Advertisement

ಕೋವಿಡ್ 19: 2022ರವರೆಗೆ ಸಾಮಾಜಿಕ ಅಂತರ ಅಗತ್ಯವಾಗಬಹುದು: ವಿಜ್ಞಾನಿಗಳ ಅಧ್ಯಯನ ವರದಿ

09:16 AM Apr 16, 2020 | Nagendra Trasi |

ನವದೆಹಲಿ:ಮಾರಣಾಂತಿಕ ಕೋವಿಡ್ 19 ಮಹಾಮಾರಿಯನ್ನು ತಡೆಯುವ ನಿಟ್ಟಿನಲ್ಲಿ ಬಹುತೇಕ 2022ರವರೆಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾಗಬಹುದು ಎಂದು ಹಾರ್ವರ್ಡ್ ನ ಹೊಸ ಸಮೀಕ್ಷೆಯೊಂದು ತಿಳಿಸಿದೆ.

Advertisement

ಸಂಶೋಧಕರ ಪ್ರಕಾರ, ಏಕಾಏಕಿ ಸಾಮಾಜಿಕ ಅಂತರವನ್ನು ಅನುಸರಿಸುವುದನ್ನು ಏಕಾಏಕಿ ತೆರವುಗೊಳಿಸಬಹುದು. ಆದರೆ ಎರಡನೇ ಹಂತದ ಸೋಂಕು ಹರಡುವಿಕೆ ತುಂಬಾ ಅಪಾಯಕಾರಿ ಮಟ್ಟದಲ್ಲಿ ಹರಡಲಿದೆ ಎಂದು ಮಂಗಳವಾರ ಪ್ರಕಟವಾಗಿರುವ ಸೈನ್ಸ್ ಜರ್ನಲ್ ನ ಅಧ್ಯಯನ ವರದಿ ವಿವರಿಸಿದೆ.

ಸದ್ಯದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಏಕಕಾಲದ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಇದು ಕೋವಿಡ್ 19 ವೈರಸ್ ಅನ್ನು ತಡೆಗಟ್ಟಲು ಸಾಕಾಗುವುದಿಲ್ಲ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ಈ ಸೋಂಕು ಸಾರ್ಸ್ ರೀತಿ ಸಮುದಾಯದ ಹಂತದಲ್ಲಿ ಹರಡಲಿದ್ದು, ಇದೊಂದು ರೀತಿ ಕಾಲ, ಕಾಲಕ್ಕೆ ಹರಡುವ ಸೋಂಕು ಇದಾಗಿದೆ ಎಂದು ಹಲವು ಆರೋಗ್ಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂತಹ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಒಂದೇ ಮಾದರಿ ಅಂತಿಮವಲ್ಲ. ಆದರೆ ಸೋಂಕು ಹರಡುವುದನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ವಿವಿಧ ಆಯಾಮಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next