ಹೈದರಾಬಾದ್: “ಮಣ್ಣು ಉಳಿಸಿ’ ಅಭಿಯಾನದ ಭಾಗವಾಗಿ ಸದ್ಗುರು ಜಗ್ಗಿ ವಾಸುದೇವ ಅವರು ಬುಧವಾರ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ರಾಜ್ಯ ಸಚಿವ ಕೆ.ಟಿ. ರಾಮರಾವ್ ಮತ್ತು ನಟಿ ಸಮಂತಾ ರುಥ್ ಪ್ರಭು ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ಮಣ್ಣು ರಕ್ಷಿಸುವ ಬಗ್ಗೆ ಅರಿವು ಮೂಡಿಸುತ್ತಾ 26 ರಾಷ್ಟ್ರಗಳನ್ನು ಏಕಾಂಗಿಯಾಗಿ ಬೈಕ್‌ನಲ್ಲಿ ಸುತ್ತಾಡಿ ಬಂದಿರುವ ಸದ್ಗುರು, ಹೈದರಾಬಾದ್‌ನ ಜನರೊಂದಿಗೆ ಸಂವಾದವನ್ನೂ ನಡೆಸಿದರು.
ಮಣ್ಣು ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು. ಸದ್ಗುರು ಅವರು ಜೂ. 19ರಂದು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.