ಗಣೇಶ ಚತುರ್ಥಿಯ ಸಂಭ್ರಮ ಬೆಂಗಳೂರಿಗರಲ್ಲಿ ಇನ್ನೂ ಜೀವಂಕವಿರುವಂತೆಯೇ ಮಣ್ಣಿನಲ್ಲಿ ಗೊಂಬೆ ಮಾಡುವ ಕಾರ್ಯಾಗಾರವೊಂದು ಏರ್ಪಾಡಾಗಿದೆ. ನಮ್ಮ ಎಲ್ಲಾ ನೋವುಗಳನ್ನು ನಿವಾರಿಸುವ ಶಕ್ತಿ ಮಣ್ಣಿಗಿದೆ ಎನ್ನುವ ಮಾತೊಂದಿದೆ. ನಗರಪ್ರದೇಶದ ಮಕ್ಕಳು ಮಣ್ಣಿನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದಾರೆ ಎನ್ನುವ ಆತಂಕ ಮನೆ ಮಾಡಿರುವ ಹೊತ್ತಿನಲ್ಲಿ ಇಂಥ ಕಾರ್ಯಕ್ರಮಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವುದಂತೂ ನಿಜ. ಮಣ್ಣಿನ ಗೊಂಬೆಯನ್ನು ಹೇಳಿಕೊಡುತ್ತಿರುವವರು ಕಲಾನಿರ್ದೇಶಕ, ನಟ, ಅರುಣ್ ಸಾಗರ್ ಮತ್ತವರ ಪತ್ನಿ ಮೀರಾ ಅರುಣ್. ಕಳೆದ ವರ್ಷ ಮಣ್ಣಿನ ಗೊಂಬೆ ರಚನೆ ಕಾರ್ಯಕ್ರಮಕ್ಕೆ ಸಿಕ್ಕ ಸ್ಪಂದನೆಯಿಂದ ಸಂತಸಗೊಂಡಿದ್ದ ಈ ಬಾರಿಯೂ ಅದೇ ಹುರುಪಿನಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. 6 ವರ್ಷಗಳ ಮೇಲ್ಪಟ್ಟ ಮಕ್ಕಳು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಈ ಬಾರಿಯ ದಸರಾಗೆ ಮಕ್ಕಳೇ ಗೊಂಬೆಗಳನ್ನು ತಯಾರು ಮಾಡಿ ಆತ್ಮೀಯರನ್ನು ಖುಷಿಪಡಿಸಬಹುದು. ಬಿ.ಬಿ.ಎಂ.ಪಿ ಕಾರ್ಪೊರೇಟರ್ ಗಂಗಾಂಬಿಕಾ, ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್ ಮತ್ತು ನಿರೂಪಕಿ ಅನುಶ್ರೀ ಕಾರ್ಯಕ್ರಮದ ಮುಖ. ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ಮನರಂಜನಾ ಚತುರ ಅರುಣ್ ಸಾಗರ್ ಇರುವುದರಿಂದ ಮಕ್ಕಳಿಗೆ ಮನರಂಜನೆಯ ಕೊರತೆ ಇಲ್ಲ. ಕಾರ್ಯಕ್ರಮದಲ್ಲಿ ಹಾಡು, ನೃತ್ಯ, ಹಾಸ್ಯ ಇದ್ದೇ ಇರುವುದು.
ಮಣ್ಣಿನ ರಚನೆಗೆ ಬೇಕಾಗುವ ಪರಿಕರಗಳನ್ನು ಸ್ಥಳದಲ್ಲಿ ನೀಡಲಾಗುವುದು. ಆಸಕ್ತರು ಮಕ್ಕಳ ಹೆಸರನ್ನು ಮುಂಚಿತವಾಗಿ ನೋಂದಾಯಿಸಬೇಕು.
ಎಲ್ಲಿ?: ಕೃಷ್ಣರಾವ್ ಪಾರ್ಕ್, ಬಸವನಗುಡಿ
ಯಾವಾಗ?: ಸೆ. 30, ಬೆಳಗ್ಗೆ 10- ಮಧ್ಯಾಹ್ನ 2
ಸಂಪರ್ಕ: 9900112342