Advertisement
ಆಶಾ ಮಾ. 20ರ ಮಧ್ಯಾಹ್ನ ಮನೆಯಲ್ಲಿ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ಕಚೇರಿಯ ಸಿಬಂದಿ ನಿರಂತರ ಕಿರುಕುಳ ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆಕೆ ಮನೆಯಲ್ಲಿ ಯಾರೊಂದಿಗೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ವಿಚಾರಿಸಿದಾಗ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ರಾವ್, ಸಿಬಂದಿ ಮಂಜುನಾಥ, ವಲಯ ಮೇಲ್ವಿಚಾರಕ ಉದಯಕುಮಾರ ಶೆಟ್ಟಿ ಅವರು ಸಂಘದಲ್ಲಿ ನಡೆದ ವಂಚನೆಯನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದ್ದರು. “ಬ್ಯಾಂಕಿನ ಹಣವನ್ನು ವಂಚನೆ ಮಾಡಿದ್ದಿ. ಅದನ್ನು ಮರಳಿ ಕೊಡು. ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೋ’ ಎಂದು ಪ್ರೇರಣೆ ನೀಡುತ್ತಿದ್ದರು. ಮಾ. 20ರಂದು ಪೂರ್ವಾಹ್ನ 11.30ರ ಸಮಯದಲ್ಲಿ ಆಶಾ ಮನೆಗೆ ಬಂದಿದ್ದರು. ಅವರ ತಾಯಿ ಕೂಡ ಮನೆಯಲ್ಲಿ ಇದ್ದರು. 11.50ರ ಸಮಯದಲ್ಲಿ ಮಹೇಶ್ ರಾವ್, ಮಂಜುನಾಥ, ಉದಯಕುಮಾರ ಶೆಟ್ಟಿ ಕಾರಿನಲ್ಲಿ ಮನೆಗೆ ಬಂದು ಆವಾಚ್ಯ ಶಬ್ದಗಳಿಂದ ಬೈದು ಮನೆಯ ಒಳಗೆ ಆಕ್ರಮವಾಗಿ ಪ್ರವೇಶ ಮಾಡಿ, ಆತ್ಮಹತ್ಯೆಗೆ ಪ್ರರàಪಿಸಿದ್ದಾರೆ. ಆಗ ಆಶಾ ಮಹಡಿಯ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾರೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.
Related Articles
Advertisement
ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರದ ಆರೋಪಗಳು ಕೇಳಿಬರುತ್ತಿವೆ. ಇದರ ಬಗ್ಗೆ ಇಲಾಖೆಗಳ ತನಿಖೆ ಹಾಗೂ ಸರಕಾರಿ ಸಂಸ್ಥೆಗಳ ಆಡಿಟ್‌ನಿಂದ ವಿಚಾರಗಳು ಹೊರಬರುತ್ತವೆ. ಈಗಲೂ ಆಡಿಟ್ ಹಾಗೂ ತನಿಖೆಗಳು ನಡೆಯುತ್ತಿವೆ. ಹೀಗಿರುವಾಗ ಕಳೆದ 2 ವರ್ಷದ ಹಿಂದೆ ಶಾಖಾ ವ್ಯವಸ್ಥಾಪಕರಾಗಿದ್ದ ಸಂಪತ್ ಕಾಮತ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಆಶಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗಳು ನಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.