Advertisement
ಇಬ್ಬರು ದುಷ್ಕರ್ಮಿಗಳಿಂದ ಕೃತ್ಯ: ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕ್‌ವೊಂದರಲ್ಲಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತಿರುಗುವ ಇಬ್ಬರು ದುಷ್ಕರ್ಮಿಗಳು ರಸ್ತೆ ಬದಿಯಲ್ಲಿ ನಿಂತಿರುವ ಕಾರು ಹಾಗೂ ಬಸ್‌ನ ಕಿಟಕಿ ಗಾಜಿಗೆ ಕಲ್ಲು ಎಸೆದು ಪುಡಿ ಮಾಡಿದ್ದಾರೆ. ಅಲ್ಲಿಂದ ಮುಂದೆ ಸಾಗಿ ಬೈಕ್ ಶೋ ರೂಂ ಕಟ್ಟಡದ ಕಿಟಕಿ, ರಿಲಯನ್ಸ್ ಪೆಟ್ರೋಲ್ ಬಂಕ್‌ಗಳಿಗೆ ಕಲ್ಲು ಎಸೆದು ಹಾನಿ ಮಾಡಿದ್ದಾರೆ. ಶಾಸಕ ಸಿ.ಎಸ್.ಪುಟ್ಟರಾಜು ಅವರ ಗೃಹ ಕಚೇರಿ ಮೇಲೂ ಕಲ್ಲು ತೂರಾಟ ನಡೆಸಿದ್ದು, ಮೊದಲ ಅಂತಸ್ತಿನ ಕಿಟಕಿ ಗಾಜು ಪುಡಿಯಾಗಿದೆ.
Related Articles
Advertisement
ಇದನ್ನೂ ಓದಿ:- ಶೀಘ್ರವೇ ಸರ್ಕಾರಿ ನೌಕರಿಯ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಪ್ರಮೋದ್ ಸಾವಂತ್
ಪೊಲೀಸರು ಕ್ರಮ ಕೈಗೊಳ್ಳುತ್ತಾರೆ: ಪುಟ್ಟ ರಾಜು ಘಟನೆ ಕುರಿತಂತೆ ಶಾಸಕ ಸಿ.ಎಸ್.ಪುಟ್ಟರಾಜು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಯಾರೋ ಕಿಡಿಗೇಡಿಗಳು ಬಸ್, ಕಾರು, ಮೊಬೈಲ್ ಅಂಗಡಿ ಸೇರಿದಂತೆ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ನಮ್ಮ ಮನೆ ಮೇಲೂ ಕಲ್ಲು ತೂರಿದ್ದಾರೆ. ಇದು ರಾಜಕೀಯ ಪ್ರೇರಿತವಲ್ಲ. ಕಿಡಿಗೇಡಿಗಳು ಎಲ್ಲಾ ಕಡೆ ಗಲಾಟೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಆತಂಕಕ್ಕೊಳಗಾಗದೇ ಶಾಂತಿ ಕಾಪಾಡುವಂತೆ ಮನವ ಮಾಡಿದ್ದಾರೆ.
ರಾಜಕೀಯ ಪ್ರೇರಿತವಲ್ಲ: ಅಶೋಕ್ ಘಟನೆ ಸಂಬಂಧ ಶಾಸಕ ಪುಟ್ಟರಾಜು ಅವರ ಅಣ್ಣನ ಮಗ ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್, ಕಾರ್ಯಕರ್ತರನ್ನು ಸಮಾಧಾನಪಡಿಸಿ ಮಾತನಾಡಿದ ಅವರು, ಈ ಘಟನೆ ರಾಜಕೀಯ ಪ್ರೇರಿತವಾಗಿಲ್ಲ. ಕಿಡಿಗೇಡಿಗಳು ಕುಡಿದ ಅಮಲಿನಲ್ಲಿ ಮಾಡಿರುವ ಕೃತ್ಯವಾಗಿದೆ. ಕಾರ್ಯಕರ್ತರು ಪ್ರಚೋದನೆಗೆ ಒಳಗಾಗಬಾರದು ಎಂದು ಮನವಿ ಮಾಡಿದರು.