ಲಂಡನ್/ ಕೊಲಂಬೋ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ ಶ್ರೀಲಂಕಾ ಆಟಗಾರರ ವಿರುದ್ಧ ದ್ವೀಪ ರಾಷ್ಟ್ರದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ಎಂಬ ಹ್ಯಾಷ್ ಟ್ಯಾಗ್ ನಡಿಯಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿರುವ ಲಂಕಾ ಅಭಿಮಾನಿಗಳು ಉಪನಾಯಕ ಕುಸಲ್ ಮೆಂಡಿಸ್ ಮತ್ತು ಆರಂಭಿಕ ಆಟಗಾರ ಧನುಷ್ಕಾ ಗುಣತಿಲಕ ಅವರ ಫೇಸ್‌ಬುಕ್ ಪುಟವನ್ನು ಸಾವಿರಾರು ಅಭಿಮಾನಿಗಳು ಬಹಿಷ್ಕರಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಲಂಕಾ ಆಟಗಾರರು ಸರಣಿಯ ಮೂರು ಟಿ20 ಪಂದ್ಯಗಳಲ್ಲಿ ಸೋಲನಭವಿಸಿದ್ದಾರೆ. ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಲಂಕಾ ತಂಡ ಮೂರನೇ ಪಂದ್ಯದಲ್ಲಿ 89 ರನ್ ಅಂತರದ ಸೋಲನುಭವಿಸಿದೆ.
ಇದನ್ನೂ ಓದಿ:ಭಾರತ- ಇಂಗ್ಲೆಂಡ್ ವನಿತೆಯರ ಮೊದಲ ಏಕದಿನ: ಶಫಾಲಿ ವರ್ಮಾ ಪದಾರ್ಪಣೆ
ಇಂಗ್ಲೆಂಡ್ ಸರಣಿಯಲ್ಲಿ ವಿಫಲರಾದ ಆಟಗಾರರ ಫೇಸ್ ಬುಕ್, ಇನ್ಸ್ಟಾಗ್ರಾಮ ಮತ್ತು ಟ್ವಿಟ್ಟರ್ ನ ಅಧಿಕೃತ ಖಾತೆಗಳನ್ನು ಅನ್ ಫಾಲೋ ಮಾಡುವುದು ಈ ಅಭಿಯಾನದ ಉದ್ದೇಶ ಎಂದು ನ್ಯೂಸ್ ಸೆಂಟರ್ ವೆಬ್ ಸೈಟ್ ವರದಿ ಮಾಡಿದೆ.
ರಾಷ್ಟ್ರೀಯ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ಆಟಗಾರರಿಗೆ ಸಾಮಾಜಿಕ ಜಾಲತಾಣದಲ್ಲಿ ಮನ್ನಣೆ ಸಿಗಬಾರದು. ಅವರುಗಳು ಅಪಾರ ಅಭಿಮಾನಿಗಳನ್ನು ಹೊಂದಲು ಶಕ್ತರಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.