ಮಂಗಳೂರು: ನಭೋ ಮಂಡಲದಲ್ಲಿ ಇಂದು ಸೂರ್ಯಗ್ರಹಣ ಸಂಭವಿಸಿದೆ. ಇಂದು ಬೆಳಗ್ಗೆ 10 ಗಂಟೆ 04 ನಿಮಿಷಕ್ಕೆ ಗ್ರಹಣ ಪ್ರಾರಂಭವಾಗಿದ್ದು, ಮಧ್ಯಾಹ್ನ 1.22ಕ್ಕೆ ಮುಕ್ತಾಯಗೊಂಡಿದೆ. ಇದು ಖಂಡಗ್ರಾಸ ಗ್ರಹಣವಾಗಿದ್ದು, ಉತ್ತರ ಭಾರತದ ಕೆಲವು ಪ್ರದೇಶಗಳು ಮತ್ತು ಕರ್ನಾಟಕದಲ್ಲಿ ಈ ಅಪೂರ್ವ ಖಗೋಳ ವಿದ್ಯಮಾನ ಶೇ. 45 ರಷ್ಟು ಗೋಚರಿಸಿದೆ.
ಕರಾವಳಿಯ ಹಲವೆಡೆ ಇಂದು ಈ ಅಪೂರ್ವ ಖಗೋಳ ವಿದ್ಯಮಾನವನ್ನು ವೀಕ್ಷಿಸಲಾಯಿತು.
ಮಧ್ಯಾಹ್ಯ ಗ್ರಹಣ ಮೋಕ್ಷವಾದ ನಂತರ ಕರಾವಳಿಯ ದೇವಸ್ಥಾನಗಳಲ್ಲಿ ಶುದ್ಧತೆ ಆರಂಭವಾಗಿದೆ. ಗ್ರಹಣ ಮೋಕ್ಷದ ನಂತರ ದೇವಸ್ಥಾನಗಳನ್ನು ಶುಚಿಗೊಳಿಸಿ, ಬಳಿಕ ವಿಶೇಷ ಪೂಜೆ ಪುನಸ್ಕಾರ ನಡೆಲಾಗುತ್ತದೆ.
ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಶುದ್ಧತೆ ಆರಂಭವಾಗಿದ್ದು, ಸಿಬ್ಬಂದಿಗಳು ಎಲ್ಲಾ ಕಡೆ ತೊಳೆದು ಸ್ವಚ್ಚಗೊಳಿಸುತ್ತಿದ್ದಾರೆ. ನಂತರ ವಿಶೇಷ ಪೂಜೆ ನಡೆಯಲಿದೆ.