ಮದ್ದೂರು: ಪಟ್ಟಣದ ಸ್ವತ್ಛತೆಗೆ ಮುಂದಾಗುವ ಪೌರಕಾರ್ಮಿಕರಿಗೆ ರಕ್ಷಣೆ ಇಲ್ಲದಂತಾಗಿದ್ದು ಅಧಿಕಾರಿಗಳು ಕಾರ್ಮಿಕರ ಸುರಕ್ಷತೆಗೆ ಮುಂದಾಗಬೇಕೆಂದು ಯುವ ಮುಖಂಡ ಅಪ್ಪು ಪಿ.ಗೌಡ ಆಗ್ರಹಿಸಿದರು.
ಪೌರಕಾರ್ಮಿಕರು ಪ್ರತಿದಿನ ಬೆಳಗ್ಗೆ ಪಟ್ಟಣದ ಸ್ವತ್ಛತೆಗೆ ಮುಂದಾಗುವ ವೇಳೆ ವಿಷಪೂರಿತ ಹಾವು ಕಚ್ಚುವುದು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುವಂತಾಗಿದೆ ಎಂದು ದೂರಿದರು. ಪಟ್ಟಣದ ಸ್ವತ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರ ಆರೋಗ್ಯ,
ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಅಧಿಕಾರಿಗಳು ಕ್ರಮವಹಿಸಬೇಕೆಂದರು.
ಪುರಸಭೆ ಮುಖ್ಯಾಧಿಕಾರಿ ಮುರುಗೇಶ್ ಸೇರಿ ಯಾವೊಬ್ಬ ಅಧಿಕಾರಿ ವಾರ್ಡ್‌ಗಳಿಗೆ ಭೇಟಿ ನೀಡಿ ಸ್ವತ್ಛತೆ ಜತೆಗೆ ಸಾರ್ವಜನಿಕರ ಕುಂದುಕೊರತೆಗಳ ಮಾಹಿತಿ ಪಡೆಯದೆ ಕಚೇರಿಗೆ ಸೀಮಿತವಾಗಿದ್ದಾರೆಂದರು.
ಇದನ್ನೂ ಓದಿ:ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಕೇಂದ್ರ ಸ್ಪಂದಿಸಲಿ : ಒಕ್ಕೂಟದ ಅಧ್ಯಕ್ಷ ಎಚ್.ಟಿ.ಮೋಹನ್ ಆತಂಕ