಿ ಗಾಂಜಾ ಮಾರಾಟ ನಡೆಯುತ್ತಿದೆ. ಸೋಮವಾರಪೇಟೆ ತಾಲೂಕಿನ ಕೆಲವು ಪಟ್ಟಣ ಪ್ರದೇಶದ ರಿಕ್ರಿಯೇಶನ್ ಕ್ಲಬ್ ನಲ್ಲಿ ಅನಧಿಕೃತ ಇಸ್ಪೀಟ್ ಅಡ್ಡೆ ಕಾರ್ಯನಿರ್ವಹಿಸುತ್ತದೆ. ಕೆಲವು ಮನೆಗಳಲ್ಲಿ ಈ ದಂಧೆಯನ್ನು ಪ್ರಾರಂಭಿಸಲಾಗಿದೆ. ತಕ್ಷಣವೇ ಇದನ್ನು ಪತ್ತೆ ಹಚ್ಚಿ ವರದಿ ನೀಡಬೇಕೆಂದು ಸೋಮವಾರಪೇಟೆ ವೃತ್ತ ನೀರೀಕ್ಷಕ ನಂಜುಂಡೇಗೌಡ ಮತ್ತು ಕುಶಾಲ ನಗರ ವೃತ್ತ ನಿರೀಕ್ಷಕ ಕ್ಯಾತೆಗೌಡರಿಗೆ ಶಾಸಕರು ಸೂಚನೆ ನೀಡಿದರು.
ವೇದಿಕೆಯಲ್ಲಿ ತಾ. ಪಂ. ಅಧ್ಯಕ್ಷ. ಪುಷ್ಪರಾಜೇಶ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ತಂಗಮ್ಮ, ತಾ.ಪಂ. ಪ್ರಭಾರ ಕಾರ್ಯನಿರ್ವಾಹಣಾಧಿಕಾರಿ ಸುನಿಲ್ ಉಪಸ್ಥಿತರಿದ್ದರು.