ಬೆಂಗಳೂರು: ನಗರದಲ್ಲಿ ಸಮರ್ಪಕ ಘನತ್ಯಾಜ್ಯ ನಿರ್ವಹಣೆಗಾಗಿ ಪ್ರತಿ 2ವಾರ್ಡ್‌ಗಳಿಗೊಂದು ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸುವ ಗುರಿಯಿದ್ದು, ಈ ಪೈಕಿ ಮೊದಲ ಹಂತದಲ್ಲಿ 50 ಟ್ರಾನ್ಸ್‌ಫರ್ ಸ್ಟೇಷನ್ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತ ತಿಳಿಸಿದರು.
ರಾಧಾಕೃಷ್ಣ ವಾರ್ಡ್‌ನಲ್ಲಿ ಘನತ್ಯಾಜ್ಯ ವಿಲೇವಾರಿ ಸಂಬಂಧ ಸ್ಥಾಪಿಸಲಾಗಿರುವ ಟ್ರಾನ್ಸ್‌ಫರ್ ಸ್ಟೇಷನ್‌ಗೆ ಶುಕ್ರವಾರ ಭೇಟಿ ನೀಡಿ ಸ್ಟೇಷನ್‌ನಕಾರ್ಯನಿರ್ವಹಣೆ ಕುರಿತು ಪರಿಶೀಲಿಸಿ ಬಳಿಕ ಮಾತನಾಡಿದ ಅವರು, ಈ ಸ್ಟೇಷನ್‌ನ ಪ್ರಾಯೋಗಿಕ ಕಾರ್ಯಕ್ಕೆ ಚಾಲನೆ ನೀಡಿದ್ದು, ಕಾರ್ಯ ನಿರ್ವಹಣೆಯನ್ನು ಪರೀಶೀಲಿಸಲಾಗಿದೆ. ಈ ಟಾನ್ಸ್‌ಫರ್ ಸ್ಟೇಷನ್‌ನಲ್ಲಿ ಬಿಚ್ಚಿ ಜೋಡಿಸಬಹುದಾದ (ಪೋರ್ಟಬಲ್) ಕಾಂಪ್ಯಾಕ್ಟರ್ ಮೂಲಕ ತ್ಯಾಜ್ಯ ಸಂಗ್ರಹಿಸಿ ಘನೀಕರಿಸಿ, ಟ್ರಕ್ ಮೂಲಕ ವಿಲೇವಾರಿ ಮಾಡಲಾಗುವುದು ಎಂದರು.
ಪಾಲಿಕೆ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಮಾತನಾಡಿ,ಒಂದುಟ್ರಾನ್ಸ್‌ಫರ್‌ಸ್ಟೇಷನ್‌ನಿರ್ಮಾಣಕ್ಕೆ 1.32 ಕೋಟಿ ರೂ.ನಂತೆ 50ಕ್ಕೆ 75.99 ಕೋಟಿ ವೆಚ್ಚವಾಗಲಿದೆ. ಅದರಂತೆ ಒಂದು ಸ್ಟೇಷನ್ ನಿರ್ವ ಹಣೆಗೆ ಮಾಸಿಕ 4.4 ಲಕ್ಷ ರೂ. ಬೇಕಾಗುತ್ತದೆ.7 ವರ್ಷ ಗಳಿಗೆ 170.2 ಕೋಟಿ ರೂ. ಆಗಲಿದೆ. ಪ್ರತಿ 2 ವಾರ್ಡ್ ಗೆ ಒಂದು ಸ್ಟೇಷನ್ ನಿರ್ಮಿಸುವ ಗುರಿ ಇದೆ ಎಂದರು.
ಈಗಾಗಲೇ ದೊಮ್ಮಲೂರು, ಜೆ.ಸಿ. ರಸ್ತೆ, ವಸಂತಪುರ, ಕೊಟ್ಟಿಗೆಪಾಳ್ಯ, ಆರ್‌ಎಂವಿ ಬಡಾವಣೆ ಗಳಲ್ಲಿ ನಿರ್ಮಾಣ ಪೂರ್ಣಗೊಂಡಿದೆ. 15 ಸ್ಟೇಷನ್‌ಗಳ ಕಾಮಗಾರಿ ಪ್ರಗತಿಯಲ್ಲಿದ್ದು, 30 ಕಡೆ ಜಾಗ ಗುರುತಿಸುವ ಕೆಲಸ ನಡೆದಿದೆ. ರಾಧಾಕೃಷ್ಣ ವಾರ್ಡ್ ನಲ್ಲಿಯ ಸ್ಟೇಷನ್ ಅನ್ನು ಶೀಘ್ರವಾಗಿ ಉದ್ಘಾಟಿಸಲಾಗುವುದು. ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಈ ಸ್ಟೇಷನ್ ಗಳ ನಿರ್ಮಾಣ ಮಾಡಲಾಗುತ್ತಿದೆ. ಬಿಬಿಎಂಪಿಯಿಂದ ಸ್ಟೇಷನ್‌ಗಳ ನಿರ್ಮಾಣಕ್ಕಾಗುವ ಖರ್ಚಿನಲ್ಲಿ ಶೇ. 50 ಹಣ ಮತ್ತು ಜಾಗ ನೀಡಲಾಗುವುದು ಎಂದರು.
ಕಾರ್ಯನಿರ್ವಹಣೆ : ಟ್ರಾನ್ಸ್‌ಫರ್ ಸ್ಟೇಷನ್‌ನಲ್ಲಿ ತ್ಯಾಜ್ಯ ಸಂಗ್ರಹಿಸಲು ಪೋರ್ಟಬಲ್ ಕಾಂಪ್ಯಾಕ್ಟರ್ ಅಳವಡಿಸಲಾಗುತ್ತದೆ. ನಗರದಲ್ಲಿ ಆಟೋ, ಟಿಪ್ಪರ್‌ಗಳ ಮೂಲಕ ಸಂಗ್ರಹಿಸುವ 50 ಟನ್ ತ್ಯಾಜ್ಯವನ್ನು ಟ್ರಾನ್ಸ್‌ಫರ್ ಸ್ಟೇಷನ್ ನಲ್ಲಿಯ ಕಾಂಪ್ಯಾಕ್ಟರ್‌ಗೆ ಹಾಕಲಾಗುತ್ತದೆ. ಬಳಿಕ ಕಾಂಪ್ಯಾಕ್ಟರ್‌ನಲ್ಲಿ ಆ ತ್ಯಾಜ್ಯವನ್ನು ಕಾಂಪ್ರಸ್ ಮಾಡಲಾಗುತ್ತದೆ. ಇದರಿಂದ ತ್ಯಾಜ್ಯದಲ್ಲಿನ ಕೊಳಚೆ ನೀರು ಹೊರ ಬರಲಿದ್ದು, ಅದನ್ನು ಪೈಪ್ ಮೂಲಕ ಚರಂಡಿಗೆ ಹರಿಬಿಡಲಾಗುತ್ತದೆ. ಈ ಪ್ರಕ್ರಿಯೆಯಿಂದ 15 ಟನ್ ತ್ಯಾಜ್ಯ 7 ಟನ್‌ಗೆ ಇಳಿಯಲಿದೆ.ಹೀಗಾಗಿ ತ್ಯಾಜ್ಯ ಸುಲಭವಾಗಿ ವಿಲೇವಾರಿ ಮಾಡಬಹುದು.