Advertisement

ವಿಚಾರ ಕ್ರಾಂತಿಯಿಂದ ಸಮಾಜ ಪರಿವರ್ತನೆ

06:39 AM Jul 01, 2019 | Lakshmi GovindaRaj |

ಬೆಂಗಳೂರು: ಬಸವಣ್ಣನವರ ವಚನ ಸಾಹಿತ್ಯ ಮತ್ತು ವಿಚಾರಧಾರೆಗಳನ್ನು ಯುವ ಸಮುದಾಯದಲ್ಲಿ ಬಿತ್ತುವ ಮೂಲಕ ಮನುಷ್ಯ ಸಮಾಜವನ್ನು ಕಟ್ಟಬೇಕಾಗಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅಭಿಪ್ರಾಯಪಟ್ಟರು.

Advertisement

ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ವತಿಯಿಂದ ಭಾನುವಾರ ಜಯನಗರದ ಜೆಎಸ್‌ಎಸ್‌ ಚಿಂತನ ಮಂಟಪದಲ್ಲಿ ಹಮ್ಮಿಕೊಂಡಿದ್ದ ಡಾ. ಫ‌.ಗು.ಹಳಕಟ್ಟಿ ಜನ್ಮದಿನೋತ್ಸವದಲ್ಲಿ ಮಾತನಾಡಿದ ಅವರು, ವಿಚಾರ ಕಾಂತ್ರಿಯಿಂದ ಸಮಾಜವನ್ನು ಪರಿವರ್ತನೆಗೊಳಿಸಲು ಸಾಧ್ಯ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಸ್ವಾಸ್ಥ್ಯ ಸಮಾಜದ ನಿರ್ಮಾಣದ ಬಗೆಗಿನ ಆಲೋಚನೆ ಕಡಿಮೆಯಾಗಿ ಹೋಗಿದೆ. ಮಾನವೀಯ ಮೌಲ್ಯಕ್ಕೆ ಬೆಲೆ ಇಲ್ಲದಂತಾಗಿದ್ದು , ಜಾತಿ ಧರ್ಮವನ್ನು ಬದಿಗೊತ್ತಿ ಉತ್ತಮ ಸಾಮಾಜವನ್ನು ಕಟ್ಟಬೇಕಾಗಿದೆ ಎಂದು ತಿಳಿಸಿದರು.

ವಚನ ಸಾಹಿತ್ಯದ ಸಾರವನ್ನು ಎಲ್ಲೆಡೆ ತಲುಪಿಸುವ ಕಾರ್ಯದಲ್ಲಿ ಹಲವರು ಎಲೆಮರೆ ಕಾಯಂತೆ ದುಡಿಯುತ್ತಿದ್ದಾರೆ. ಅವರನ್ನು ಹುಡುಕಿ ಗೌರವಿಸುವ ಕಾರ್ಯವನ್ನು ಅಖೀಲ ಭಾರತೀಯ ಶರಣ ಸಾಹಿತ್ಯ ಪರಿಷತ್ತು ಮತ್ತಷ್ಟು ಮಾಡಲಿ ಎಂದರು.

ವಚನ ಸಾಹಿತ್ಯ ಕ್ಷೇತ್ರಕ್ಕೆ ಡಾ.ಫ‌.ಗು.ಹಳಕಟ್ಟಿ ಅವರ ಕೊಡುಗೆ ಅಪಾರ. ವಚನ ಸಾಹಿತ್ಯದ ಪಿತಾಮಹ ಎನಿಸಿಕೊಂಡಿರುವ ಡಾ.ಫ.ಗು.ಹಳಹಟ್ಟಿಯವರನ್ನು ನೆನೆಯುವ ಕಾರ್ಯ ಹೀಗೆ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

Advertisement

ಡಾ.ಫ‌.ಗು.ಹಳಕಟ್ಟಿಯವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಬಿ.ಶಿವಾನಂದ, ವಚನ ಸಾಹಿತ್ಯಕ್ಕೆ ಹಳಕಟ್ಟಿ ಅವರ ಕೂಡುಗೆ ಅಪಾರ.ಅವರ ಸಾಧನೆ ನಮ್ಮೆಲ್ಲರಿಗೂ ಸ್ಫೂರ್ತಿ ಎಂದರು.

ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯದಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗಿದೆ. ಆ ಹಿನ್ನೆಲೆಯಲ್ಲಿ ನಾವು ನಮ್ಮ ಮಕ್ಕಳಿಗೆ ಸ್ವಾತಂತ್ರ್ಯಹೋರಾಟಗಾರರ ಮತ್ತು ವಚನಕಾರರ ಬಗ್ಗೆ ತಿಳಿಹೇಳ ಬೇಕಾಗಿದೆ ಎಂದು ಹೇಳಿದರು.

ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪ್ಪರಾವ್‌ ಅಕ್ಕೋಣೆ, ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ ಎಸ್‌.ಕೆಂಡದಮಠ, ಬೆಂಗಳೂರು ನಗರ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next