Advertisement

ಸಮಾಜಸೇವೆಗೆ ನಿಷ್ಕಲ್ಮಶ ಮನಸ್ಸು  ಮುಖ್ಯ:  ಜನಾರ್ದನ 

01:12 PM Oct 05, 2017 | Team Udayavani |

ಮುಚ್ಚಾರು: ಸಮಾಜ ಸೇವೆಯನ್ನು ಪ್ರೀತಿ, ನಿಷ್ಕಲ್ಮಶ ಮನಸ್ಸು ಮತ್ತು ಕಾಳಜಿಯಿಂದ ಮಾಡಬೇಕು. ಆಗ ಮಾತ್ರ ನಮ್ಮ ಆಶಯ ಸಾರ್ಥಕ್ಯ ಕಾಣುತ್ತದೆ ಎಂದು ಜಿ.ಪಂ. ಸದಸ್ಯ ಜನಾರ್ದನ ಗೌಡ ಹೇಳಿದರು.

Advertisement

ಜಿ.ಪಂ. ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲ ಕ್‌
ಆಸ್ಪತ್ರೆ, ಲಯನ್ಸ್‌ ಕ್ಲಬ್‌ ಮುಚ್ಚಾರು- ನೀರುಡೆ, ಗ್ರಾ.ಪಂ. ಮುಚ್ಚಾರು ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ
ಜಿಲ್ಲಾ ಅಂಧತ್ವ ನಿವಾರಣಾ ಘಟಕ, ಧರ್ಮಸ್ಥಳ ಮಂಜುನಾಥೇಶ್ವರ ಕಣ್ಣಿನ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಂಪದವು ವತಿಯಿಂದ ಮುಚ್ಚಾರು ಶಾಲೆಯಲ್ಲಿ ಸೋಮವಾರ ಜರಗಿದ ನೇತ್ರದಾನ ಮಾಹಿತಿ, ನೋಂದಣಿ ಕಾರ್ಯಕ್ರಮ ಹಾಗೂ ಉಚಿತ ಕಣ್ಣಿನ ಚಿಕಿತ್ಸೆ, ಮಧುಮೇಹ ಪರೀಕ್ಷೆ ಉಚಿತ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗುವ ಕಣ್ಣುಗಳನ್ನು ಹೊಂದಿರುವ ನಾವು ಕತ್ತಲಾಗಿರುವ ಅಂಧರ ಬದುಕನ್ನು ಬೆಳಗಿಸಲು ನೇತ್ರದಾನ ಮಾಡುವ
ಮೂಲಕ ಅವರ ಬದುಕಿನಲ್ಲಿ ನಗು ತರಿಸಬೇಕು.

ಇಂತಹ ಕಾರ್ಯಕ್ರಮಗಳಿಗೆ ಸಂಘಸಂಸ್ಥೆಗಳು  ಮುಂದಾಗಬೇಕು ಎಂದರು. ಗಾಂಧಿ ಜಯಂತಿ, ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಜಯಂತಿ ಸುಸಂದರ್ಭದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಹಮ್ಮಿಕೊಂಡ ಅರ್ಥ ಪೂರ್ಣ ಕಾರ್ಯಕ್ರಮ ಇದಾಗಿದೆ. ಗಾಂಧೀಜಿಯವರ ಪ್ರೇರಣೆಯ ಸ್ವಚ್ಚ ಭಾರತಕ್ಕೆ ಕಾಯಕಲ್ಪ ದೇಶದಾದ್ಯಂತ ಸಿಗುತ್ತದೆ. ದೇಶ ಸೇವೆಯ ಯೋಧರಿಗೆ ಹುಮ್ಮಸ್ಸು ನೀಡಿದ ಶಾಸ್ತ್ರೀಯವರದ್ದು ಎಂದು ಹೇಳಿದರು.

ಭಾರತೀಯ ವಿಮಾನ ಯಾನ ಇಲಾಖೆಯ ಮುಂಬಯಿ ಘಟಕದ ಉಪನಿರ್ದೇಶಕ ಜಗದೀಶ್‌ ಬಲ್ಲಾಳ್‌
ಬೈಲ್‌ ಮಾತನಾಡಿ, ಕೆಲಸದಿಂದ ಪ್ರಚಾರವಾಗಬೇಕು. ಮಾನವೀಯ ಮೌಲ್ಯಗಳ ಜಾಗೃತಿಗೆ ಸ್ಪಂದಿಸುವ ಜನೋಪಕಾರಿಯಾಗಿ ದೇಶದ ಹಿತಕ್ಕಾಗಿ ದುಡಿಯುತ್ತಿರುವ ಮನಸ್ಸುಗಳಿಂದ ಉತ್ತಮ ಕಾರ್ಯ ನಡೆಯುತ್ತಿದೆ ಎಂದರು.ಮುಚ್ಚಾರು ಗ್ರಾ.ಪಂ. ಅಧ್ಯಕ್ಷ ವೀರಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು.

Advertisement

ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ಗಣೇಶ್‌ ಶೆಟ್ಟಿ, ಜಿಲ್ಲಾ ಅಂಧತ್ವ ನಿವಾರಣಾ ಘಟಕದ ಮುಖ್ಯ ವೈದ್ಯಾಧಿಕಾರಿ ಡಾ| ರಾಧಾಕೃಷ್ಣ, ಡಾ| ರತ್ನಾಕರ ಕೊಂಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಜ್ಯೋತಿ, ಪಡುಪೆರಾರ ಗ್ರಾ.ಪಂ. ಸದಸ್ಯ ಅಮಿತಾ ಮೋಹನ್‌ ಶೆಟ್ಟಿ, ಎಸ್‌ ಡಿಎಂಸಿ ಅಧ್ಯಕ್ಷರಾದ ಹರೀಶ್‌ ಗೌಡ, ಮೋಹನ ದೇವಾಡಿಗ, ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಮಾಲಿನಿ, ಪ್ರಗತಿ ಯುವಕ ಮಂಡಲ ಅಧ್ಯಕ್ಷ ರವಿರಾಜ್‌ ಶೆಟ್ಟಿ, ಪ್ರಗತಿ ಮಹಿಳಾ ಮಂಡಲದ ಅಧ್ಯಕ್ಷೆ ಶರ್ಮಿಳಾ ಡಿ. ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಅಶೋಕ್‌ ನಾೖಕ್‌, ಲೀಲಾವತಿ, ಪ್ರಕಾಶ್‌ ನೆಲ್ಲಿತೀರ್ಥ, ಆನಂದ ಪೂಂಜಾ, ಶಾಲಾ ಮುಖ್ಯ ಶಿಕ್ಷಕಿ ಕುಮುದಾವತಿ, ಲಯನೆಸ್‌ ಅಧ್ಯಕ್ಷೆ ಸರಿತಾ ಜಿ. ಶೆಟ್ಟಿ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಅನ್ನಮ್ಮ ಪಿ.ಜೆ. ಸ್ವಾಗತಿಸಿದರು.ಸಹ ಶಿಕ್ಷಕ ಹರೀಶ್‌ ಶೆಟ್ಟಿ ಸೂಡ
ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next