Advertisement

Smile: ಚಿಂತೆಯನ್ನು ದೂರಮಾಡಿ ಒಮ್ಮೆ ನೀ ನಗು

03:41 PM Jan 09, 2025 | Team Udayavani |

ಒಂದು ನಗು ಎಲ್ಲ ಸಮಸ್ಯೆ ದೂರ ಮಾಡಬಹುದು.  ಮನಸ್ಸಿನ ದುಗುಡಗಳಿಗೆ ನಗುವೇ ಮದ್ದು ಎಂದರೆ ತಪ್ಪಿಲ್ಲ. ಅದರಲ್ಲು ಪ್ರೀತಿ ಪಾತ್ರರು ಜತೆ ಇದ್ದಾಗ ಅವರ ನಗು ನೋಡೋದೆ ಚಂದ. ನನ್ನಮ್ಮ ಯಾವಾಗ್ಲೂ  ಹೇಳ್ಳೋರು ನಿನ್‌ ನೆಗಿ ಕಂಡ್ರೆ ಸಾಕ್‌ ಒಂತರಾ ನೆಮ್ಮದಿ, ತಲೆಬಿಸಿ ಎಲ್ಲ ಹೋತ್‌ ಅಂತ.

Advertisement

ನಾನು ಚಿಕ್ಕವಳಿದ್ದಾಗಿಂದ್ಲು ರೂಢಿಸಿಕೊಂಡಿರೋ ಒಳ್ಳೆ ಬುದ್ಧಿ ಅಂದ್ರೆ  ನನ್ನ ಜತೆ ಇರೋರನ್ನ ನಗಿಸ್ತಾ ಇರಬೇಕು ಅನ್ನೋದು. ನಗ್ತಾ ಇರೋ ವ್ಯಕ್ತಿನ ನೋಡಿದಾಗ ಅವನ ಆತ್ಮ ವಿಶ್ವಾಸವನ್ನ ಬಿಂಬಿಸುವಂತೆ ಇರುತ್ತದೆ.   ನಗು ಸಂಬಂಧವನ್ನ ಬಲಪಡಿಸುತ್ತದೆ  ಸ್ನೇಹ, ಪ್ರೀತಿ ಹಾಗೂ ಆತ್ಮೀಯತೆಯ ಸ್ಥಾಪನೆಗೆ ನಗು ಅನಿವಾರ್ಯ.

ನಗುವ ಹಿರಿಮೆಯನ್ನು ಮೆರೆದ ಕನ್ನಡದ ಮಾತುಗಳಿವೆ: ನಗುವಿನ ಹೂವಿನ ಮರೆದ ಬಡಕೆ, ಬದುಕು ಬಾಳಿನಲ್ಲಿ ಸೋಲದು ಕಶಕೆ, ಅಂದಹಾಗೆ  ನಗುವುದು  ತಾನೇ ಜೀವನದ ಅತ್ಯುತ್ತಮ ಔಷಧ. ಅದು ಕೇವಲ ಮುಖ ಭಾವನೇ ಅಲ್ಲ  ಒಂದು ರೀತಿಯ ಚಿಂತನೆ. ಕೆಲವರ ಮುಖದಲ್ಲಿ ನಗುವಿನ ಛಾಯೆ ಇರುವುದೇ ಇಲ್ಲ. ಅದು ಅವರವರ ವ್ಯಕ್ತಿತ್ವ ನಗುವಿಲ್ಲದ ಮೊಗ ಚಂದಿರನಿಲ್ಲದ ಬಾನಿನಂತೆ ಕಳೆ ಹೊಳಪು ಇರದು. ಒಬ್ಬ ಮನುಷ್ಯ ಸೋತು ಕೂತಾಗ ಅವನ ಜೀವನ ಸಂಗಾತಿ ಇಲ್ಲವೆ ಮನಸ್ಸಿಗೆ ಹತ್ತಿರವಾದಂತವರ ಒಂದು ನಗು ಸಾಕಂತೆ ಪುನಃ ಜೀವಿಸಲು.

ಹಾಗೆಂದು ಯಾವಾಗ್ಲೂ ನಗ್ತಾ ಇದ್ರೆ ಹುಚ್ಚು ಅಂತಾರಂತೆ ಅಲ್ವಾ. ಎಲ್ಲದಕ್ಕೂ ಮಿತಿ ಇದೆ. ಅನಾಹುತ ಆದಲ್ಲೆಲ್ಲಾ ಹೋಗಿ ನಗ್ತಾ ಇದ್ರೆ ನಾಲ್ಕು ಬಾರಿಸಬೋದು. ಜೀವನ ಅಂದ್ರೇನೆ ಹಾಗೆ ಎಲ್ಲ ಇತಿ ಮಿತಿ ಅಲ್ಲಿದ್ರೇನೆ ಚಂದ. ಈಗಿನ ಕಾಲದಲ್ಲಿ ಕೆಲವು ಜನರನ್ನು ಕಂಡಾಗ ಎನಪ್ಪಾ ನಗೋಕು ದುಡ್ಡ್ ಕೊಡ್ಬೇಕಾ ಅಂತಾ ಅನಿಸಿದ್ದು ಉಂಟು. ಮತ್ತೂಬ್ಬರ ಮುಖದ ನಗು ಮೂಡಲು ನೀವು ಕಾರಣವಾದರೆ ಎಷ್ಟು ಚಂದ ಅಲ್ಲವೇ?.

- ಅನುಪಮ

Advertisement

ಆಳ್ವಾಸ್‌, ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next