ದೇವನಹಳ್ಳಿ: ಗ್ರಾಪಂ ಸ್ಥಳೀಯ ಸರ್ಕಾರವಾಗಿದ್ದು, ಜ್ವಲಂತ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವ ವಿಧಾನವಾಗಿದೆ. ಅಭಿವೃದ್ಧಿಯನ್ನು ಅತ್ಯಂತಪರಿಣಾಮಕಾರಿಯಾಗಿ ಮಾಡಿಕೊಳ್ಳಲು ನಮ್ಮದೇ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್ ತಿಳಿಸಿದರು.
ನಗರದ ವಿಜಯಪುರ ಸರ್ಕಲ್‌ನಲ್ಲಿರುವ ಭುವನಹಳ್ಳಿ ಮುನಿರಾಜು ಅವರ ಜಾಗದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕಸಬಾಹೋಬಳಿ ಅಣ್ಣೇಶ್ವರ ಗ್ರಾಪಂ ವ್ಯಾಪ್ತಿಯ ಗ್ರಾಪಂಚುನಾವಣೆಯ ಪೂರ್ವಭಾವಿ ಸಭೆಯಲ್ಲಿಮಾತನಾಡಿದರು. ಪ್ರಜಾಪ್ರಭುತ್ವದ ಬುನಾದಿಯಾಗಿರುವ ಗ್ರಾಪಂ ಚುನಾವಣೆಯಲ್ಲಿ ಯಾವುದೇಸಂಬಂಧಗಳನ್ನು ನೋಡದೆ, ಕಾಂಗ್ರೆಸ್‌ಅಭ್ಯರ್ಥಿಗಳನ್ನು ಕುಟುಂಬದವರಂತೆನೋಡಿಕೊಂಡುಗೆಲ್ಲಿಸಿಕೊಳ್ಳಬೇಕು.ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ ಸದೃಢವಾಗಿಬಲಗೊಳಿಸಬೇಕಾಗಿದೆ. ಪಕ್ಷ ಸಂಘಟನೆತಳಮಟ್ಟದಿಂದಲೇ ಆಗಬೇಕು. ಗ್ರಾಪಂಚುನಾವಣೆಯಲ್ಲಿಒಂದೊಂದುಮತವೂಪ್ರಾಮೂಖ್ಯತೆ ಇದೆ. ಕಾಂಗ್ರೆಸ್ ಸದೃಢಗೊಳಿಸಬೇಕಾದರೆ, ಪ್ರತಿಯೊಬ್ಬಕಾರ್ಯಕರ್ತ ನಿಷ್ಠವಂತರಾಗಿ ಕೆಲಸ ಮಾಡಬೇಕು. ಅಣ್ಣೇಶ್ವರ ಗ್ರಾಪಂಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಹೆಚ್ಚು ತೆರಿಗೆ ಹಣ ಬರುವುದರಿಂದಇಲ್ಲಿನ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿ ಗೊಳಿಸಿ ಮಾದರಿ ಗ್ರಾಮಗಳನ್ನಾಗಿ ಮಾಡಬಹುದು ಎಂದರು.
ಬ್ಲಾಕ್‌ಕಾಂಗ್ರೆಸ್ ಮಾಜಿ ಅಧ್ಯಕ್ಷ ಭುವನಹಳ್ಳಿ ಮುನಿರಾಜು ಮಾತನಾಡಿ, ನಮ್ಮ ವೈಯಕ್ತಿಕದ್ವೇಷಗಳನ್ನು ಬದಿಗಿಟ್ಟು, 19 ಸ್ಥಾನಗಳು ಗ್ರಾಪಂನಲ್ಲಿ ಬರಲಿದ್ದು, ಎಲ್ಲಾ ಸ್ಥಾನಗಳನ್ನು ಗೆಲ್ಲಲು ಶ್ರಮ ವಹಿಸಬೇಕು. ಮುಂದಿನ ತಾಲೂಕುಹಂತಕ್ಕೆ ಗ್ರಾಪಂ ಚುನಾವಣೆ ಭದ್ರಬುನಾದಿಯಾಗಿದೆ ಎಂದು ಹೇಳಿದರು.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಮಾತನಾಡಿ, ಎರಡು ಬಾರಿ ತಾಲೂಕಿನಲ್ಲಿ ಶಾಸಕರನ್ನು ಕಳೆದುಕೊಂಡು ಯಾವ ರೀತಿ ತೊಂದರೆಗಳು ಅನುಭವಿಸಿದ್ದೀರಿ ಎಂಬುವುದು ಎಲ್ಲರಿಗೂ ಮನದಟ್ಟಾಗಿದೆ. ಈ ಬಾರಿ ತಪ್ಪಾಗದಂತೆ ಆಗದಂತೆ ಎಲ್ಲಾ ರೀತಿಯಲ್ಲಿ ಕಾರ್ಯಕರ್ತರುಮುಖಂಡರು ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಲು ಸಜ್ಜಾಗಬೇಕು ಎಂದರು.
ಅಣ್ಣೇಶ್ವರಗ್ರಾಪಂ ಮಾಜಿ ಅಧ್ಯಕ್ಷ ಎ.ಚಂದ್ರಶೇಖರ್ ಮಾತನಾಡಿ, ಸ್ವ-ಪ್ರತಿಷ್ಠೆಗಳನ್ನು ಬದಿಗಿಡಬೇಕು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತೆರಿಗೆ ಅನುದಾನ ಹೆಚ್ಚು ಬರುತ್ತದೆ. ಈ ಹಿಂದೆ 5 ವರ್ಷ ಜೆಡಿಎಸ್ ಬೆಂಬಲಿತರು ಯಾವ ರೀತಿ ಅಭಿವೃದ್ಧಿ ಪಡಿಸಿದ್ದಾರೆ ಎಂಬುವುದು ಜನರಿಗೆ ಮನದಟ್ಟಾಗಿದೆ. 5 ವರ್ಷ ಯಾವುದೇ ಅಭಿವೃದ್ಧಿ ಕೆಲಸಕಾರ್ಯಗಳು ಆಗಿಲ್ಲ ಎಂದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಸಬಾ ಹೋಬಳಿ ಅಧ್ಯಕ್ಷ ಗೋಪಾಲಕೃಷ್ಣ, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಪುರುಷೋತ್ತಮ್ ಕುಮಾರ್, ಕೆಪಿಸಿಸಿ ಸದಸ್ಯ ರಾಮಚಂದ್ರಪ್ಪ, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದಅಧ್ಯಕ್ಷ ಎಂ.ಎನ್.ರಾಜಣ್ಣ, ಮುಖಂಡರಾದ ನಂಜೇಗೌಡ,ವೆಂಕಟೇಶ್,ಶಶಿಕುಮಾರ್,ಭುವನಹಳ್ಳಿ ಆನಂದ್ ಇತರರಿದ್ದರು.