ಹುಣಸೂರು: ಮನುಷ್ಯನ ಆರೋಗ್ಯ ತಪಾಸಣೆ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಮಣ್ಣಿನ ಪರೀಕ್ಷೆ ಮಾಡಿಸುವುದು ಅಷ್ಟೇ ಮಹತ್ವವಾಗಿದೆ ಎಂದು ನಾಗನಹಳ್ಳಿವಿಸ್ತರಣಾ ಶಿಕ್ಷಣಘಟಕದ ಬೇಸಾಯಶಾಸ್ತ್ರ ಪ್ರಾಧ್ಯಾಪಕ ಡಾ.ಸಿ.ರಾಮಚಂದ್ರ ರೈತರಿಗೆ ಸಲಹೆ ನೀಡಿದರು.
ತಾಲೂಕಿನ ಹಿರೀಕ್ಯಾತನಹಳ್ಳಿಯ ಪ್ರಗತಿ ಪರ ರೈತ ಶಿವಪ್ಪ ಅವರ ಜಮೀನಿನಲ್ಲಿ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ನಾಗನಹಳ್ಳಿ ವಿಸ್ತರಣಾ ಶಿಕ್ಷಣ ಘಟಕ ಕೃಷಿ ಸಂಶೋಧನ ಕೇಂದ್ರ, ತಾಲೂಕು ಕೃಷಿ ಇಲಾಖೆಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭತ್ತದ ಬೆಳೆಯಲ್ಲಿ ಸಮಗ್ರ ಪೋಷಕಾಂಶ, ಕೀಟ ಮತ್ತು ರೋಗಗಳ ನಿರ್ವಹಣೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಮಗ್ರ ಕೃಷಿ: ಹುಣಸೂರು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 1.64 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತದ ಬೆಳೆ ನಾಟಿ ಮಾಡಲಾಗಿದೆ. ರೈತರು ಸಮತೋಲನಗೊಬ್ಬರ, ಕೀಟನಾಶಕ ಬಳಸುವುದರಿಂದ ಕೃಷಿಯಲ್ಲಿ ಖರ್ಚು ಕಡಿಮೆ ಮಾಡಬಹುದು. ರೈತರಲ್ಲಿ ಅರಿವಿನ ಕೊರತೆ, ಉದಾಸೀನತೆಯಿಂದ ಬೆಳೆ ಇಳುವರಿಯಲ್ಲಿ ಕುಂಠಿತಗೊಳ್ಳುತ್ತಿದೆ. ಆದ್ದರಿಂದ ಕೃಷಿ ತಜ್ಞ ಸಲಹೆ ಪಡೆದು ¸ ಬೆಳೆ ¸ ಬೆಳೆದಾಗ ಇಳುವರಿ ಹೆಚ್ಚುವ ಜೊತೆಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಸಮಗ್ರ ಕೃಷಿ ಯಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು. ಮಣ್ಣಿಗೆ ಸ್ಪಂದಿಸುವ ರಸಗೊಬ್ಬರ ಮಾತ್ರ ಬಳಸಬೇಕು. ಹಸಿರು ಎಲೆ ಗೊಬ್ಬರದಿಂದ ಅಧಿಕ ಇಳುವರಿ ಪಡೆಯಬಹುದು. ಜೊತೆಗೆ ಬೀಜೋಪಚಾರ ನಡೆಸಿ ಶ್ರೀಪದ್ಧತಿ ಅಳವಡಿಸಿ ಬೆಳೆ ¸ ಬೆಳೆದರೆ ನೀರು ಉಳಿತಾಯವಾಗುತ್ತದೆ ಎಂದು ತಿಳಿಸಿದ್ದರು.
ಮಣ್ಣಿನ ಆರೋಗ್ಯ: ಮಣ್ಣುವಿಜ್ಞಾನಿ, ಸಹಾಯಕ ಪ್ರಾಧ್ಯಾಪಕ ಉಮೇಶ್ ಮಾತನಾಡಿ, ಯಾವುದೇ ಬೆಳೆಗಳಿಗೆ ಮಣ್ಣು ಆಧಾರ, ಒಂದು ಇಂಚು ಮಣ್ಣು ಉತ್ಪತಿಯಾಗಬೇಕಾದರೆ ಸಾವಿರ ವರ್ಷಗಳೇ ಬೇಕು. ಬೆಳೆಗಳ ಪೋಷಣೆಯಲ್ಲಿ ಏರುಪೇರಾದಾಗ ಬೆಳೆನಷ್ಟ ಅನುಭವಿಸಬೇಕಾಗಲಿದೆ. ಹೀಗಾಗಿ ಕಾಲಕಾಲಕ್ಕೆ ತಮ್ಮ ಭೂಮಿಯ ಮಣ್ಣಿನ ಪರೀಕ್ಷೆ ಮಾಡಿಸಿಕೊಂಡು ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೆಳೆ ಸಮೀಕ್ಷೆ: ಗಾವಡಗೆರೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಧುಲತಾ ಮಾತನಾಡಿ, ರೈತರು ತಮ್ಮ ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಮಾಡಿಕೊಳ್ಳುವುದು ಮತ್ತು ಬೆಳೆ ದರ್ಶನ ಬಗ್ಗೆ ಕಾಲಕಾಲಕ್ಕೆ ಕೃಷಿ ಇಲಾಖೆ ನೀಡುವ ಮಾಹಿತಿ ಪಡೆದುಕೊಳ್ಳಬೇಕು ಎಂದರು. ಇದೇ ವೇಳೆ, ಇಲಾಖೆ ವತಿಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಶಿವಪ್ಪ, ರೈತ ಸಂಪರ್ಕ ಕೆಂದ್ರದ ಕೃಷಿ ಅಧಿಕಾರಿ ವೆಂಕಟೇಶ್, ಆತ್ಮಾ ಯೋಜನೆ ಶಶಿಕುಮಾರ್, ಹನಿಫ್‌ಪಾಷ, ಕ್ಷೇತ್ರಸಹಾಯಕ ಧರಣೇಶ್, ರೈತರು ಹಾಗೂ ಮಹಿಳಾ ಸ್ವ-ಸಹಾಯ ಸಂಘದ ಪ್ರತಿನಿಧಿಗಳು ಹಾಜರಿದ್ದರು.