Advertisement

ಸೆಲ್ಕೋ ಸೌರಶಕ್ತಿ ಬಳಸಿ ಮೊಬೈಲ್ ಕ್ಯಾಂಟೀನ್!

07:42 PM Nov 18, 2021 | Team Udayavani |

ಶಿರಸಿ : ಸಂಚಾರಿ ಕ್ಯಾಂಟೀನ್ ಗೆ ಸಂಜೆ ಆದರೆ ಬೆಳಕು ಹೇಗೆ ಎಂಬುದು ಚಿಂತೆ. ತಿಂಡಿ‌ ಸಿದ್ದತೆಗೆ ಮಿಕ್ಸರ್ ವಿದ್ಯುತ್ ಇಲ್ಲದೆ ಬಳಕೆ ಹೇಗೆ ಎಂಬುದು ಇನ್ನೊಂದು ತಲೆನೋವು.
ಆದರೆ, ಈ ಸಂಚಾರಿ ಕ್ಯಾಂಟೀನ್ ಗೆ ಇದಾವುದರ ತಲೆ ‌ನೋವಿಲ್ಲ!

Advertisement

ರಸ್ತೆ ಬದಿಯಲ್ಲಿ ನಿಲ್ಲುವ ಈ ಸಂಚಾರಿ ಕ್ಯಾಂಟೀನ್ ಗೆ ಬೇಕಾಗುವ ವಿದ್ಯುತ್ ಸೌರ ಶಕ್ತಿಗಳನ್ನು ಸೆಲ್ಕೋ ಸಂಸ್ಥೆ ಕಾನಸೂರು ‌ಮಹೇಶ ಅವರಿಗೆ ನೆರವಾಗಿ ಜೊತೆಯಾಗಿದೆ. ಸೆಲ್ಕೋ ಯಶಸ್ವಿಯಾಗಿದೆ .

ಎಂಟನೂರು ವ್ಯಾಟ್ಸ ಸಾಮರ್ಥ್ಯದ ಸೌರ ಫಲಕಗಳನ್ನು ವಾಹನದ ಮೇಲೆ ಅಳವಡಿಸಲಾಗಿದ್ದು, ಒಳಭಾಗದಲ್ಲಿ ಬ್ಯಾಟರಿ ,ಇನ್ವರ್ಟರ್ ಅಳವಡಿಸಲಾಗಿದೆ. ಇದರ ಮೂಲಕ ಮಿಕ್ಸರ್ ಮತ್ತು ಲೈಟುಗಳನ್ನು ಬಳಸಬಹುದಾಗಿದೆ. ಬೇಸಿಗೆ ಕಾಲದಲ್ಲಿ ತಿಂಡಿ ತಿನಿಸುಗಳ ಜೊತೆಗೆ ಹೆಚ್ಚಾಗಿ ತಂಪು ಪಾನೀಯ ಗಳನ್ನು ಗ್ರಾಹಕರು ಕೇಳುತ್ತಾರೆ. ಅದಕ್ಕಾಗಿ ನೂರು ಲೀಟರ್ ಸಾಮರ್ಥ್ಯದ ಸೋಲಾರ್ ರೆಫ್ರಿಜಿರೇಟರ್ ನ್ನು ಕೂಡ ಸೆಲ್ಕೋ ಇಲ್ಲಿ ಅಳವಡಿಸಿದೆ.

ಸುಮಾರು ಒಂದೂವರೆ ಲಕ್ಷ ಸೋಲಾರ್ ಘಟಕಕ್ಕೆ ಮತ್ತು ಎರಡೂವರೆ ಲಕ್ಷ ವಾಹನ ಮತ್ತು ಅದರ ಮಾರ್ಪಾಡಿಗೆ ತಗುಲಿದ್ದು, ಸೆಲ್ಕೋ ಒಂದೂವರೆ ಲಕ್ಷ ಸಹಕಾರ ನೀಡಿದೆ.

ಇದನ್ನೂ ಓದಿ : ಪ್ರಕಾಶ್ ಪಡುಕೋಣೆಗೆ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಜೀವಮಾನ ಸಾಧನೆ ಪ್ರಶಸ್ತಿ

Advertisement

ಗುರುವಾರ ಸೋಲಾರ ಸಂಚಾರಿ ಕ್ಯಾಂಟೀನಗೆ ಚಾಲನೆ ನೀಡಿದ ಸೆಲ್ಕೋ ದ ಏರಿಯಾ ಮ್ಯಾನೇಜರ್ ಮಂಜುನಾಥ್ ಭಾಗವತ್, ಕೋವಿಡ್ ಸಂದರ್ಭದಲ್ಲಿ ಅನೇಕ ಜನ ಒಂದು ವೃತ್ತಿಯಿಂದ ಇನ್ನೊಂದು ಹೊಸವೃತ್ತಿಯತ್ತ ಒಲವು ತೋರುತ್ತಿದ್ದಾರೆ. ಇಂಥವರಿಗೆ ಮಾದರಿಯಾಗಬಲ್ಲ ಸೌರ ಶಕ್ತಿಯ ಮೂಲಕ ಮಾಡುವ ಹೊಸ ಹೊಸ ಆವಿಷ್ಕಾರಗಳಿಗೆ ನೆರವಿಗೆ ಸೆಲ್ಕೋ ಸಹಕಾರ ನೀಡುತ್ತಿದೆ.

ಪರಿಸರಕ್ಕೆ ಹಾನಿ ಮಾಡದೇ , ಸ್ವಾವಲಂಬಿಯಾಗಿ ವಿದ್ಯುತ್ ತಯಾರಿಸುವುದು ಸೌರ ಶಕ್ತಿಯಿಂದ ಮಾತ್ರ ಸಾಧ್ಯ. ಅದರಲ್ಲೂ ಇಂತಹ ಸಂಚಾರಿ ವಾಹನಗಳಿಗೆ ವಿದ್ಯುತ್ ಅಳವಡಿಸುವುದು ಸಾಧ್ಯವಿಲ್ಲವಾದ್ದರಿಂದ ಸಾಕಷ್ಟು ಜನ ಪೆಟ್ರೋಲ್ ಡಿಸೇಲ್ ಗಳನ್ನೇ ಅವಲಂಬಿಸಿದ್ದಾರೆ. ಇದರಿಂದ ಅವರಿಗೆ ಬರುವ ಆದಾಯದಲ್ಲಿ ಅರ್ಧದಷ್ಟು ಇಂಧನಕ್ಕೆ ಖರ್ಚಾಗುತ್ತಿದೆ ಎಂದೂ ಸಮಸ್ಯೆ‌ ಕೂಡ ತಿಳಿಸಿದರು.

ಈ ವೇಳೆ ಸೆಲ್ಕೋ ದ ಶಾಖಾ ವ್ಯವಸ್ಥಾಪಕ ಸುಬ್ರಾಯ್ ಹೆಗಡೆ, ಮಾಲೀಕ ಮಹೇಶ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next