ಕೊಳ್ಳೇಗಾಲ: ಕುಟುಂಬಸ್ಥರನ್ನು ನೋಡುವ ಸಲುವಾಗಿ ಯೋಧನೋರ್ವ ರಜೆಯ ಮೇಲೆ ಬಂದು ಮನೆ ಮುಂಭಾಗ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೆ.ಸುಬ್ರಮಣ್ಯ (44) ಮೃತ ಯೋಧ.
ಮೃತ ಪಶ್ಚಿಮಬಂಗಾಳದ ಬಿಎಸ್‌ಎಫ್ ಮುಖ್ಯ ಪೇದೆ ಕಳೆದ 23 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕುಟುಂಬಸ್ಥರನ್ನು ನೋಡಲು 2 ವಾರ ರಜೆಯ ಮೇಲೆ ಬಂದಿದ್ದರು. 24ರಂದು ಮನೆಯ ಮುಂದೆಯ ರಸ್ತೆಯ ಮೇಲೆ ಕಾಲುಜಾರಿ ಆಯತಪ್ಪಿ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಬಳಿಕ ನಗರದ ಜನನಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.
ಕುಟುಂಬಸ್ಥರು ನಗರ ಠಾಣೆಗೆ ದೂರು ಸಲ್ಲಿಸಿದ ಹಿನ್ನೆಲೆ ಪ್ರಕರಣ ದಾಖಲಿಸಿದ ಎಸ್‌ಐ ಚೇತನ್ ಸರ್ಕಾರಿ ಆಸ್ಪತ್ರೆ ವೈದ್ಯ ಡಾ.ರಾಜು ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ನೀಡಿದರು. ಪೊಲೀಸರು ಮೃತರ ನಿವಾಸಕ್ಕೆ ತೆರಳಿ ಗುಂಡು ಹಾರಿಸಿ ಸರ್ಕಾರಿ ಗೌರವ ಸಲ್ಲಿಸಿದರು. ಎಸ್‌ಐ ಚೇತನ್, ಶಿರಸ್ತೇದಾರ್ ಶ್ರೀನಿವಾಸ್, ರಾಜಸ್ವ ನಿರೀಕ್ಷಕ ನಿರಂಜನ್, ಪೊಲೀಸ್ ಸಿಬ್ಬಂದಿ ಇದ್ದರು.
ನಮ್ಮ ಸಂವಿಧಾನ ವಿಶ್ವಕ್ಕೆ ಮಾದರಿ: ನ್ಯಾಯಾಧೀಶೆ ಭಾರತಿ