Advertisement
ಬಾಳುRದ್ರುವಿನ ಡಿಪ್ಲೊಮಾ ಪದವೀಧರ ಶ್ರೀಕಾಂತ್ ಆಚಾರ್ಯ ಅವರು, ವಿನೂತನ ತಂತ್ರಜ್ಞಾನದ ಪ್ರಸ್ತಾವನೆಯನ್ನು ಸಿದ್ಧ ಪಡಿಸಿ, ಕೇಂದ್ರ ಜಲಮಂಡಳಿಗೆ ಕಳುಹಿಸಿದ್ದಾರೆ. ಇದಕ್ಕೆ ಮೆಚ್ಚುಗೆ ಬಂದಿದ್ದು, ಕೇಂದ್ರ ವಿಜ್ಞಾನ-ತಂತ್ರಜ್ಞಾನ ಇಲಾಖೆಗೆ ರವಾನೆಯಾಗಿದೆ.
ಸಮುದ್ರದಲ್ಲಿ ಸುಮಾರು 500-1,000 ಮೀಟರ್‌ಗೂ ದೊಡ್ಡ ಡಿಶ್ ಆ್ಯಂಟೆನಾ ಮಾದರಿ ಪ್ಯಾನೆಲ್‌ಗಳನ್ನು ನಿರ್ಮಿಸಿ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವುದು. ಬಳಿಕ ಅದನ್ನು ಶುದ್ಧೀಕರಿಸಿ ಕುಡಿವ ನೀರಾಗಿ ಬಳಸಿಕೊಳ್ಳಬಹುದು. ಇದರೊಂದಿಗೆ ಆ್ಯಂಟೆನಾ ಮೇಲ್ಭಾಗದಲ್ಲಿ ಸೌರ ಫಲಕವನ್ನು ಅಳವಡಿಸಿದರೆ, ಇದರಿಂದ ದೊಡ್ಡ ಮಟ್ಟದಲ್ಲಿ ಸೌರ ವಿದ್ಯುತ್ ಕೂಡ ಉತ್ಪಾದಿಸಬಹುದು. ದೇಶಾದ್ಯಂತ ಈ ರೀತಿಯ ಯೋಜನೆ ಕೈಗೊಂಡರೆ, ನೀರು ಹಾಗೂ ಸೋಲಾರ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಸಾಧ್ಯ ಎನ್ನುವುದು ಯೋಜನೆಯ ಸಾರಾಂಶ.
ಕೇಂದ್ರ ಜಲಮಂಡಳಿ ಪ್ರಶಂಸೆ
ಯೋಜನೆ ಬಗ್ಗೆ ಅಧ್ಯಯನ ಬಳಿಕ ನೀಲಿ ನಕ್ಷೆಯನ್ನು ಶ್ರೀಕಾಂತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಗೆ ರವಾನಿಸಿದ್ದರು. ಅದನ್ನು ಜಲಮಂಡಳಿಗೆ ಸಲ್ಲಿಸುವಂತೆ ಉತ್ತರ ಬಂದಿದ್ದು, ಹಾಗೆ ಅಲ್ಲಿಗೆ ಕಳಿಸಿದ್ದರು. ಯೋಜನೆ ಬಗ್ಗೆ ಜಲಮಂಡಳಿ ಪ್ರಶಂಸೆ ವ್ಯಕ್ತಪಡಿಸಿದ್ದು, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಅದನ್ನು ಕಳುಹಿಸಲಾಗಿದೆ. ನೈಸರ್ಗಿಕ ವಿಕೋಪದಿಂದ ರಕ್ಷಣೆ
ಸಮುದ್ರದಲ್ಲಿ ಭದ್ರ ಅಡಿಪಾಯ ಹಾಕಿ ಪ್ಯಾನೆಲ್‌ಗಳನ್ನು ನಿರ್ಮಿಸುವುದರಿಂದ ಮಳೆಗಾಲದಲ್ಲಿ ಕಡಲ್ಕೊರೆತ ತಡೆಗಟ್ಟಲು ಸಹಾಯವಾಗುತ್ತದೆ. ಇದರೊಂದಿಗೆ ಮೀನುಗಾರಿಕೆ ದ್ವೀಪಸ್ತಂಭವಾಗಿ, ಕರಾವಳಿ ಕಾವಲಿಗೂ ಅನುಕೂಲವಾಗುವಂತೆ ಮಾರ್ಪಡಿಸಿಕೊಳ್ಳಬಹುದು ಎನ್ನಲಾಗಿದೆ.
Related Articles
ನಿರ್ಮಾಣ ಯಾಕೆ?
ಭೂಮಿಯ ಮೇಲೆ ನಿರ್ಮಿಸಿದರೆ ಜಾಗದ ಲಭ್ಯತೆ, ಕಾನೂನು ತೊಡಕುಗಳು ಬರಬಹುದು. ಸಮುದ್ರದಲ್ಲಿ ಸೂರ್ಯನ ಶಾಖ ಅಧಿಕ. ಇನ್ನು ಮಳೆಗಾಲದಲ್ಲಿ ನೀರು ಸಮುದ್ರಕ್ಕೆ ಬೀಳುವ ಮೊದಲು ಶೇಖರಿಸುವುದರಿಂದ ಶುದ್ಧ ನೀರು ಲಭ್ಯ. ಇದರ ಶುದ್ಧೀಕರಣವೂ ಸುಲಭ. ಈ ಕಾರಣಗಳಿಂದ ಸಮುದ್ರವೇ ಸೂಕ್ತ. ಸರಕಾರ ಸ್ಪಂದಿಸಿದರೆ ಇದನ್ನು ಸಾವಿರಾರು ಮನೆಗಳಿಗೆ ಶುದ್ಧ ನೀರು, ವಿದ್ಯುತ್ ನೀಡುವ ಯೋಜನೆಯನ್ನಾಗಿಸಬಹುದು ಎನ್ನುತ್ತಾರೆ ಶ್ರೀಕಾಂತ್.
Advertisement
ಕ್ರಾಂತಿ ಮೂಡಿಸುವ ಹಂಬಲಕುಡಿಯುವ ನೀರು, ವಿದ್ಯುತ್ ಸಮಸ್ಯೆ ಕುರಿತು ಆಲೋಚಿಸುವಾಗ ಈ ಆಲೋಚನೆ ಹೊಳೆಯಿತು. ಇದಕ್ಕೆ ಪೂರಕವಾದ ನೀಲನಕ್ಷೆ ಸಿದ್ಧಪಡಿಸಿ ಜಲಮಂಡಳಿಗೆ ಕಳುಹಿಸಿದ್ದೆ. ಅಲ್ಲಿಂದ ಪ್ರಶಂಸೆ ವ್ಯಕ್ತವಾಗಿರುವುದು ಖುಷಿಯಾಗಿದೆ. ಮುಂದೆ ಇದೊಂದು ದೊಡ್ಡ ಯೋಜನೆಯಾಗಿ ಕ್ರಾಂತಿ ಮೂಡಿಸಬೇಕು ಎನ್ನುವ ಆಸೆ ಇದೆ.
-ಶ್ರೀಕಾಂತ್ ಆಚಾರ್ಯ, ಬಾಳುRದ್ರು – ರಾಜೇಶ ಗಾಣಿಗ ಅಚ್ಲಾಡಿ