Advertisement
ಹಾವುಗಳನ್ನು ಕಂಡರೆ ಹೆಚ್ಚಿನವರು ಭಯ ಪಡುತ್ತಾರೆ. ಹೀಗಿರುವಾಗ ಹಾವಿನ ಚರ್ಮದ ರೀತಿಯಲ್ಲಿ ತಯಾರಿಸಲಾದ ವಸ್ತುಗಳನ್ನು ಯಾರಾದರೂ ಒಪ್ಪಿಕೊಳಲು, ಕೊಂಡುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ಆದರೆ ಇದೀಗ ಚಪ್ಪಲ್‌ಗಳಲ್ಲಿಯೂ ಹಾವುಗಳ ಹೋಲಿಕೆಯನ್ನು ತರಲಾಗಿದೆ. ಬಣ್ಣ ಬಣ್ಣಗಳಲ್ಲಿ ಲಭ್ಯವಿರುವ ಈ ಶೂಗಳು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಆನ್‌ಲೈನ್ ಮಾರುಕಟ್ಟೆಗಳಲ್ಲಿ ನಾವಿದನ್ನು ಆರ್ಡರ್ ಮಾಡುವ ಮೂಲಕ ಕೊಂಡುಕೊಳ್ಳುವ ಅವಕಾಶವನ್ನು ಕಂಪೆನಿಗಳು ನಮಗೆ ನೀಡಿವೆ.
ಹೆಸರೇ ಸೂಚಿಸುವಂತೆ ಈ ಶೂಗಳ ಮೈಯನ್ನು ಹಾವಿನ ಮೈಯಂತೆ ವಿನ್ಯಾಸಗೊಳಿಸಲಾಗಿದೆ. ಹಾವಿನ ಪೊರೆಯ ಮೇಲಿರುವ ಚಿತ್ತಾರಗಳನ್ನು ಈ ಶೂಗಳಲ್ಲಿಯೂ ಕಾಣಬಹುದಾಗಿದೆ. ಕೆಂಪು, ಕಪ್ಪು, ಬಿಳಿ ಮೊದಲಾದ ಬಣ್ಣಗಳಲ್ಲಿ ಈ ಶೂ ಲಭ್ಯವಿದ್ದು, ಈ ವರ್ಷ ನಿಮ್ಮ ಚಪ್ಪಲ್ ಸ್ಟಾ ್ಯಂಡ್‌ಗಳನ್ನು ಅಲಂಕರಿಸಬಹುದಾದ ಎಲ್ಲ ಗುಣವನ್ನೂ ಇವು ಹೊಂದಿವೆ. ಪಾರ್ಟಿ ಸೇರಿದಂತೆ ಇನ್ನಿತರ ವೆಕೇಷನ್‌ಗಳಿಗೆ ಈ ಶೂ ಹೇಳಿ ಮಾಡಿಸಿದಂತಿದೆ. ಆ್ಯಂಕಲ್ ಲೆಂತ್ ಪ್ಯಾಂಟ್ ಧರಿಸುವ ಸಂದರ್ಭದಲ್ಲಿ ಈ ಶೂಗಳನ್ನು ಧರಿಸಿದರೆ ನಿಮಗೊಂದು ನ್ಯೂ ಲುಕ್ ಸಿಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಜೀನ್ಸ್, ಟಿ ಶರ್ಟ್ ಮತ್ತು ಜಾಕೆಟ್ ತೊಟ್ಟುಕೊಂಡಾಗ ಈ ಶೂಗಳನ್ನು ಧರಿಸಿದರೆ ನಿಮ್ಮ ಡ್ರೆಸ್ಸಿಂಗ್‌ಗೆ ಹೆಚ್ಚು ಕಳೆ ಬರುತ್ತದೆ ಎಂಬುದು ಫ್ಯಾಷನ್ ಮೇಕರ್‌ಗಳ ಅಂಬೋಣ. ಸ್ನೇಕ್ ಸ್ಕಿನ್ ಶೂ ವಿಧಗಳು
·ಟೈಟ್ ಹೈ ಶೂಗಳು
ಸ್ನೇಕ್ ಸ್ಕಿನ್ ಶೂಗಳ ಒಂದು ವಿಧವೇ ಟೈಟ್ ಹೈ ಶೂಗಳು. ಇವು ನಮ್ಮ ಮಂಡಿಯವರೆಗೆ ಮುಚ್ಚಲ್ಪಡುವಷ್ಟು ಉದ್ದವನ್ನು ಹೊಂದಿದ್ದು, ಹಿಮ್ಮಡಿ ಎತ್ತರವನ್ನೂ ಹೊಂದಿದೆ. ಇದನ್ನು ಕಾಲಿಗೆ ಬಿಗಿಯಾಗಿ ಅಂಟಿಕೊಳ್ಳುವ ರೀತಿಯಲ್ಲಿ ರಚನೆ ಮಾಡಲಾಗಿದೆ. ಮಿನಿ ಸ್ಕರ್ಟ್, ಆ್ಯಂಕಲ್ ಲೆಂತ್ ಡ್ರೆಸ್ ಮೆಟೀರಿಯಲ್‌ಗಳನ್ನು ಧರಿಸುವ ಸಂದರ್ಭದಲ್ಲಿ ಇದನ್ನು ಬಳಕೆ ಮಾಡಬಹುದಾಗಿದೆ.
Related Articles
ಹೆಸರೇ ಹೇಳುವಂತೆ ಇದನ್ನು ಮೊಣಕಾಲಿನ ಅಳತೆಗೆ ಸರಿಯಾದಂತೆ ರಚನೆ ಮಾಡಲಾಗಿದೆ. ಕೊಂಚ ಮಟ್ಟಿಗೆ ಈ ಶೂ ನ ಹಿಮ್ಮಡಿ ಎತ್ತರವೂ ಆಗಿದೆ. ಸ್ಕರ್ಟ್, ತ್ರೀ-ಫೋರ್ತ್ ಧರಿಸಿ ಬ್ಲೇಸರ್ ತೊಟ್ಟುಕೊಂಡು ಆ ಬಟ್ಟೆಗೆ ಪೂರಕವಾದ ಬಣ್ಣದಲ್ಲಿ ಈ ಶೂಗಳನ್ನು ತೊಟ್ಟುಕೊಂಡರೆ ನಿಮ್ಮ ಸೌಂದರ್ಯ ನೋಡುಗರನ್ನು ಸೆಳೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.
Advertisement
·ನಾರ್ಮಲ್ ಶೂಈ ವಿಧಗಳಲ್ಲದೆ ಹೆಚ್ಚು ಬಳಕೆಯಲ್ಲಿರುವ ಶೂಗಳಲ್ಲಿಯೂ ಸ್ನೇಕ್‌ಸ್ಕಿನ್ ಮಾದರಿಯನ್ನು ಕಾಣಬಹುದಾಗಿದೆ. ಹೈ ಹೀಲ್ಡ್, ನಾರ್ಮಲ್, ಫ್ಲ್ಯಾಟ್ ಶೂಗಳ ಮೇಲೆಯೂ ವರ್ಣರಂಜಿತ ಹಾವಿನ ಚಿತ್ತಾರಗಳನ್ನು ಬರೆಯಲಾಗಿದ್ದು ನೋಡುಗರ ಕಣ್ಮನ ಸೆಳೆಯುವಂತಿದೆ. ಇವುಗಳನ್ನು ಒಮ್ಮೆ ನೀವೂ ಟ್ರೈ ಮಾಡಿ. ·ಆ್ಯಂಕಲ್ ಬೂಟ್
ಮಿಡ್ಡಿ, ಸ್ಕರ್ಟ್, ಮಿನಿ ಸ್ಕರ್ಟ್, ಪ್ಯಾಂಟ್, ಆ್ಯಂಕಲ್ ಲೆಂತ್, ಲೆಗಿನ್, ಜೆಗ್ಗಿನ್ ಸೇರಿದಂತೆ ಯಾವುದೇ ಬಟ್ಟೆಗೂ ಈ ಶೂಗಳನ್ನು ಧರಿಸಬಹುದಾಗಿದೆ. ಆ್ಯಂಕಲ್ ವರೆಗಿನ ಎತ್ತರಕ್ಕೆ ಸಮನಾಗಿ ಈ ಶೂಗಳ ರಚನೆಯಾಗಿದೆ. ಎಲ್ಲ ಸೀಸನ್‌ಗಳಲ್ಲಿಯೂ ಸೂಕ್ತವಾಗಿರುವಂತೆ ಇದನ್ನು ತಯಾರಿಸಲಾಗಿದೆ. •ಭುವನ ಬಾಬು, ಪುತ್ತೂರು