Advertisement

ಕಾಂಗ್ರೆಸ್‌ನಲ್ಲಷ್ಟೇ ಸಾಮಾಜಿಕ ನ್ಯಾಯ: ಉಮಾಶ್ರೀ

03:00 PM Jul 04, 2020 | Suhan S |

ಮಹಾಲಿಂಗಪುರ: ಸಾಮಾಜಿಕ ನ್ಯಾಯ ನೋಡಬೇಕಾದರೆ ಅದು ಕಾಂಗ್ರೆಸ್‌ ಪಕ್ಷದಲ್ಲಿ ಮಾತ್ರ ಸಾಧ್ಯ ಎಂದು ತೇರದಾಳ ಮತಕ್ಷೇತ್ರದ ಮಾಜಿ ಸಚಿವೆ ಉಮಾಶ್ರೀ ಹೇಳಿದರು.

Advertisement

ಬನಶಂಕರಿ ದೇವಿ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.2ರಂದು ನೂತನ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ ಪದಗ್ರಹಣ ಸಮಾರಂಭ ಯಶಸ್ವಿಯಾಗಿ ಜರುಗಿದೆ. ಡಿ.ಕೆ. ಶಿವಕುಮಾರ ತಮ್ಮ ನಿರಂತರ ಹೋರಾಟದ ಮೂಲಕ ಯುವಕರ ಕಣ್ಮಣಿಯಾಗಿ ದಿಟ್ಟತನದಿಂದ ಕಾಂಗ್ರೆಸ್‌ ಕಟ್ಟಾಳುವಾಗಿ, ನಿಷ್ಠೆ, ಶ್ರದ್ಧೆ, ಪ್ರಾಮಾಣಿಕತೆಯಿಂದ ಜನತೆಗಾಗಿ ದುಡಿಯುವ ನಾಯಕ. ಅವರು ನಮ್ಮ ಪಕ್ಷದ ಅಧ್ಯಕ್ಷರಾಗಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.

ಡಿ.ಕೆ. ಶಿವಕುಮಾರ ಪದಗ್ರಹಣ ಅತ್ಯಂತ ಅದ್ಧೂರಿಯಾಗಿ ತೇರದಾಳ ಮತಕ್ಷೇತ್ರದಲ್ಲಿ 30 ಜಾಗದಲ್ಲಿ ಕಾರ್ಯಕ್ರಮ ಮಾಡಿ ಕಾರ್ಯಕರ್ತರು ಪದಗ್ರಹಣ ನೋಡುವಂತೆ ಮಾಡಿದ್ದೇವೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಕಾರ್ಯಕರ್ತರು, ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಈ ವೇಳೆ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಜಾವೇದ ಬಾಗವಾನ, ಶ್ರೀಪಾದ ಗುಂಡಾ, ಪ್ರಕಾಶ ಮಮದಾಪುರ, ರಾಜು ಗೌಡಪ್ಪಗೋಳ, ಈಶ್ವರ ಚಮಕೇರಿ, ಮಲ್ಲಪ್ಪ ಬಾವಿಕಟ್ಟಿ, ಮಲ್ಲನಗೌಡ ಪಾಟೀಲ, ರಾಜು ಬಾರಕೋಲ, ರಾಜೇಶ ಬಾವಿಕಟ್ಟಿ, ಭೀಮಶಿ ಸಸಾಲಟ್ಟಿ, ಚನ್ನು ದೇಸಾಯಿ, ಮಲ್ಲಪ್ಪ ಕುಳ್ಳೋಳ್ಳಿ,ರವಿ ಬಿದರಿ, ವಿಜುಗೌಡ ಪಾಟೀಲ, ಅರವಿಂದ ಮಾಲಬಸರಿ, ರವಿ ಹುಣಶ್ಯಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next