ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ “ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ’ ಯನ್ನು ಘೋಷಿಸಿದ್ದಾರೆ. ಅಯೋಧ್ಯಾ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಮುಗಿಸಿ ದೆಹಲಿಗೆ ಮರಳಿದ ಕೂಡಲೇ, ಅವರು ಎಕ್ಸ್ ಖಾತೆ ಯಲ್ಲಿ ಈ ಘೋಷಣೆ ಮಾಡಿ ದ್ದಾರೆ. ದೇಶದ 1 ಕೋಟಿ ಜನರ ಮನೆಯ ಛಾವಣಿ ಮೇಲೆ ಸೌರ ಫಲಕಗಳನ್ನು ಅಳವಡಿಸುವುದೇ ಈ ಯೋಜನೆಯ ಉದ್ದೇಶ. ಇದು ಈಗಾಗಲೇ ಇರುವ ಸೌರಫಲಕ ಅಳವ ಡಿಕೆ ಯೋಜ ನೆಯ ಮುಂದುವರಿದ ಭಾಗವೋ ಅಥವಾ ಪೂರ್ಣ ಹೊಸ ಯೋಜನೆಯೋ ಎನ್ನು ವುದು ಇನ್ನೂ ಖಚಿತವಾಗಿಲ್ಲ.
ಮೋದಿ ಹೇಳಿದ್ದೇನು?
ಪ್ರಧಾನಿ ಸೂರ್ಯೋದಯ ಯೋಜನೆಯ ಬಗ್ಗೆ ಎಕ್ಸ್ ನಲ್ಲಿ ಮೋದಿ ಮಾಡಿರುವ ಟ್ವೀಟ್ ಹೀಗಿದೆ: “ಜಗತ್ತಿನ ಎಲ್ಲ ಭಕ್ತರು ಸೂರ್ಯ ವಂಶಿ ಶ್ರೀರಾಮನ ಬೆಳಕಿನಿಂದ ಶಕ್ತಿ ಯನ್ನು ಪಡೆಯು ತ್ತಾರೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿ ಷ್ಠಾಪನೆ ಯಾಗಿ ರುವ ಈ ದಿನ, ಭಾರತೀಯರು ತಮ್ಮ ಮನೆಯ ಛಾವಣಿ ಗಳ ಮೇಲೆ ತಮ್ಮದೇ ಸೌರ ಫಲಕಗಳನ್ನು ಹೊಂದಿರ ಬೇಕೆಂಬ ನನ್ನ ನಿರ್ಣಯ ಇನ್ನೂ ಗಟ್ಟಿ ಯಾಗಿದೆ. ಅಯೋಧ್ಯೆ ಯಿಂದ ಮರಳಿದ ಬಳಿಕ ನಾನು ತೆಗೆದು ಕೊಂಡಿರುವ ಮೊದಲ ನಿರ್ಣ ಯ ವೆಂದರೆ, ಸೂರ್ಯೋ ದಯ ಯೋಜನೆ ಯನ್ನು ಬಿಡುಗಡೆ ಮಾಡು ವುದು. ಇದು ಕೇವಲ ಬಡವರ ಮನೆಯ ವಿದ್ಯುತ್ ದರಗಳನ್ನು ಕಡಿಮೆ ಮಾಡುವುದು ಮಾತ್ರವಲ್ಲ, ಇಂಧನ ಕ್ಷೇತ್ರದಲ್ಲಿ ಭಾರತೀಯರನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ’
ಏನಿದು ಯೋಜನೆ?
1 ಕೋಟಿ ಮನೆಗಳ ಛಾವಣಿಗಳ ಮೇಲೆ ಸೌರಫಲಕಗಳನ್ನು ಅಳವಡಿಸುವ ಗುರಿ.
ಜನರ ಮೇಲಿನ ವಿದ್ಯುತ್ ದರ ಹೊರೆ ಯನ್ನು ತಗ್ಗಿಸುವುದು ಇದರ ಉದ್ದೇಶ.
ಇಂಧನ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿಸುವುದು ಇನ್ನೊಂದು ಗುರಿ.