Advertisement
ಏನಿದು ಪರಿಹಾರ?, ಅತೀ ಕಡಿಮೆ ನೀರು ಹಾಗೂ ಅತೀ ಕಡಿಮೆ ಖರ್ಚು ಮಾಡಿ ಸಮೃದ್ಧಿಯ ಬೆಳೆ ತೆಗೆಯುವ “ಸ್ವಯಂ ಚಾಲಿತ ನೀರಾವರಿ ಯೋಜನೆ’ಯಾಗಿದೆ. ಈ ಯೋಜನೆಯನ್ನು ಅತೀ ಸಣ್ಣ ಹಿಡುವಳಿದಾರರಿಂದ ಹಿಡಿದು, ದೊಡ್ಡ ಪ್ರಮಾಣದ ರೈತರು ಕೂಡ ಅಳವಡಿಸಿಕೊಳ್ಳಬಹುದು.
ಒಂದು ಎಕರೆ ಜಮೀನಿಗೆ ಕನಿಷ್ಠ ಮೂರು ವಾಲ್ಟ್ ಆದರೂ ಪೈಪ್‌ಗೆ ಜೋಡಿಸಬೇಕು. ಬೆಳೆಯುವ ಬೆಳೆ, ಹಣ್ಣಿನ ಗಿಡಗಳು, ತರಕಾರಿ, ತೋಟಗಾರಿಕೆ ಬೆಳೆಗಳಿಗನುಗುಣವಾಗಿ ಪೈಪ್ ಹಾಗೂ ವಾಲ್ಟ್‌ಗಳ ಗಾತ್ರ ನಿರ್ಧರಿಸಬೇಕಾಗುತ್ತದೆ. ವಾಲ್ಟ್ ನಿಯಂತ್ರಿಸಲು ಕನಿಷ್ಠ 24 ವೋಲ್ಟ್ ವಿದ್ಯುತ್ ಸಾಕಾಗುತ್ತದೆ. ಈ ತಂತ್ರಜ್ಞಾನದಲ್ಲಿ “ಸೊಲಿನೋಲ್ಟ್’ ಕವಾಟುಗಳನ್ನು ಅಳವಡಿಸಿರುವುದರಿಂದ ನೀರು ಚಾಲನೆ ಅಥವಾ ಸ್ಥಗಿತಗೊಂಡಾಗ ಮಾತ್ರವಲ್ಲ, ಫಿಲ್ಟರ್ ಬ್ಲಾಕ್ ಆದರೂ ತಕ್ಷಣ ಸಂದೇಶ ಬರುತ್ತದೆ. ಈ ಯೋಜನೆಯಲ್ಲಿ ಟೈಮರ್ ಅಳವಡಿಸಿಕೊಳ್ಳುವ ಸವಲತ್ತು ಇರುವುದರಿಂದ ಮೋಟಾರು ನಿಗದಿಪಡಿಸಿದ ಸಮಯದಲ್ಲಿ ತಾನಾಗಿ ಚಾಲನೆಯಾಗಿ ಹಾಗೂ ಸ್ಥಗಿತಗೊಳ್ಳುತ್ತದೆ.
Related Articles
ಈ ತಂತ್ರಜ್ಞಾನ ಅಳವಡಿಸಲು ಹೊಲದಲ್ಲಿ ಬೆಳೆಯುವ ಬೆಳೆ, ವಿಸ್ತೀರ್ಣಕ್ಕನುಗುಣವನ್ನು ಅವಲಂಬಿಸುತ್ತದೆ. ಕಂಪನಿಯ ನುರಿತ ಕೆಲಸಗಾರರು, ರೈತರ ಮನೆ ಬಾಗಿಲಿಗೆ ಬಂದು, ಯಂತ್ರೋಪಕರಣ ಸ್ಥಾಪಿಸಿ, ಪೈಪ್ ಜೋಡಿಸಿ, ಹೊಲ ಅಥವಾ ತೋಟಕ್ಕೆ ನೀರುಣಿಸಿ, ಗ್ರಾಹಕರಿಗೆ ತೃಪ್ತಿಯಾದ ನಂತರ, ಅವರ ಅಪ್ಪಣೆ ಪಡೆದು ಹಿಂತಿರುಗುತ್ತಾರೆ ಹಾಗೂ ಇಲ್ಲಿ ತಜ್ಞರ ಸೇವೆ ಸದಾ ಲಭ್ಯವಿರುತ್ತದೆ.
Advertisement
ಸ್ವಯಂಚಾಲಿತ ಪಂಪ್‌ಸೆಟ್ ಅಳವಡಿಸುವುದರಿಂದ ದೊರೆಯುವ ಲಾಭ– ರೈತರು ಕೂಲಿಯಾಳುಗಳ ಮೇಲೆ ಅವಲಂಬಿಸುವ ಅವಶ್ಯವಿಲ್ಲ. ಮನೆಯಲ್ಲಿಯೇ ಕುಳಿತು, ತಮ್ಮ ಹೊಲಗಳಿಗೆ ನೀರುಣಿಸಬಹುದು. ದೂರದ ಅಂತರವಿಲ್ಲದೇ (ಬೇರೆ ಊರಿಗೆ ಹೋದಾಗ, ಆ ಊರಿನಿಂದಲೇ ಮೋಟಾರ್ ಚಾಲನೆ ಹಾಗೂ ಸ್ಥಗಿತಗೊಳಿಸಬಹುದು) ಕಾರ್ಯ ನಿರ್ವಹಿಸಬಹುದು. – ಟೈಮರ್‌ನಿಂದಾಗಿ ಮಾನವಶಕ್ತಿ ಅವಶ್ಯವಿಲ್ಲ. – ನೀರಿನ ಮಟ್ಟ ಕಡಿಮೆಯಾದಾಗ ಹಾಗೂ ಅಧಿಕ ವೋಲ್ಟೆàಜ್ ಬಂದಾಗ, ಪಂಪ್‌ಸೆಟ್ ತಾನಾಗಿ ಸ್ಥಗಿತಗೊಳ್ಳುವುದರಿಂದ, ಮೋಟಾರ್ ಸುಟ್ಟು ಹೋಗುವ ಪ್ರಮೇಯವಿಲ್ಲ. – ಇಂಥ ಯೋಜನೆಗೆ ಸರ್ಕಾರದಿಂದ (ಹನಿ ನೀರಾವರಿಗೆ) ಅನುದಾನ ಕೂಡ ಸಿಗುತ್ತದೆ. ಸ್ವಯಂಚಾಲಿತ ಹನಿ ನೀರಾವರಿ ಯೋಜನೆ ವಿಚಾರದಲ್ಲಿ ಇನ್ನೂ ಹೆಚ್ಚಿನ ಮಾಹಿತಿಗೆ: ವಿಕ್ರಮ್ – ಮೊಬೈಲ್ ಸಂಖ್ಯೆ- 9902025538 ಅಥವಾ 7019032558 ಸಂಪರ್ಕಿಸಿ. -ಯು.ಪಿ.ಪುರಾಣಿಕ್