Advertisement
ಸೆಲೆಬ್ರಿಟಿ ವೈಫ್ ಆಗಿರುವುದು ನಿಮ್ಮ ಕೆರಿಯರ್ ದೃಷ್ಟಿಯಿಂದ ಪ್ಲಸ್ ಅಥವಾ ಮೈನಸ್? ನಾನು ರಾಜಕೀಯದಲ್ಲಿ ಇರುವುದರಿಂದ ಸೆಲೆಬ್ರಿಟಿ ವೈಫ್ ಆಗಿರುವುದು ನನಗೆ ಪ್ಲಸ್ ಪಾಯಿಂಟ್. ಗಣೇಶ್ ಹೆಂಡತಿ ಎನ್ನುವ ಕಾರಣಕ್ಕೆ ನಾನು ಜನರಿಗೆ ಬೇಗ ಕನೆಕ್ಟ್ ಆಗ್ತಿàನಿ. ಸೆಲೆಬ್ರೆಟಿ ಹೆಂಡತಿ ಎಂದೇ ಸ್ವಲ್ಪ ಮಟ್ಟಿಗೆ ಪಾಪ್ಯುಲಾರಿಟಿ ಸಿಗುತ್ತದೆ. ರಾಜಕಾರಣಿಗೆ ಅದು ತುಂಬಾ ಮುಖ್ಯ. ಎಷ್ಟೋ ಸಭೆ, ರ್ಯಾಲಿಗಳಿಗೆ ಗಣೇಶ್ ಕೂಡ ಬರ್ತಾರೆ. ಅವರು ಬರ್ತಾರೆ ಎಂದು ತಿಳಿದರೆ ಸಭೆಗಳಿಗೆ ಬರುವ ಜನರ ಸಂಖ್ಯೆಯೂ ಜಾಸ್ತಿಯಾಗುತ್ತೆ.
ಹೇಳಿದ್ದನ್ನೇ ಪದೇಪದೆ ಹೇಳ್ತಾ ಇರ್ತಾರೆ. ಅದು ತುಂಬಾ ಕಿರಿಕಿರಿ ಮಾಡುತ್ತೆ. ಅವರಿಗೆ ಬಹಳ ಬೇಗ ಕ್ಷಮಿಸುವ ಗುಣ ಇದೆ. ಯಾವುದೇ ಮನಃಸ್ತಾಪ, ಜಗಳವನ್ನೂ ಅವರು ಬೆಳೆಸುವುದಿಲ್ಲ. ಎಲ್ಲವನ್ನೂ ಆ ಕ್ಷಣಕ್ಕೇ ಬಿಟ್ಟು ಮುಂದೆ ಹೋಗ್ತಾರೆ. ಅದು ನನಗೆ ತುಂಬಾ ಇಷ್ಟ. ನಿಮ್ಮಿಬ್ಬರ ಮಧ್ಯ ಸ್ಪರ್ಧೆ ನಡೆಯುವುದು ಯಾವ ವಿಷಯಕ್ಕೆ?
ಡಯಟ್ ಮತ್ತು ವಕೌìಟ್ ವಿಷಯದಲ್ಲಿ ನಾವಿಬ್ಬರೂ ಕಾಂಪಿಟೇಟರ್. ನಾನು ಫಾಲೋ ಮಾಡುವ ಡಯಟ್ ಪ್ಯಾಟರ್ನ್ ಬಗ್ಗೆ ಅವರಿಗೆ ಹೇಳ್ಳೋದೇ ಇಲ್ಲ. ಅವರಿಗೆ ಹೇಗೋ ಗೊತ್ತಾದಾಗ “ಕಳ್ಳಿ, ನನಗೆ ಹೇಳಲೇ ಇಲ್ಲ ಅಲ್ವಾ’ ಅಂತ ಹುಸಿ ಕೋಪ ತೋರಿಸ್ತಾರೆ. ಅವರು ಟ್ರೆಡ್‌ಮಿಲ್‌ನಲ್ಲಿ ಎಷ್ಟು ಕಿಲೋಮೀಟರ್ ವಾಕಿಂಗ್ ಮಾಡಿದ್ದಾರೆ ಅಂತ ನೋಡಿ, ನಾನು ಅವರಿಗಿಂತ ಹೆಚ್ಚು ವಾಕಿಂಗ್ ಮಾಡುತ್ತೇನೆ. ಅವರೂ ಹಾಗೆ ಮಾಡುತ್ತಾರೆ. ನನಗಿಂತ ಕನಿಷ್ಠ 1 ಕಿ.ಮೀ. ಆದರೂ ಹೆಚ್ಚು ವಾಕಿಂಗ್ ಮಾಡಲೇಬೇಕು ಅನ್ನೋದು ಅವರ ಗುರಿ. ಇದೊಂದು ವಿಷಯದಲ್ಲಿ ನಾವಿಬ್ಬರೂ ಸ್ಪರ್ಧಿಗಳೇ.
Related Articles
ನನ್ನ ವಿಷಯದಲ್ಲಿ ಈ ಸೂತ್ರ ಉಲ್ಟಾ ಆಗಿದೆ. ನಾನು ಮದುವೆಯಾದ ಹೊಸತರಲ್ಲಿ ಗಣೇಶ್ ಜೊತೆ ಹೊಂದಿಕೊಳ್ಳಲು ತುಂಬಾ ಕಷ್ಟ ಪಡ್ತಾ ಇದ್ದೆ. ಅವರ ಲೈಫ್ಸ್ಟೈಲ್, ಕೆಲಸದ ಸಮಯ, ಅವರನ್ನು ಹುಡುಕಿಕೊಂಡು ಬರುವ ಜನ… ಎಲ್ಲವೂ ನನಗೆ ಕಿರಿಕಿರಿ ಉಂಟು ಮಾಡುತ್ತಿದ್ದವು. ಕಾಲ ಕಳೆದಂತೆ ಎಲ್ಲಾ ಇಷ್ಟ ಆಗಲು ಶುರುವಾಯ್ತು. ಈಗ ನಾವಿಬ್ಬರು ಗಂಡ-ಹೆಂಡತಿ ಅನ್ನುವುದಕ್ಕಿಂತ ಬೆಸ್ಟ್ ಫ್ರೆಂಡ್ಸ್ ಅನ್ನಬಹುದು. ಅಷ್ಟು ಅನ್ಯೋನ್ಯತೆ ಇದೆ ಇಬ್ಬರ ಮಧ್ಯೆ.
Advertisement
ನೀವು ಮಾಡುವ ಅಡುಗೆಯಲ್ಲಿ ಗಣೇಶ್‌ಗೆ ಯಾವ ಖಾದ್ಯ ತುಂಬಾ ಇಷ್ಟ?ನಾನು ತುಂಬಾ ಚೆನ್ನಾಗಿ ಅಡುಗೆ ಮಾಡ್ತೀನಿ. ನಾನು ಮಾಡೋ ಎಲ್ಲಾ ಅಡುಗೆನೂ ಅವರಿಗೆ ಇಷ್ಟ. ಮೊನ್ನೆಯಷ್ಟೇ ಅಕ್ಕಿ ರೊಟ್ಟಿ, ಮಟನ್ à ರೋಸ್ಟ್ ಮಾಡಿದ್ದೆ. ಗಣೇಶ್ ನಮ್ಮಮ್ಮನಿಗೆ ಹೇಳ್ತಾ ಇದ್ರು, “ನಿಮ್ಮ ಮಗಳು ಅಪರೂಪಕ್ಕೆ ಅಡುಗೆ ಮಾಡಿದ್ರೂ, ತುಂಬಾ ಚೆನ್ನಾಗಿ ಅಡುಗೆ ಮಾಡ್ತಾಳೆ’ ಅಂತ. ಗಣೇಶ್ ತಿಂಡಿಪೋತ, ಏನು ಮಾಡಿದರೂ ಖುಷಿಪಟ್ಟು ತಿಂತಾರೆ. ಬಿರಿಯಾನಿ, ಚೈನೀಸ್, ಮೆಕ್ಸಿಕನ್ ಅಡುಗೆ ರುಚಿಯಾಗಿ ಮಾಡ್ತೇನೆ. ಬಾರ್ಬೆಕ್ಯೂ ಅಡುಗೆ ತಯಾರಿಸೋದ್ರಲ್ಲಿ ನಾನು ನಮ್ಮ ಫ್ಯಾಮಿಲಿಯಲ್ಲೇ ಫೇಮಸ್. ಗಣೇಶ್ ಅವರ ಕಾಸ್ಟೂéಮ್ ಡಿಸೈನರ್ ನೀವೇ ಅಂತೆ? ಅವರಿಗಾಗಿ ಎಲ್ಲಿ ಶಾಪಿಂಗ್ ಮಾಡ್ತೀರ?
“ಮುಂಗಾರು ಮಳೆ’ ಚಿತ್ರ ರಿಲೀಸ್ ಆದಾಗ, ಅವರು ಹಾಕಿದ್ದ 6 ಪಾಕೆಟ್ ಪ್ಯಾಂಟ್, ಆ್ಯಕ್ಸಸರೀಸ್ ಎಲ್ಲಾ ಟ್ರೆಂಡ್ ಸೆಟ್ ಮಾಡಿದ್ದವು. ಆಗ ನನಗೆ ಗೊತ್ತಾದ ಒಂದು ವಿಷಯ ಏನಂದ್ರೆ, ಗಣೇಶ್‌ರ ಸ್ಟೈಲ್ ಅನುಕರಣೆ ಮಾಡುವ ಒಂದು ವರ್ಗವೇ ಇದೆ ಅಂತ. ಹಾಗಾಗಿ, ಅವರು ಟ್ರೆಂಡಿ ಮತ್ತು ಸ್ಟೈಲಿಷ್ ಉಡುಗೆಗಳನ್ನೇ ತೊಡಬೇಕು ಅಂತ ನನ್ನ ಆಸೆ. ಅದಕ್ಕೆ ನಾನೇ ಅವರಿಗೆ ಕಾಸ್ಟೂéಮ್ ಸೆಲೆಕ್ಟ್ ಮಾಡೋಕೆ ಶುರುಮಾಡಿದೆ. ನನ್ನ ಹೆತ್ತವರು ದುಬೈನಲ್ಲಿದ್ದಾರೆ. ವರ್ಷಕ್ಕೆ 2 ಬಾರಿ ಅಲ್ಲಿಗೆ ಹೋಗುತ್ತೇವೆ. ನಮ್ಮ ಬಹುತೇಕ ಶಾಪಿಂಗ್ ಅಲ್ಲೇ ನಡೆಯುತ್ತೆ. ನಾವು ಔಟಿಂಗ್ ಅಂತ ಹೊರಗೆ ಹೋದ್ರೆ ಮೊದಲು ಹೋಗೋದೇ ಶಾಪಿಂಗ್ ಮಾಲ್‌ಗೆ. ನಮ್ಮಿಬ್ಬರಿಗೂ ಶಾಪಿಂಗ್ ಕ್ರೇಜ್ ತುಂಬಾ ಇದೆ. ಮನೆಯಲ್ಲಿ ಒಂದು ರಾಶಿ ಬಟ್ಟೆ ಇದಾವೆ. ಬಟ್ಟೆ ಇಡೋಕೆ ಜಾಗ ಇಲ್ಲ ಅನ್ನೋ ಅಷ್ಟು. ಇಬ್ಬರೂ ಬ್ಯುಸಿ ಇರಿ¤àರ. ಮಕ್ಕಳನ್ನು ಹೇಗೆ ಸಂಭಾಳಿಸುತ್ತೀರ?
ಗಣೇಶ್ ಪಕ್ಕಾ ಫ್ಯಾಮಿಲಿ ಮ್ಯಾನ್. ಅವರಿಗೆ ಶೂಟಿಂಗ್ ಇಲ್ಲದಿದ್ದಾಗ, ಮನೆ ಬಿಟ್ಟು ಆಚೆ ಕಾಲಿಡೋದಿಲ್ಲ. ನಾನು ಕೆಲಸದ ಕಾರಣ ಬ್ಯುಸಿ ಇದ್ದಾಗ ಮಕ್ಕಳ ಎಲ್ಲಾ ಬೇಕು ಬೇಡಗಳನ್ನು ಅವರೇ ನೋಡಿಕೊಳ್ಳುತ್ತಾರೆ. ವಿಹಾನ್‌ಗೆ ಇನ್ನೂ ಎರಡೂವರೆ ವರ್ಷ ವಯಸ್ಸು. ಅವನು ಅಪ್ಪ ಇದ್ದರೆ ನನ್ನನ್ನು ಕೇಳುವುದೂ ಇಲ್ಲ. ರಾಜಕೀಯಕ್ಕೆ ಸೇರಲು ಕಾರಣ?
ನನಗೆ ಮೊದಲಿನಿಂದಲೂ ರಾಜಕಾರಣದ ಬಗ್ಗೆ ಆಸಕ್ತಿ. ಆ ಬಗ್ಗೆ ತುಂಬಾ ಓದ್ತಾ ಇದ್ದೆ. ಹಾಗಾಗಿ ತಿಳಿವಳಿಕೆ ಇತ್ತು. ಅದೂ ಅಲ್ಲದೆ, ನನಗೆ ಎಲ್ಲರಿಗಿಂತ ವಿಭಿನ್ನವಾಗಿ ಏನನ್ನಾದ್ರೂ ಸಾಧಿಸಬೇಕು ಅಂತ ಆಸೆ. ಅದಕ್ಕೆ ಸರಿಯಗಿ ರಾಜಕೀಯಕ್ಕೆ ಬರಲು ಅವಕಾಶ ಸಿಕ್ಕಿತು. 5 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿದ್ದೀರಿ. ಹಾಗೆ ಫೇಮಸ್ ಆಗುವ ಸೆಲೆಬ್ರಿಟಿಗಳಿಗೆ ಕೀಳು ಮಟ್ಟದ ಟೀಕೆ ಎದುರಾಗೋದು ಸಾಮಾನ್ಯ. ನಿಮಗೂ ಅಂಥ ಅನುಭವಗಳು ಇವೆಯಾ?
ಖಂಡಿತಾ. ಕೀಳು ಮಟ್ಟದ ಕಮೆಂಟ್‌ಗಳನ್ನು ನಾನೂ ಎದುರಿಸುತ್ತಿರುತ್ತೇನೆ. ಮೊದಲಿಗೆ ಕೆಟ್ಟ ಕಮೆಂಟ್‌ಗಳನ್ನು ನೋಡಿ ತುಂಬಾ ಡಿಪ್ರಸ್ ಆಗ್ತಿದ್ದೆ. ಆಮೇಲೆ ಅನ್ನಿಸ್ತು, ಇದು ತಲೆಕೆಡಿಸಿಕೊಳ್ಳುವಂಥ ವಿಷಯ ಅಲ್ಲವೇ ಅಲ್ಲ. ಇಂಥ ಕಮೆಂಟ್‌ಗಳಿಂದ ನನ್ನ ಗೌರವ ಕಡಿಮೆಯಾಗುವುದಿಲ್ಲ. ಅದು ಆ ವ್ಯಕ್ತಿಯ ಸಂಸ್ಕಾರ, ಅವರನ್ನು ಪೋಷಕರು ಬೆಳೆಸಿರುವ ರೀತಿ ತೋರಿಸುತ್ತದೆ ಅಂತ. ಈಗ ನಾನು ಅಂಥದ್ದಕ್ಕೆಲ್ಲಾ ಹೆದರುವುದಿಲ್ಲ. ನನ್ನನ್ನು ಇಷ್ಟಪಡುವ, ನನ್ನ ಪೋಸ್ಟ್‌ಗಳನ್ನು ಶೇರ್ ಮಾಡುವ ಸಾವಿರಾರು ಜನ ಇದ್ದಾರೆ. ನಿಮ್ಮಿಬ್ಬರ ನೆಚ್ಚಿನ ಪ್ರವಾಸಿ ತಾಣ ಯಾವುದು?
ಮಕ್ಕಳನ್ನು ಕರೆದುಕೊಂಡು ವಿದೇಶಗಳಿಗೆ ಹೋಗ್ತಾ ಇರಿ¤àವಿ. ವಾರಕ್ಕೊಮ್ಮೆ ಯಾವುದಾರೂ ರೆಸ್ಟೊರೆಂಟ್‌ಗೆ ಡಿನ್ನರ್ ಅಥವಾ ಲಂಚ್‌ಗೆ ಹೋಗ್ತಿàವಿ. ಕೆಲವೊಮ್ಮೆ ರಿಲ್ಯಾಕ್ಸ್ ಆಗೋಕೆ ನಾವಿಬ್ಬರೇ ಹೋಗೋದೂ ಇದೆ. ಆಗ ಯಾವುದಾದರೂ ರೆಸಾರ್ಟ್‌ಗೆ ಹೋಗಿ ಬರುತ್ತೇವೆ. ಆಗೆಲ್ಲ ಗಣೇಶ್ ಅವರೇ ಡ್ರೈವ್ ಮಾಡ್ತಾರೆ. ಆಗ ಇಬ್ಬರೂ ನಮ್ಮ ನಮ್ಮ ಕೆಲಸದ ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ಚಾರಿತ್ರ್ಯ ಮತ್ತು ವಿಹಾನ್‌ಗೆ ಇಬ್ಬರಲ್ಲಿ ಹೆಚ್ಚು ಫೇವರಿಟ್ ಯಾರು?
ಸಾಮಾನ್ಯವಾಗಿ ಮಗಳಿಗೆ ಅಪ್ಪ, ಮಗನಿಗೆ ಅಮ್ಮ ಫೇವರಿಟ್ ಇರ್ತಾರೆ. ಆದರೆ, ನಮ್ಮ ಮನೆಯಲ್ಲಿ ಇದು ಉಲ್ಟಾ. ಚಾರಿತ್ರ್ಯಗೆ ನನ್ನ ಜೊತೆ ಅಟ್ಯಾಚ್‌ಮೆಂಟ್ ಜಾಸ್ತಿ, ವಿಹಾನ್‌ಗೆ ಅಪ್ಪನ ಜೊತೆ. ಚಾರಿತ್ರ್ಯ ಹುಟ್ಟಿದಾಗ ನಾನು ಅಷ್ಟಾಗಿ ಬ್ಯುಸಿ ಇರಲಿಲ್ಲ. ಹಾಗಾಗಿ, ಅವಳು ನನ್ನ ಜೊತೆಯೇ ಹೆಚ್ಚಿನ ಸಮಯ ಇರ್ತಾ ಇದ್ದಳು. ಅವಳು ಅಮ್ಮನ ಮಗಳಾದಳು. ಜೊತೆಗೆ, ಅವಳು ನನ್ನನ್ನು ತುಂಬಾ ಅನುಕರಣೆ ಮಾಡ್ತಾಳೆ. ಈಗ ಅವಳಿಗೆ 8 ವರ್ಷ ಅಷ್ಟೇ, ಆದರೆ ಎಷ್ಟು ಚೆನ್ನಾಗಿ ಅಡುಗೆ ಮಾಡ್ತಾಳೆ ಗೊತ್ತಾ? ವಸ್ತ್ರ ವಿನ್ಯಾಸದಲ್ಲಿಯೂ ಆಸಕ್ತಿ ಇದೆ. ಮಗ ಹುಟ್ಟುವಾಗ ನಾನು ರಾಜಕೀಯದಲ್ಲಿ ಬ್ಯುಸಿ ಆಗಿದ್ದೆ. ಬೇರೆ ಬೇರೆ ಕೆಲಸಗಳ ಒತ್ತಡ ಇರ್ತಾ ಇತ್ತು. ಹೀಗಾಗಿ ಗಣೇಶ್ ಅವನ ಜವಾಬ್ದಾರಿ ತಗೊಂಡ್ರು. ಅವನನ್ನು ಅವರೇ ಮಲಗಿಸ್ತಾ ಇದ್ದದ್ದು. ಈಗಲೂ ವಿಹಾನ್ ಅಪ್ಪನ ಜೊತೆಯೇ ಮಲಗುವುದು. ಸಿನಿಮಾ ನಿರ್ಮಾಣ, ರಾಜಕೀಯ, ವಸ್ತ್ರ ವಿನ್ಯಾಸ, ಒಳಾಂಗಣ ವಿನ್ಯಾಸ ಜೊತೆಗೆ ಸಂಸಾರ. ಎಲ್ಲವನ್ನೂ ಹೇಗೆ ನಿಭಾಯಿಸುತ್ತೀರಿ?
ನಾನು ಸದಾ ಚಟುವಟಿಕೆಯಿಂದ ಇರಿ¤àನಿ. ನನ್ನ ಮೊದಲ ಆದ್ಯತೆ ಮಕ್ಕಳು. ರಾತ್ರಿ 3 ಗಂಟೆಗೆ ಮಲಗಿದರೂ, ಬೆಳಗ್ಗೆ ಆರಕ್ಕೆಲ್ಲ ಏಳಲೇಬೇಕು. ಮಗಳನ್ನು ರೆಡಿ ಮಾಡಿ ಸ್ಕೂಲಿಗೆ ಕಳಿಸಬೇಕು. ಅವರ ಊಟ ತಿಂಡಿ ಬಗ್ಗೆ ನಿಗಾ ಇರಿಸಬೇಕು. ಆಮೇಲೆ ರಾಜಕೀಯಕ್ಕೆ ಸಂಬಂಧಿಸಿದ ಸಭೆ, ಸಮಾರಂಭ, ಟ್ವೀಟ್‌ಗಳು ಅಂತ ಮುಳುಗಿ ಹೋಗ್ತೀನೆ. ಇವೆಲ್ಲದರ ಜೊತೆ ಸಮಯ ಉಳಿಸಿಕೊಂಡು ಡಿಸೈನಿಂಗ್ ಕಡೆ ಗಮನ ನೀಡುತ್ತೇನೆ. ನಾನು ಒಳ್ಳೆಯ ಮಾತುಗಾರ್ತಿ. ಎಲ್ಲರ ಜೊತೆ ನಗು ನಗುತ್ತಾ ಮಾತಾಡ್ತೀನಿ. ಇದು ರಾಜಕಾರಣಿ ಮತ್ತು ನಿರ್ಮಾಪಕಿಯಾಗಿ ನನ್ನ ಸಾಕಷ್ಟು ಕೆಲಸಗಳನ್ನು ಆರಾಮವಾಗಿ ನಡೆಸಲು ಸಹಾಯ ಮಾಡಿದೆ. ಇಷ್ಟೆಲ್ಲಾ ಕೆಲಸಗಳ ಮಧ್ಯೆ ನಿಮಗೆ ಅಂತ ಸಿಗುವ ಸಮಯವನ್ನು ಹೇಗೆ ಕಳೀತೀರ?
ಬೆಳಗ್ಗೆ ಒಂದು ಕಪ್ ಟೀ ಜೊತೆ ಪೇಪರ್ ಓದೋದು ಮೆಚ್ಚಿನ ಹವ್ಯಾಸ. ಅದಕ್ಕಂತೂ ಹೇಗಾದರೂ ಸಮಯ ಹೊಂದಿಸಿಕೊಳ್ಳುತ್ತೇನೆ. ದಿನದಲ್ಲಿ 45 ನಿಮಿಷ ಜಿಮ್, ರಾತ್ರಿ ಮಲಗೋ ಮುನ್ನ ಕನಿಷ್ಠ 3 ಪೇಜ್ ಆದರೂ ಪುಸ್ತಕ ಓದಬೇಕು. ಇಷ್ಟಕ್ಕೆ ಸಮಯ ಸಿಕ್ಕರೆ, ಆ ದಿನ ಸಾರ್ಥಕ ಅನ್ನಿಸುತ್ತೆ. ಚೇತನ ಜೆ.ಕೆ