Advertisement

ನಿದ್ರೆ, ಸಿನಿಮಾ, ಅಡುಗೆ…ಇದು ಸ್ಮೃತಿ ಮಂಧನಾ ದಿನಚರಿ

05:52 PM Apr 14, 2020 | keerthan |

ನವದೆಹಲಿ: ಕೋವಿಡ್-19 ಸೋಂಕು ಪ್ರಸರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಸದ್ಯ ದಿಗ್ಬಂಧನ ಘೋಷಿಸಲಾಗಿದೆ. ಅದರಂತೆ ಮನೆಯಲ್ಲೇ ಕಾಲ ಕಳೆಯುತ್ತಿರುವ ಕ್ರೀಡಾಪಟುಗಳು, ಒಂದಲ್ಲ ಒಂದು ರೀತಿಯಲ್ಲಿ ಸಮಯ ಕಳೆಯಲು ದಾರಿ ಹುಡುಕಿಕೊಂಡಿದ್ದಾರೆ. ಈ ಪೈಕಿ ಸ್ಮೃತಿ ಮಂಧನಾ ಏನು ಮಾಡುತ್ತಿರಬಹುದು?

Advertisement

ಸ್ಮೃತಿ ಮಂಧನಾ ದಿನಕ್ಕೆ 10 ಗಂಟೆ ಮಲಗುತ್ತಿದ್ದಾರಂತೆ. ಇನ್ನುಳಿದಂತೆ ಸಿನಿಮಾ ನೋಡುತ್ತಿದ್ದಾರೆ. ಹೆಸರೇ ಮರೆತು ಹೋಗುವಷ್ಟು ಸಿನಿಮಾ ನೋಡುತ್ತಿರುವುದಾಗಿ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸ್ಮತಿ ಮಂಧನ ಬರೀ ಸಿನಿಮಾ ಮಾತ್ರ ನೋಡುತ್ತಿಲ್ಲ, ಅಂತರ್ಜಾಲದಲ್ಲಿ ಲೂಡಾ ಕೂಡ ಆಡುತ್ತಿದ್ದಾರಂತೆ.

ಇದೆಲ್ಲದರ ಹೊರತಾಗಿ ಅಮ್ಮನಿಗೆ ಅಡುಗೆ ಮಾಡಲು ಮತ್ತು ಪಾತ್ರೆ ತೊಳೆಯಲು ಸಹಾಯ ಮಾಡುತ್ತಿದ್ದೇನೆ ಎಂದು ಸ್ಮೃತಿ ಮಂಧನಾ ತಿಳಿಸಿದ್ದಾರೆ. ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿಯಾಗಿರುವ ಮಂಧನಾ ಟಿ ಟ್ವೆಂಟಿ ತಂಡ ಉಪನಾಯಕಿಯೂ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next