Advertisement

ಘನ ತ್ಯಾಜ್ಯ ವಿಲೇವಾರಿ: ಕೇಂದ್ರಕ್ಕೆ ಸುಪ್ರೀಂ ಚಾಟಿ

08:55 AM Feb 07, 2018 | Harsha Rao |

ಹೊಸದಿಲ್ಲಿ: ಘನ ತ್ಯಾಜ್ಯ ವಿಲೇವಾರಿ ವಿಚಾರಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತಂತೆ ಕೇಂದ್ರ ಸರಕಾರ ಸಲ್ಲಿಸಿದ್ದ 845 ಪುಟಗಳ ಅಫಿದವಿತ್‌ ಅನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ. ಅಫಿದ‌ವಿತ್‌ನಲ್ಲಿ ಪೂರಕ ಮಾಹಿತಿ ಇಲ್ಲವೆಂದು ಆಕ್ಷೇಪಿಸಿರುವ ಸುಪ್ರೀಂ ಕೋರ್ಟ್‌, ಇಡೀ ಅಫಿದವಿತನ್ನು “ಕಸ’ ಎಂದು ಕರೆದಿದ್ದು, ನೀವು (ಕೇಂದ್ರ) ಹಾಕಿದ ಕಸ ತುಂಬಿಸಿಕೊಳ್ಳಲು ನಾವು (ಸುಪ್ರೀಂ ಕೋರ್ಟ್‌) “ತ್ಯಾಜ್ಯ ವಿಲೇವಾರಿ ವಾಹನಗಳಲ್ಲ’ ಎಂದು ತೀಕ್ಷ್ಣವಾಗಿ ನುಡಿದಿದೆ. 

Advertisement

ಅಫಿಡವಿಟ್‌ ತಿರಸ್ಕರಿಸುವುದರ ಜತೆಗೆ, 2016ರ ಘನ ತ್ಯಾಜ್ಯ ನಿರ್ವಹಣೆ ನಿಯಮಾವಳಿಗಳ ಪ್ರಕಾರ, ತ್ಯಾಜ್ಯ ವಿಲೇವಾರಿಗಾಗಿ ಕೇಂದ್ರಾಡಳಿತ ಹಾಗೂ ರಾಜ್ಯಗಳ ಮಟ್ಟದಲ್ಲಿ ಸಲಹಾ ಮಂಡಳಿಗಳನ್ನು ನೇಮಿಸಲಾಗಿರುವ ಹಾಗೂ ವಿಲೇವಾರಿಗಾಗಿ ಕೈಗೊಳ್ಳಲಾಗಿರುವ ಇತರ ಕ್ರಮಗಳ ಬಗ್ಗೆ ನಿರ್ದಿಷ್ಟ ಪಟ್ಟಿಯೊಂದನ್ನು ಮೂರು ವಾರಗಳೊಳಗೆ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ, ನ್ಯಾಯಮೂರ್ತಿಗಳಾದ ಮದನ್‌ ಬಿ ಲೋಕುರ್‌ ಹಾಗೂ ದೀಪಕ್‌ ಗುಪ್ತ್ ಅವರುಳ್ಳ ಪೀಠ ಆದೇಶಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next