Advertisement
ಐಸಿಸಿ ಗೌರವ ಸಂಪಾದಿಸಿದ ಭಾರತದ ಮತ್ತಿಬ್ಬರು ಆಟಗಾರ್ತಿಯರೆಂದರೆ ಹರ್ಮನ್‌ಪ್ರೀತ್ ಕೌರ್ ಮತ್ತು ಪೂನಂ ಯಾದವ್. ಇವರಲ್ಲಿ ಕೌರ್ ವರ್ಷದ ಏಕದಿನ ತಂಡದ ನಾಯಕಿಯಾಗಿ ಕಾಣಿಸಿಕೊಂಡರೆ, ಪೂನಂ ಏಕದಿನ ಹಾಗೂ ಟಿ20 ತಂಡಗಳೆರಡರಲ್ಲೂ ಸ್ಥಾನ ಪಡೆದಿದ್ದಾರೆ.
ಸ್ಮತಿ ಮಂಧನಾ ಅವರ 2018ರ ಸಾಧನೆ ಅಮೋಘ. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆಲ್ಲುವಲ್ಲಿ, ಶ್ರೀಲಂಕಾ ವಿರುದ್ಧ ಟಿ20 ಹಾಗೂ ಏಕದಿನ ಸರಣಿ ಜಯಿಸುವಲ್ಲಿ ಮಂಧನಾ ಪ್ರಮುಖ ಪಾತ್ರ ವಹಿಸಿದ್ದರು. 2018ರ 12 ಏಕದಿನ ಪಂದ್ಯಗಳಲ್ಲಿ 66.90ರ ಸರಾಸರಿಯಲ್ಲಿ ಸರ್ವಾಧಿಕ 669 ರನ್ ಬಾರಿಸಿದ್ದು ಮಂಧನಾ ಸಾಧನೆ. ಇದರಲ್ಲಿ ಒಂದು ಶತಕ, 7 ಅರ್ಧ ಶತಕ ಒಳಗೊಂಡಿದೆ.
Related Articles
Advertisement
ವರ್ಷದ ಏಕದಿನ ಆಟಗಾರ್ತಿಯರ ಯಾದಿಯ ರೇಸ್‌ನಲ್ಲಿದ್ದ ನ್ಯೂಜಿಲ್ಯಾಂಡಿನ ಸೋಫಿ ಡಿವೈನ್ 2ನೇ, ಪಾಕಿಸ್ಥಾನದ ಸನಾ ಮಿರ್ 3ನೇ ಸ್ಥಾನ ಸಂಪಾದಿಸಿದರು.
ಹರ್ಮನ್‌ಪ್ರೀತ್ ಟಿ20 ನಾಯಕಿಇದೇ ವೇಳೆ ಐಸಿಸಿ ವರ್ಷದ ಏಕದಿನ ಹಾಗೂ ಟಿ20 ತಂಡಗಳನ್ನೂ ಪ್ರಕಟಿಸಿದೆ. ಭಾರತದ ಹರ್ಮನ್‌ಪ್ರೀತ್ ಅವರಿಗೆ ಟಿ20 ತಂಡದ ನಾಯಕಿಯ ಗೌರವ ಒಲಿದಿದೆ. ನ್ಯೂಜಿಲ್ಯಾಂಡಿನ ಸುಝೀ ಬೇಟ್ಸ್ ಏಕದಿನ ತಂಡದ ನಾಯಕಿಯಾಗಿದ್ದಾರೆ. ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಕೌರ್ ನೇತೃತ್ವದ ಭಾರತ ಸೆಮಿಫೈನಲ್ ತನಕ ಸಾಗಿತ್ತು. ಈ ಕೂಟದಲ್ಲಿ ಕೌರ್ ಗಳಿಕೆ 183 ರನ್. ಸ್ಟ್ರೈಕ್‌ರೇಟ್ 160.5. 2018ರಲ್ಲಿ 25 ಟಿ20 ಪಂದ್ಯಗಳನ್ನಾಡಿದ ಹರ್ಮನ್‌ಪ್ರೀತ್ ಕೌರ್ 126.2ರ ಸ್ಟ್ರೈಕ್‌ರೇಟ್‌ನಲ್ಲಿ 663 ರನ್ ಹೊಡೆದಿದ್ದಾರೆ.