Advertisement
ನಗರಕ್ಕೆ 6 ಕಿ.ಮೀ.ಸಮೀಪವಿರುವ ಇಡಗೂರು ರಸ್ತೆಯಲ್ಲಿ ಸುಮಾರು 10 ಎಕರೆಯಲ್ಲಿ ಪ್ರಾರಂಭಿಸಲಾಗಿದ್ದ ಘನತ್ಯಾಜ್ಯ ನಿರ್ವಹಣಾ ಘಟಕವನ್ನು ಈ ಹಿಂದೆ ಪುರಸಭೆ ಇದ್ದಾಗ ದೊಡ್ಡಬಳ್ಳಾಪುರದ ಗುತ್ತಿಗೆದಾರರೋರ್ವರಿಗೆ ಹೊರಗುತ್ತಿಗೆ ನೀಡಿ ಸಂಸ್ಕರಣಾ ಘಟಕದಲ್ಲಿ ಉತ್ಪಾದನೆಯಾಗುವ ಗೊಬ್ಬರ ಮಾರಿಕೊಂಡು ವಾರ್ಷಿಕ ನಿರ್ವಹಣೆ ಶುಲ್ಕ ನೀಡಬೇಕೆಂಬ ಷರತ್ತು ವಿಧಿಸಿ ಗುತ್ತಿಗೆ ನೀಡಲಾಗಿತ್ತು. ಆದರೆ ಗುತ್ತಿಗೆದಾರ ಕೇವಲ 3 ತಿಂಗಳಲ್ಲಿ ಘಟಕವನ್ನು ನಿರ್ವಹಿಸಲಾಗದೆ ಅರ್ಧಕ್ಕೆ ಬಿಟ್ಟು ಹೋಗಿದ್ದರಿಂದ ಅನಾಥವಾಗಿದ್ದು, ಇದಕ್ಕೆ ಬದಲಿ ವ್ಯವಸ್ಥೆ ಮಾಡಬೇಕಿದೆ.
Related Articles
Advertisement
ಕಳೆದ 3 ವರ್ಷದಿಂದ ಖಾಲಿ ಇದ್ದ ಪರಿಸರ ಅಭಿಯಂತರರ ಸ್ಥಾನಕ್ಕೆ ಈಗ ಹೊಸದಾಗಿ ವೈಶಾಲಿ ಎಂಬುವವರು ನಿಯುಕ್ತಿಯಾಗಿದ್ದು, ಈ ಘಟಕದ ಪ್ರಾರಂಭಕ್ಕೆ ಬೇಕಾದ ತಯಾರಿ ನಡೆಸುತ್ತಿದ್ದೇವೆ ಎಂದು ಪರಿಸರ ಅಭಿಯಂತರರಾದ ಮೈತ್ರಿ ಅವರು ತಿಳಿಸಿದ್ದಾರೆ.
ನಗರಸಭೆಗೆ ಅನುಗುಣವಾಗಿ ಸಿಬ್ಬಂದಿ ಇಲ್ಲ: ಗೌರಿಬಿದನೂರು ಪುರಸಭೆಯು ನಗರಸಭೆಯಾಗಿ ಮೇಲ್ದಜೇìಗೇರಿರುವುದರಿಂದ ಪ್ರಸ್ತುತ ನಗರದ ಜನಸಂಖ್ಯೆ 53 ಸಾವಿರ ಇದ್ದು ಪ್ರತಿದಿನದ ನಗರದ ನೈರ್ಮಲ್ಯ ನಿರ್ವಹಣೆ ಮಾಡಲು 82 ಜನ ಪೌರ ಕಾರ್ಮಿಕರಿರಬೇಕು. ಆದರೆ 36 ಗುತ್ತಿಗೆ ನೌಕರರು ಮತ್ತು 24 ಕಾಯಂ ನೌಕರರು ಮಾತ್ರ ಇದ್ದು,
ಅದರಲ್ಲಿ ನೇರ ನೇಮಕಾತಿಯ ಮೂಲಕ 12 ಜನ ನೇಮಕಗೊಂಡಿದ್ದು, ತ್ಯಾಜ್ಯ ನಿರ್ವಹಣಾ ಘಟಕ ನಿರ್ವಹಿಸಬೇಕಾದರೆ ಕನಿಷ್ಟ 10 ಜನ ಸಿಬ್ಬಂದಿ ಅವಶ್ಯಕತೆ ಇದೆ. ಸ್ವಚ್ಛಗಾರರು 82, ಮೇಸ್ತ್ರಿಗಳು 5 ಜನ ಅವಶ್ಯಕತೆ ಇದ್ದರೂ ಪ್ರಸ್ತುತ ಇರುವುದು ಕೇವಲ 52 ಸ್ವಚ್ಛಗಾರರು 2 ಮೇಸ್ತ್ರಿಗಳು ಮಾತ್ರ. 7 ಆಟೋ ಟಿಪ್ಪರ್‌ಗಳ ಅವಶ್ಯಕತೆಯಿದ್ದರೂ ಈಗ ಕೇವಲ 2 ಆಟೋ ಟಿಪ್ಪರ್‌ಗಳು ಮಾತ್ರವಿದ್ದು, 5 ಟಿಪ್ಪರ್‌ಗಳ ಅವಶ್ಯಕತೆ ಇದ್ದು ಅದು ಟೆಂಡರ್ ಪ್ರಕ್ರಿಯೆಯಲ್ಲಿದೆ.
ನಗರಸಭಾ ಕಚೇರಿ ಸಿಬ್ಬಂದಿ ಕೊರತೆ: ನಗರಸಭೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರು 3 ಜನ ಇರಬೇಕು, ಒಬ್ಬರಿದ್ದಾರೆ. ಕಿರಿಯ ಆರೋಗ್ಯ ನಿರೀಕ್ಷಕರು 3 ಜನ ಇರಬೇಕು, ಒಬ್ಬರಿದ್ದಾರೆ. ಪರಿಸರ ಅಭಿಯಂತರರು ಹುದ್ದೆಗೆ 3 ತಿಂಗಳ ಹಿಂದೆ ನಿಯೋಜನೆಗೊಂಡಿದ್ದಾರೆ. ಅಕೌಂಟೆಂಟ್ ಹುದ್ದೆಯೂ ಖಾಲಿ ಇದೆ.
ಮಲ ತ್ಯಾಜ್ಯ ವಸ್ತು ಸಂಸ್ಕರಣ ಘಟಕಕ್ಕೆ ತಯಾರಿ: ಯುಜಿಡಿ ಪದ್ಧತಿಯನ್ನು ಅಳವಡಿಸಲು ಹಲವಾರು ವರ್ಷಗಳಿಂದ ಪ್ರಯತ್ನ ಪಟ್ಟರೂ ಸಾಧ್ಯವಾಗದಿರುವುದರಿಂದ ಹಾಗೂ ರಾಜ್ಯ ಪೌರಾಡಳಿತ ನಿರ್ದೇಶನಾಲಯವು ಮಲ ವಿಲೇವಾರಿಗೆ ಬದಲಿ ಯೋಜನೆ ರೂಪಿಸಿದ್ದು, ಪ್ರಾಯೋಗಿಕವಾಗಿ ದೇವನಹಳ್ಳಿಯಲ್ಲಿ ಪ್ರಾರಂಭಿಸಿದೆ.
ಅದೇ ರೀತಿಯಲ್ಲಿ ಪ್ರತಿ ನಗರಸಭೆಯಲ್ಲಿ ಪ್ರಾರಂಭಿಸುವಂತೆ ಸೂಚಿಸಿದ್ದು, ಸಮಗ್ರ ಕ್ರಿಯಾ ಯೋಜನೆಯನ್ನು ತಯಾರು ಮಾಡಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಕಳುಹಿಸಿದ್ದು, ಅನುಮೋದನೆ ನಂತರ ನಗರೋತ್ಥಾನ ಯೋಜನೆಯಲ್ಲಿ ಅಂದಾಜು 2 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಪೌರಾಡಳಿತ ನಿರ್ದೇಶನಾಲಯಕ್ಕೆ ಕಳುಹಿಸಲಾಗುವುದು ಎಂದು ಪರಿಸರ ಅಭಿಯಂತರರಾದ ವೈಶಾಲಿ ತಿಳಿಸಿದ್ದಾರೆ.
4 ಕೋಟಿ ಹಣ ಬಿಡುಗಡೆ: ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ವಹಣೆಗಾಗಿ ತಯಾರಿಸಿ ಸಲ್ಲಿಸಲಾಗಿದ್ದ ಸಮಗ್ರ ಯೋಜನಾ ವರದಿಗೆ ಪೌರಾಡಳಿತ ನಿರ್ದೇಶನಾಲಯದಿಂದ ಅನುಮೋದನೆ ಸಿಕ್ಕಿದೆ ಎಂದು ಆರೋಗ್ಯ ತನಿಖಾಧಿಕಾರಿ ಸುರೇಶ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಶೇ.37, ರಾಜ್ಯ ಸರ್ಕಾರದ ಶೇ. 11.67 ಹಾಗೂ ನಗರಸಭೆ ಶೇ. 53ರಂತೆ ಹಣ ಭರಿಸುವ ವಿಧಾನದ ಮೂಲಕ ಒಟ್ಟು 4 ಕೋಟಿ ಹಣ ಬಿಡುಗಡೆಯಾಗಿದ್ದು, ಯಂತ್ರೋಪಕರಣ ಖರೀದಿಗೆ 1.93 ಕೋಟಿ, ಸಿವಿಲ್ ಕಾಮಗಾರಿಗೆ 2.9 ಕೋಟಿ ವೆಚ್ಚ ಮಾಡಬೇಕಾಗಿದ್ದು, ಈಗಾಗಲೇ ಹಂತ ಹಂತವಾಗಿ ಟೆಂಡರ್ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುತ್ತಿದೆ.
ಮತ್ತೆ ಒಣಕಸ ಹಸಿ ಕಸ ಬೇರೆ ಬೇರೆಯಾಗಿ ಸಂಗ್ರಹಿಸಲು 30.55 ಲಕ್ಷಗಳಲ್ಲಿ 19,100 ಕಸದ ಪ್ಲಾಸ್ಟಿಕ್ ಬುಟ್ಟಿಗಳನ್ನು ಖರೀದಿ ಪ್ರಕ್ರಿಯೆ ನಡೆಸಲಾಗಿದ್ದು, ಅದರಲ್ಲಿ 12,500 ಕಸದ ಬುಟ್ಟಿಗಳು ಸಿದ್ಧವಿದೆ ಎಂದು ಆರೋಗ್ಯ ತನಿಖಾಧಿಕಾರಿ ಸುರೇಶ್ ತಿಳಿಸಿದ್ದಾರೆ.
ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಪ್ರತಿದಿನ ನಡೆಯುತ್ತಿದೆ. ಕಸವೇ ಬೇರೆ, ಪ್ಲಾಸ್ಟಿಕ್ ಬೇರೆ ಮಾಡುವ ಹೊಸ ಯಂತ್ರ (ಬೇಯ್ಲಿಂಗ್ ಮಿಷನ್‌ನ್ನು) ಖರೀದಿಸಲಾಗಿದ್ದು ಹೊಸ ಸಿಬ್ಬಂದಿ, ಯಂತ್ರಗಳೊಂದಿಗೆ ಶೀಘ್ರದಲ್ಲಿಯೇ ಘಟಕ ಪ್ರಾರಂಭಿಸಲಾಗುವುದು.-ಉಮಾಕಾಂತ್, ಆಯುಕ್ತರು ನಗರಸಭೆ ಗೌರಿಬಿದನೂರು ಹೊಸ ಯಂತ್ರೋಪಕರಣಗಳನ್ನು ಖರೀದಿಸಿ ಹೊಸ ಸಿಬ್ಬಂದಿಯೊಂದಿಗೆ ಕಸವೇ ಬೇರೆ ಹಾಗೂ ಪ್ಲಾಸ್ಟಿಕ್ ವಸ್ತುವೇ ಬೇರೆ ಮಾಡುವ ಆಧುನಿಕ ಯಂತ್ರಗಳೊಂದಿಗೆ ಘಟಕ ಪ್ರಾರಂಭಿಸಲಾಗುವುದು. ಬೃಹತ್ ಗಾತ್ರದಲ್ಲಿ ಉತ್ಪಾದನೆಯಾಗುವ ಕಸ ಮತ್ತು ಪ್ಲಾಸ್ಟಿಕ್ ಉಂಡೆಗಳನ್ನು ಟೆಂಡರ್ ಮೂಲಕ ಹರಾಜು ಹಾಕಲಾಗುವುದು. ಇಲಾಖೆಯ ಮತ್ತು ಜಿಲ್ಲಾಧಿಕಾರಿಗಳ ಅನುಮೋದನೆಗಾಗಿ ಕಾಯಲಾಗುತ್ತಿದೆ.
-ವೈಶಾಲಿ, ಪರಿಸರ ಅಭಿಯಂತರರು, ಗೌರಿಬಿದನೂರು ನಗರಸಭೆ