ಬೆಳಗಾವಿ: ಇಂದು ಶಿಕ್ಷಣ ಕೇವಲ ಉದ್ಯೋಗ ದೊರಕಿಸಿಕೊಡುವ ಒಂದು ಸಾಧನವಾಗಿದ್ದು ಸಾಮಾಜಿಕ ಕಳಕಳಿ ಮರೆಯಾಗಿದೆ ಎಂದು ಪದ್ಮಶ್ರೀ ಪುರಸ್ಕೃತ ಖ್ಯಾತ ವಿಜ್ಞಾನಿ ಸೇತುಬಂಧು ಡಾ| ಗಿರೀಶ ಭಾರದ್ವಾಜ್ ವಿಷಾದಿಸಿದರು.
ಇದೇ ರೀತಿ ಪ್ರತಿ ಎಂಜಿನಿಯರ್ ಮೊದಲು ತಮ್ಮ ಸುತ್ತಮುತ್ತಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಇಡೀ ಮನುಕುಲದ ಸಮಸ್ಯೆಗಳನ್ನು ಬಗೆಹರಿಸಬಹುದು. ಶಿಕ್ಷಣದ ಜೊತೆಗೆ ಸದ್ವಿಚಾರ, ವಿನಯಶೀಲತೆ, ಪರೋಪಕಾರಿ ಮನೋಭಾವನೆ ಹೊಂದುವುದು ಇಂದಿನ ಶಿಕ್ಷಣಾರ್ಥಿಗಳಿಗೆ ಅವಶ್ಯವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ| ಸಿದ್ಧರಾಮಪ್ಪ ಇಟ್ಟಿ ಮಾತನಾಡಿ, ಇಂದು ಎಲ್ಲ ಕಾಲೇಜುಗಳಲ್ಲಿ ತಾಂತ್ರಿಕ ಸಮಾವೇಶಗಳು ಜರುಗುತ್ತಿದ್ದು ಅವುಗಳಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವಗುಣ, ತಾಂತ್ರಿಕತೆ ಬಗೆಗೆ ವಿಸ್ತಾರವಾದ ಜ್ಞಾನ, ಹೊಸಹೊಸ ವಿಷಯಗಳ ಮಂಡನೆ ಇತ್ಯಾದಿ ವಿಷಯಗಳಲ್ಲಿ ವಿದ್ಯಾರ್ಥಿಗಳು ಪರಿಣಿತಿ ಹೊಂದಬಹುದಾಗಿದೆ ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಜಿ. ಸಂಬರಗಿಮಠ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕ ಡಾ| ಯು.ಸಿ.ಕಪಾಳೆ ಸ್ವಾಗತಿಸಿದರು, ಪರೀಣಿತಾ ಹಾಗೂ ಸೇವಿಯೋ ಲೋಬೋ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಶರಣಬಸಪ್ಪ ಜಂಪಾ ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರ ಸತೀಶ ತುಳಜಣ್ಣವರ ಹಾಗೂ ಕುಮಾರ ಮಂಜುನಾಥ ಅಲ್ಲಯ್ಯನವರಮಠ ಉಪಸ್ಥಿತರಿದ್ದರು.
Advertisement
ಇಲ್ಲಿಯ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಗುರುವಾರ ಆರಂಭವಾದ ಎರಡು ದಿನಗಳ ರಾಷ್ಟ್ರೀಯ ತಾಂತ್ರಿಕ ಉತ್ಸವ-ಸಂವೀಕ್ಷಣಾ-2019 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಂತ್ರಿಕ ಜ್ಞಾನ ಪಡೆದ ಎಂಜಿನಿಯರುಗಳು ದೇಶದ ಸಮಸ್ಯೆ ಬಗೆಹರಿಸುವಲ್ಲಿ ಮಹತ್ವದ ಪಾತ್ರವಹಿಸಬೇಕಾಗಿದೆ. ತಮ್ಮ ಉದಾಹರಣೆಯನ್ನೇ ನೀಡಿದ ಅವರು, ತಾವು ಮೂಲ ಮೆಕ್ಯಾನಿಕಲ್ ಎಂಜಿನಿಯರಿಂಗ್‌ಓದಿದ್ದು ಈಗ ಖ್ಯಾತ ಸೇತುವೆ ಎಂಜನೀಯರ್ ಎಂದು ಗುರುತಿಸಲ್ಪಡುತ್ತಿರುವುದು ಕೇವಲ ಆಸಕ್ತಿ ಮತ್ತು ತಮ್ಮ ಸುತ್ತಮುತ್ತಲಿನ ಪರಿಸರ ಕಾಳಜಿಯಿಂದಾಗಿ ಮಾತ್ರ ಎಂದರು.
Related Articles
Advertisement