Advertisement

ಇಂದು ಈ ವರ್ಷದ ಕೊನೆಯ ಸೂರ್ಯ ಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಲಿದೆ

02:26 AM Dec 14, 2020 | sudhir |

ಹೊಸದಿಲ್ಲಿ: ಈ ವರ್ಷದ ಕೊನೆಯ ಸೂರ್ಯ ಗ್ರಹಣಕ್ಕೆ ಜಗತ್ತು ಇಂದು ಸಾಕ್ಷಿಯಾಗಲಿದೆ. ಗ್ರಹಣ ಕಾಲದಲ್ಲಿ ಸೂರ್ಯನು ಆಂಶಿಕವಾಗಿ ಮುಚ್ಚಿದಂತೆ ಕಾಣುವ ಕಾರಣ ಇದು ಖಂಡಗ್ರಾಸ ಸೂರ್ಯಗ್ರಹಣವಾಗಿದೆ. ಭಾರತದಲ್ಲಿ ಗ್ರಹಣ ದರ್ಶನವಾಗುವುದಿಲ್ಲ.

Advertisement

ಸೂರ್ಯಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಡಿ.14ರ ಸಂಜೆ 7 ಗಂಟೆ 3 ನಿಮಿಷಕ್ಕೆ ಆರಂಭವಾಗಿ ಮಧ್ಯರಾತ್ರಿ 12.23 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಸಂಜೆ 7 ಗಂಟೆ ಮೂರು ನಿಮಿಷಕ್ಕೆ ಆರಂಭವಾಗುವುದರಿಂದ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ನೈಋತ್ಯ ಆಫ್ರಿಕಾ, ದಕ್ಷಿಣ ಅಮೆರಿಕ ಹಾಗೂ ಪೆಸಿಫಿಕ್‌ ಮಹಾಸಾಗರದ ಕೆಲವು ಪ್ರದೇಶಗಳ ಜನರು ಸೂರ್ಯ ಗ್ರಹಣ ವೀಕ್ಷಿಸಲು ಸಾಧ್ಯವಾಗಲಿದೆ.

15 ದಿನಗಳಲ್ಲಿ ಚಂದ್ರ-ಸೂರ್ಯ ಗ್ರಹಣ: ಈ ವರ್ಷದ ಮೊದಲ ಸೂರ್ಯ ಗ್ರಹಣ ಜೂನ್‌ 21ರಂದು ಸಂಭವಿಸಿತ್ತು. ಮುಂದಿನ ಸೂರ್ಯ ಗ್ರಹಣವು 2021ರ ಜೂನ್‌ 10ರಂದು ನಡೆಯಲಿದೆ. ಕೋವಿಡ್‌ ಸಾಂಕ್ರಾಮಿಕದ ಈ ವರ್ಷದಲ್ಲಿ ನಾವು ನಾಲ್ಕು ಪೆನಂಬ್ರಲ್‌ ಚಂದ್ರ ಗ್ರಹಣಗಳಿಗೆ ಸಾಕ್ಷಿಯಾಗಿದ್ದೇವೆ. ನ.30ರಂದು ಈ ವರ್ಷದ ಕೊನೆಯ ಚಂದ್ರ ಗ್ರಹಣವಾಗಿತ್ತು. ಈಗ ಸೋಮವಾರ ಸೂರ್ಯಗ್ರಹಣ ಸಂಭವಿಸಲಿದ್ದು, 15 ದಿನಗಳೊಳಗೇ ಎರಡು ಗ್ರಹಣಗಳು ಸಂಭವಿಸಲಿರುವುದು ವಿಶೇಷ. ನಾಸಾದ ಪ್ರಕಾರ, ಒಂದು ವರ್ಷದಲ್ಲಿ ಗರಿಷ್ಠ ಐದು ಸೂರ್ಯಗ್ರಹಣಗಳು ಸಂಭವಿಸಬಹುದು(ಕನಿಷ್ಠ 2). ಒಂದೇ ವರ್ಷದಲ್ಲಿ ಐದು ಸೂರ್ಯ ಗ್ರಹಣಗಳು ಸಂಭವಿಸಿದ್ದು 1935ರಲ್ಲಿ, ಮತ್ತೆ ಈ ಖಗೋಳ ಘಟನೆ ನಡೆಯುವುದು 2206ರಲ್ಲಿ!

Advertisement

Udayavani is now on Telegram. Click here to join our channel and stay updated with the latest news.

Next