Advertisement
ಬನ್ನಿ ಹಾಗಾದರೆ ಹಾವುಗಳೇ ಇರುವ ಆ ಪ್ರದೇಶ ಯಾವುದು, ಯಾವೆಲ್ಲಾ ಪ್ರಭೇದದ ಹಾವುಗಳು ಇಲ್ಲಿವೆ ಜೊತೆಗೆ ಇಲ್ಲಿರುವ ಹಾವುಗಳ ಸಂಖ್ಯೆ ಎಷ್ಟು ಎಂಬುದರ ಬಗ್ಗೆ ತಿಳಿದುಕೊಳ್ಳೋಣ…
Related Articles
Advertisement
ಅಂದಹಾಗೆ, ಸ್ನೇಕ್ ಐಲ್ಯಾಂಡ್‌ನ ನಿಜವಾದ ಹೆಸರು ಇಲ್ಹಾ ಡ ಕ್ವಿಮಡಾ ಗ್ರಾಂಡೆ. ಇದು ಸಾವೊ ಪಾಲೊದಿಂದ ಕೇವಲ 90 ಮೈಲುಗಳಷ್ಟು ದೂರದಲ್ಲಿದೆ. ಜನರು ದ್ವೀಪಕ್ಕೆ ಹೋಗಲು ಸಾಧ್ಯವಿಲ್ಲ. ಬ್ರೆಜಿಲಿಯನ್ ನೌಕಾಪಡೆಯು ತಮ್ಮ ಸ್ವಂತ ಸುರಕ್ಷತೆ ಮತ್ತು ಹಾವುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯಾರು ದ್ವೀಪಕ್ಕೆ ಭೇಟಿ ನೀಡಲು ಅನುಮತಿಸಬೇಕೆಂದು ನಿರ್ಧರಿಸುತ್ತಾರೆ. ಆದಾಗ್ಯೂ, ಕೆಲವು ವಿಜ್ಞಾನಿಗಳು ಮತ್ತು ನೌಕಾ ಅಧಿಕಾರಿಗಳು ಮಾತ್ರ ದ್ವೀಪಕ್ಕೆ ಭೇಟಿ ನೀಡಬಹುದು.
ಬ್ರೆಜಿಲಿಯನ್ ನೌಕಾಪಡೆ ಇಲ್ಲಿನ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದು ದ್ವೀಪಕ್ಕೆ ಜನ ಸಾಮಾನ್ಯರಿಗೆ ಪ್ರವೇಶ ನಿಷೇಧಿಸಲಾಗಿದೆ, ಪರಿಸರ ಅಧ್ಯಯನ ನಡೆಸುವ ಸಂಶೋಧಕರಿಗೆ ಹಾಗೂ ನೌಕಾಪಡೆಯ ಸಿಬಂದಿಗಳು ಮಾತ್ರ ತಮ್ಮ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪ್ರವೇಶಿಸಲು ಇಲ್ಲಿನ ಸರಕಾರ ಅನುಮತಿ ನೀಡಿದೆ. ಮಾಂಸವನ್ನೇ ಕರಗಿಸಬಲ್ಲ ವಿಷಪೂರಿತ ಹಾವುಗಳು :
ಈ ದ್ವೀಪದಲ್ಲಿ ಗೋಲ್ಡನ್ ಲ್ಯಾನ್ಸ್ಹೆಡ್ ಮತ್ತು ಬೋತ್ರೋಪ್ಸ್ ಇನ್ಸುಲಾರಿಸ್ ಎಂಬ ವಿಷಪೂರಿತ ಹಾವುಗಳು ವಾಸಿಸುತ್ತಿದ್ದು ಇವುಗಳ ಮುಖ್ಯ ಆಹಾರ ಪಕ್ಷಿಗಳು, ಈ ಹಾವುಗಳು ಒಮ್ಮೆ ಕುಟುಕಿದರೆ ಪಕ್ಷಿ ಸತ್ತೇ ಹೋಗುತ್ತದೆ ಅಷ್ಟು ಮಾತ್ರವಲ್ಲದೆ ಮನುಷ್ಯನಿಗೆ ಕಚ್ಚಿದರೂ ದೇಹ ಮತ್ತು ಚರ್ಮವನ್ನು ಕರಗಿಸುವ ಶಕ್ತಿ ಈ ಹಾವಿನ ವಿಷಕ್ಕೆ ಇದೆ ಎನ್ನಲಾಗಿದೆ. ಪಕ್ಷಿಗಳು ಈ ದ್ವೀಪಕ್ಕೆ ಬರಲು ಹೆದರುತ್ತವೆಯಂತೆ, ಅಲ್ಲದೆ ಪಕ್ಷಿಗಳು ತಮ್ಮ ವಲಸೆ ಹೋಗುವ ಸಂದರ್ಭದಲ್ಲಿ ಈ ದ್ವೀಪದಲ್ಲಿ ವಿಶ್ರಾಂತಿ ಪಡೆಯಲು ಬಂದಾಗ ವಿಷಪೂರಿತ ಹಾವುಗಳ ದಾಳಿಗೆ ತುತ್ತಾಗುತ್ತವೆಯಂತೆ.
ಈ ದ್ವೀಪದಲ್ಲಿ ಎಲ್ಲಿ ನೋಡಿದರು ಹಾವುಗಳೇ ಕಾಣುತ್ತವೆಯಂತೆ ಸಂಶೋಧಕರು ಹೇಳುವ ಪ್ರಕಾರ ಇಲ್ಲಿ ಪ್ರತಿ ಚದರ ಮೀಟರ್‌ಗೆ 5 ಹಾವುಗಳು ಸಿಗುತ್ತವೆಯಂತೆ. ಇಲ್ಲಿಯವರೆಗೆ 2000- 4000 ಜಾತಿಯ ಹಾವುಗಳನ್ನು ಈ ದ್ವೀಪದಲ್ಲಿ ಗುರುತಿಸಲಾಗಿದೆ ಎಂದು ಹೇಳಾಗುತ್ತಿದೆ. ಹಾವುಗಳಿಂದ ಕುಟುಂಬವೇ ನಾಶ:
ಈ ದ್ವೀಪದಲ್ಲಿ ಲೈಟ್ ಹೌಸ್ ಕೂಡ ಇದೆ. ಒಂದಾನೊಂದು ಕಾಲದಲ್ಲಿ ಈ ಜಾಗದಲ್ಲಿ ಜನ ವಾಸಿಸುತ್ತಿದ್ದರು ಎನ್ನುವುದಕ್ಕೆ ಈ ಲೈಟ್ ಹೌಸ್ ಸಾಕ್ಷಿಯಾಗಿದೆ. ಲೈಟ್‌ಹೌಸ್ ಕೀಪರ್ ಮತ್ತು ಅವರ ಕುಟುಂಬವು 1909 ಮತ್ತು 1920 ರ ನಡುವೆ ಸ್ನೇಕ್ ಐಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಕ್ರಮೇಣ ಈ ಹಾವುಗಳ ದಾಳಿಯಿಂದ ಈ ಕುಟುಂಬವೂ ನಾಶವಾಯಿತು ಎಂದು ಹೇಳಲಾಗಿದೆ.
110 ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ ಈ ದ್ವೀಪದಲ್ಲಿ ಸುಮಾರು 4,30,000ಕ್ಕೂ ಹೆಚ್ಚು ವಿಷಪೂರಿತ ಹಾವುಗಳು ಇವೆಯೆಂದು ಗುರುತಿಸಲಾಗಿದೆ. ಈ ದ್ವೀಪದ ಗಾತ್ರಕ್ಕೆ ಹೋಲಿಸಿದರೆ ಹಾವುಗಳ ಸಂಖ್ಯೆಯೇ ಅಧಿಕ. ಒಮ್ಮೆ ಯೋಚಿಸಿ ಇಲ್ಲಿಗೆ ಪ್ರವೇಶ ಮಾಡಿದವರು ಮತ್ತೆ ಹಿಂದೆ ಬರುವ ಸಾಧ್ಯತೆ ಇದೆಯಾ ಎಂಬುದು. – ಸುಧೀರ್ ಪರ್ಕಳ