Advertisement
ಜಿಲ್ಲೆಯಲ್ಲಿ ಬಾಳೆ, ಅನಾನಸು, ಕಲ್ಲಂಗಡಿ, ಕರಬೂಜ ಬೆಳೆಗಳಿಗೆ ಪರಿಹಾರ ನೀಡಲು ಅವಕಾಶ ಕಲ್ಲಿಸಲಾಗಿರುತ್ತದೆ. ಅನಾನಸು ಬೆಳೆಗೆ ಸಂಬಂಧಿಸಿದಂತೆ 2019-20ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಬೆಳೆ ಸಮೀಕ್ಷೆಯ ಅನುಗುಣವಾಗಿ ಪರಿಹಾರವನ್ನು ವಿತರಿಸಲಾಗುವುದು. ಆಯ್ಕೆಯಾಗುವ ರೈತರ ಪಟ್ಟಿಯನ್ನು ತೋಟಗಾರಿಕೆ ಇಲಾಖೆಯ ತಾಲೂಕು ಕಚೇರಿ, ತಹಶೀಲ್ದಾರರ ಕಚೇರಿ, ರೈತ ಸಂಪರ್ಕ ಕೇಂದ್ರ ಹಾಗೂ ಸಂಬಂಧಿಸಿದ ಗ್ರಾ.ಪಂ.ಗಳಲ್ಲಿ ಪ್ರಕಟಿಸಲಾಗುವುದು.
2020ನೇ ಮಾರ್ಚ್ 2ನೇ ವಾರದ ಅನಂತರ ಕಟಾವಿಗೆ ಬಂದಿರುವ ಫಸಲಿಗೆ ಮಾತ್ರ ಪರಿಹಾರಧನವನ್ನು ವಿತರಿಸಲಾಗುವುದು. ಈ ಬಗ್ಗೆ ರೈತರು ಸ್ವಯಂ ದೃಢೀಕರಣ/ಮುಚ್ಚಳಿಕೆ ನೀಡಬೇಕು. ಪರಿಹಾರ ಪಾವತಿಸುವ ರೈತರ ಹೆಸರಿನಲ್ಲಿ ಜಮೀನು ಹೊಂದಿರತಕ್ಕದ್ದು. ಜಂಟಿ ಖಾತೆಗಳಾಗಿದ್ದಲ್ಲಿ ಇತರ ಖಾತೆದಾರರ ಒಪ್ಪಿಗೆ ಪತ್ರ ಸಲ್ಲಿಸಬೇಕು. ಮಹಿಳಾ ಖಾತೆದಾರರಿದ್ದಲ್ಲಿ ಮಹಿಳೆಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕು. ಮಾರ್ಚ್ 4ನೇ ವಾರದ ಅನಂತರ ನಾಟಿ ಮಾಡಿದ ಕಲ್ಲಂಗಡಿ ಹಾಗೂ ಕರಬೂಜ ಬೆಳೆಗಳು ಪರಿಹಾರಕ್ಕೆ ಅರ್ಹವಿರುವುದಿಲ್ಲ ಎಂದು ಜಿÇÉಾ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
Related Articles
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು (ಜಿ.ಪಂ.), ಉಡುಪಿ: 0820-2531950 ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಉಡುಪಿ ತಾಲೂಕು: 0820-2522837 ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಕುಂದಾಪುರ ತಾಲೂಕು: 08254-230813 ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಕಾರ್ಕಳ ತಾಲೂಕು: 08258-230288 ಇವರನ್ನು ಸಂಪರ್ಕಿಸಬೇಕು.
Advertisement