ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2024-25ರ ಮೊದಲಾರ್ಧ ವಾರ್ಷಿಕ ಅವಧಿ ಹಾಗೂ ಎರಡನೇ ತ್ರೈಮಾಸಿಕ ಅವಧಿಯ ಪ್ರಯಾಣಿಕರ ಸಂಖ್ಯೆ ಹಾಗೂ ವಿಮಾನಯಾನದಲ್ಲಿ ಉತ್ತಮ ಪ್ರಗತಿ ದಾಖಲಿಸಿದೆ.
ದೇಶೀಯ ಹಾಗೂ ಅಂತಾರಾಷ್ಟ್ರೀಯ ಬೆಳವಣಿಗೆಗಳಿಗೆ ಹೊಂದಿಕೊಂಡಂತೆ ಇಲ್ಲೂ ಏರಿಕೆಯಾಗಿದೆ, ಕೋವಿಡ್‌ನಿಂದಾದ ತಾತ್ಕಾಲಿಕ ಹಿನ್ನಡೆಯ ಬಳಿಕ ಕ್ಷೇತ್ರ ಉತ್ತಮ ಬೆಳವಣಿಗೆ ಕಂಡಿದೆ.
2025ನೇ ಹಣಕಾಸು ವರ್ಷದ ಮೊದಲ ಅರ್ಧವಾರ್ಷಿಕ ಅವಧಿಯಲ್ಲಿ ವಿಮಾನ ನಿಲ್ದಾಣವು
11,21,410 ಪ್ರಯಾಣಿಕರನ್ನು ನಿರ್ವಹಿಸಿದೆ, ಹಿಂದಿನ ಸಾಲಿನ ಇದೇ ಅವಧಿಯಲ್ಲಿ
9,46,233 ಪ್ರಯಾಣಿಕರನ್ನು ನಿರ್ವಹಿಸಲಾಗಿದ್ದು ಶೇ
18.5ರಷ್ಟು ಪ್ರಗತಿಯಾಗಿದೆ.
ಪ್ರಸ್ತುತ ವಿಮಾನ ನಿಲ್ದಾಣವು 6 ದೇಶೀಯ ಹಾಗೂ 8 ಮಧ್ಯ ಪ್ರಾಚ್ಯ ತಾಣಗಳಿಗೆ ವಾಯುಯಾನ ಸೇವೆ ನೀಡುತ್ತಿದೆ. ಆಗಸ್ಟ್ 15ರಂದು ಒಂದೇ ದಿನ
7402 ಪ್ರಯಾಣಿಕರನ್ನು ನಿರ್ವಹಿಸಲಾಗಿರುವುದು ಈ ಸಾಲಿನ ಇದುವರೆಗಿನ ಗರಿಷ್ಠ ಸಂಖ್ಯೆಯಾಗಿದೆ. ಮುಖ್ಯವಾಗಿ ಬೆಂಗಳೂರು ಹಾಗೂ ಮುಂಬೈಗೆ ಹೆಚ್ಚಿನ ಪ್ರಯಾಣಿಕರು ಸಂಚರಿಸಿದ್ದಾರೆ.
ಮಂಗಳೂರು ನಿಲ್ದಾಣವು ಮೊದಲ ಅರ್ಧವಾರ್ಷಿಕ ಅವಧಿಯಲ್ಲಿ
7830 ರಷ್ಟು ವಿಮಾನ ಹಾರಾಟ ದಾಖಲಿಸಿದೆ. ಹಿಂದಿನ ಸಾಲಿನ ಇದೇ ಅವಧಿಯಲ್ಲಿ ಇದು
6590 ಆಗಿತ್ತು.
2024-25ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ವಿಮಾನ ನಿಲ್ದಾಣವು
5,68,721 ಪ್ರಯಾಣಿಕರನ್ನು ನಿರ್ವಹಿಸಿದ್ದು ಶೇ
16.45 ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ವಿಮಾನ ಹಾರಾಟ ಸಂಖ್ಯೆ 4010ರಷ್ಟಿದ್ದು ಹಿಂದಿನ ಸಾಲಿನಿಂದ ಶೇ
17.38 ರಷ್ಟು ವೃದ್ಧಿಯಾಗಿದೆ.
ಸರಕು ಸಾಗಾಟದಲ್ಲೂ ಉತ್ತಮ ನಿರ್ವಹಣೆ ಕಂಡು ಬಂದಿದೆ, ಮೊದಲ ಅರ್ಧ ವಾರ್ಷಿಕ ಅವಧಿಯಲ್ಲಿ
2617.29 ಮೆಟ್ರಿಕ್ ಟನ್ ಸರಕು ನಿರ್ವಹಿಸಲಾಗಿದೆ.