Advertisement

ರಾಮಮಂದಿರ ನಿರ್ಮಾಣಕ್ಕೆ ಬೆಂಬಲ ಕೋರಿಕೆ; ಪೇಜಾವರ ಶ್ರೀಗಳಿಂದ ರಾಜ್ಯಪಾಲರ ಭೇಟಿ

11:40 PM Dec 16, 2020 | mahesh |

ಉಡುಪಿ/ಬೆಂಗಳೂರು: ಕರ್ನಾಟಕದ ರಾಜ್ಯಪಾಲ ವಾಜೂಭಾಯಿ ರುಡಾ ಭಾಯಿ ವಾಲಾರನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬುಧವಾರ ರಾಜಭವನದಲ್ಲಿ ಭೇಟಿಯಾಗಿ ಅಯೋಧ್ಯೆಯ ರಾಮ ಮಂದಿರ ಕಾರ್ಯಕ್ಕೆ ಸಮಸ್ತರ ಬೆಂಬಲ ಸಹಕಾರ ಅಪೇಕ್ಷಿಸಿ ನಾಡಿನ ಜನತೆಯ ಬೆಂಬಲಕ್ಕಾಗಿ ರಾಜ್ಯಪಾಲರಿಗೆ ಪತ್ರ ವನ್ನು ಹಸ್ತಾಂತರಿಸಿದರು.

Advertisement

ಶ್ರೀಗಳವರಿಗೆ ಗೌರವ ಅರ್ಪಿಸಿದ ರಾಜ್ಯಪಾಲರು ಸಮಾಲೋಚನೆ ನಡೆಸಿದರು. 1953ರಲ್ಲಿ ಆರೆಸ್ಸೆಸ್‌ ಎರಡನೆಯ ಸರಸಂಘಚಾಲಕ ಗುರೂಜಿ ಗೋಳ್ವಲ್ಕರ್‌ ಗೋಹತ್ಯಾ ನಿಷೇಧಕ್ಕೆ ಕರೆ ಕೊಟ್ಟಾಗ ತಾನಿನ್ನೂ ಯುವಕನಾಗಿದ್ದೆ. ಆಗ ಸ್ನೇಹಿತನನ್ನು ಕರೆದುಕೊಂಡು ಸೈಕಲ್‌ನಲ್ಲಿ ಗುಜರಾತಿನ ಮನೆ ಮನೆಗೆ ತೆರಳಿ ಸಹಿ ಸಂಗ್ರಹ ಮಾಡಿದ್ದನ್ನುಸ್ಮರಿಸಿದರು. ಅಯೋಧ್ಯೆ ಆಂದೋಲನದ ವಿವಿಧ ಹಂತಗಳಲ್ಲಿ ಪಾಲ್ಗೊಂಡದ್ದನ್ನು ಸ್ಮರಿಸಿದ ರಾಜ್ಯಪಾಲರು, ರಾಮ ಮಂದಿರ ನಿರ್ಮಾಣದ ಕಾರ್ಯದಲ್ಲಿ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಪೇಜಾವರ ಶ್ರೀಗಳು ರಾಜ್ಯಪಾಲರಿಗೆ ಶಾಲು ಹೊದೆಸಿ ಸ್ಮರಣಿಕೆ ನೀಡಿ ಆಶೀರ್ವದಿಸಿದರು. ವಿಹಿಂಪ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಕೇಶವ ಹೆಗಡೆ, ಕಾರ್ಯದರ್ಶಿಗಳಾದ ವಿಷ್ಣು ಆಚಾರ್ಯ, ಕೃಷ್ಣಮೂರ್ತಿ ಭಟ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next