ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಕಳೆದ ಕೆಲ ಸಮಯದಿಂದ ಜೀವ ಬೆದರಿಕೆಗಳು ಬರುತ್ತಿದೆ. ಮುಂಬಯಿ ಪೊಲೀಸರಿಂದ ಅವರಿಗೆ ವೈ+ ಭದ್ರತೆ ನೀಡಲಾಗಿದೆ. ಈ ಬಗ್ಗೆ ನಟ ಸಲ್ಮಾನ್ ಖಾನ್ ಅವರು ಮನಬಿಚ್ಚಿ ಮಾತನಾಡಿದ್ದಾರೆ.
ʼಇಂಡಿಯಾ ಟುಡೇʼ ಅವರ ʼ ಅಪ್ ಕಿ ಅದಾಲತ್ʼ ನಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ. “ಅಭದ್ರತೆಗಿಂತ ಭದ್ರತೆಯೇ ಈಗ ಹೆಚ್ಚು ಸೂಕ್ತವೆನ್ನಿಸುತ್ತದೆ. ಆದರೆ ಈ ಭದ್ರತೆಯಲ್ಲಿ ನಾನು ಒಂಟಿಯಾಗಿ ರಸ್ತೆಯಲ್ಲಿ ಗಾಡಿ ಓಡಿಸುವಾಗಿಲ್ಲ. ನನಗೆ ಬೇಕಾದ ಜಾಗಕ್ಕೆ ಒಂಟಿಯಾಗಿ ತಿರುಗಾಡಲು ಹೋಗುವ ಆಗಿಲ್ಲ. ನಾನು ಟ್ರಾಫಿಕ್ ನಲ್ಲಿರುವಾಗ ನನ್ನ ಭದ್ರತೆಯಿಂದ ಮತ್ತೊಬ್ಬರಿಗೆ ತೊಂದರೆಯಾಗುತ್ತದೆ. ನನ್ನ ಅಭಿಮಾನಿಗಳೇ ನನಗೆ ಗಂಭೀರವಾದ ಬೆದರಿಕೆಯಿದೆ ಅದಕ್ಕಾಗಿ ಈ ಭದ್ರತೆಯಿದೆ” ಎಂದರು.
ನಾನೀಗ ಭದ್ರತೆಯಿಂದ ಎಲ್ಲೆಡೆ ಹೋಗುತ್ತೇನೆ. ನೀವು ಏನೂ ಮಾಡಿದರೂ, ನಿಮ್ಮೊಂದಿಗೆ ಏನು ಆಗಬೇಕು ಅದು ಆಗೇ ಆಗುತ್ತದೆ ಎಂದು ನನಗೆ ತಿಳಿದಿದೆ. ನನಗೆ ನಂಬಿದೆಯಿದೆ ದೇವರು ಅಲ್ಲಿದ್ದಾನೆ. ನಾನು ಮುಕ್ತವಾಗಿ ಓಡಾಡುತ್ತೇನೆ ಎಂದಲ್ಲ. ನನ್ನೊಂದಿಗೆ ಈಗ ಅನೇಕ ಬಂದೂಕುಗಳು ಸುತ್ತುತ್ತವೆ. ಇದು ಭೀತಿಯ ದಿನಗಳು ಎಂದು ಅವರು ಹೇಳಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದರು.
ಮಾರ್ಚ್ 26 ರಂದು, ಸಲ್ಮಾನ್ಗೆ ಬೆದರಿಕೆ ಮೇಲ್ ಕಳುಹಿಸಿದ್ದಕ್ಕಾಗಿ ರಾಜಸ್ಥಾನದ ಜೋಧ್ಪುರ ಜಿಲ್ಲೆಯ ಲುನಿ ನಿವಾಸಿ ಧಕದ್ ರಾಮ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಬಂಧಿಸಲಾಗಿತ್ತು.