Advertisement

ಆಗಸ ಆವರಿಸಿದ ಮಂಜು: ವಿಮಾನಗಳ ಹಾರಾಟ ಸ್ಥಗಿತ

11:34 AM Nov 29, 2017 | Team Udayavani |

ದೇವನಹಳ್ಳಿ: ದೇವನಹಳ್ಳಿ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತ ಮಂಗಳವಾರ ಬೆಳಗ್ಗೆ ದಟ್ಟ ಮಂಜು ಆವರಿಸಿದ್ದ ಹಿನ್ನೆಲೆಯಲ್ಲಿ ಕೆಲ ಕಾಲ ವಿಮಾನಗಳ ಹಾರಾಟ ಸ್ಥಗಿತಗೊಂಡಿತ್ತು.

Advertisement

ನಸುಕಿನಲ್ಲೇ ದಟ್ಟ ಮಂಜು ಆವರಿಸಿದ್ದರಿಂದ ಮಂಗಳವಾರ ಮುಂಜಾನೆ 4.30ರಿಂದ 8 ಗಂಟೆವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಂದೂ ವಿಮಾನ ಹೊರಡಲಿಲ್ಲ. ಹೀಗಾಗಿ 20ಕ್ಕೂ ಅಧಿಕ ದೇಶಿಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಾಯವಾಯಿತು.

ಇದೇ ವೇಳೆ ವಿದೇಶದಿಂದ ಬಂದ ಕುವೈತ್‌ ಏರ್‌ಲೈನ್ಸ್‌ 353, ಏರ್‌ ಮಾಷಿಸ್‌ 746, ಏರ್‌ ಇಂಡಿಯಾ 978 ವಿಮಾನಗಳ ಮಾರ್ಗ ಬದಲಾಯಿಸಿ ಚೈನ್ನೈ ವಿಮಾನ ನಿಲ್ದಾಣಕ್ಕೆ ಕಳಿಸಲಾಯಿತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ದೇವನಹಳ್ಳಿ ಸುತ್ತಮುತ್ತ ತಾಪಮಾನ ಕನಿಷ್ಠ ಮಟ್ಟಕ್ಕೆ ತಲುಪಿದ್ದು,

ವಿಮಾನ ನಿಲ್ದಾಣಕ್ಕೆ ಬರುವ ವಾಹನ ಸವಾರರಿಗೆ ರಸ್ತೆ ಕಾಣದಂತೆ ಮಂಜು ಆವರಿಸಿತ್ತು. ಸಮಯಕ್ಕೆ ಸರಿಯಾಗಿ ವಿಮಾನಗಳು ಹೊರಡದ ಕಾರಣ ನೂರಾರು ಪ್ರಯಾಣಿಕರು ಸುಮಾರು ಮೂರು ಗಂಟೆ ಕಾಲ ನಿಲ್ದಾಣದಲ್ಲೇ ಉಳಿದು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬೆಳಗ್ಗೆ 8 ಗಂಟೆ ನಂತರ ವಿಮಾನ ನಿಲ್ದಾಣ ಎಂದಿನಂತೆ ಆರಂಭವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next