Advertisement

ಮಣಿಪಾಲ MITಯಲ್ಲಿ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌

02:43 AM Jul 27, 2020 | Hari Prasad |

ಉಡುಪಿ: ಭಾರತ ಸರಕಾರದ ಮಾನವ ಸಂಪದ ಅಭಿವೃದ್ಧಿ ಸಚಿವಾಲಯದ ಇನ್ನೋವೇಶನ್‌ ಸೆಲ್‌ ಆಯೋಜಿಸುವ ಸ್ಮಾರ್ಟ್‌ ಇಂಡಿಯ ಹ್ಯಾಕಥಾನ್‌ (ಎಸ್‌ಐಎಚ್‌) 2020ರಲ್ಲಿ ಮಣಿಪಾಲ ಎಂಐಟಿ ನೋಡಲ್‌ ಕೇಂದ್ರವಾಗಿ ಆಯ್ಕೆಯಾಗಿದೆ.

Advertisement

ಈ ಬಾರಿ ಕೋವಿಡ್ 19 ಕಾರಣದಿಂದ ಆನ್‌ಲೈನ್‌ ಮೂಲಕ ಸ್ಪರ್ಧೆ ನಡೆಯಲಿದೆ.

ಆ. 1ರ ಬೆಳಗ್ಗೆ 8 ಗಂಟೆಗೆ ಎಂಐಟಿ ಕೇಂದ್ರದಲ್ಲಿ ನಡೆಯುವ ಹ್ಯಾಕಥಾನ್‌ನಲ್ಲಿ 23 ತಂಡಗಳ 138 ಸ್ಪರ್ಧಾಳುಗಳು ಭಾಗವಹಿಸುವರು.

ಇದರಲ್ಲಿ ಬೆಮೆಲ್‌ ಲಿ., ಬಿಇಎಲ್‌, ಎನ್‌ಸಿಆರ್‌ ನಿಗಮ (ಭಾರತ) ಪ್ರೈ.ಲಿ. ಈ ಮೂರು ಸಂಸ್ಥೆಗಳು ನೀಡಿರುವ ಆರು ಸಮಸ್ಯೆಗಳನ್ನು ಹ್ಯಾಕಥಾನ್‌ನಲ್ಲಿ ಪರಿಹರಿಸಲಾಗುವುದು. ಪ್ರತಿ ಸಮಸ್ಯೆಯನ್ನು ಪರಿಹರಿಸಿದ ತಂಡಕ್ಕೆ 1 ಲ.ರೂ. ಬಹುಮಾನ ನೀಡಲಾಗುವುದು.

ಆ. 1: ಪ್ರಧಾನಿ ಸಂವಾದ
ಇದೇ ವೇಳೆ ಹೊಸದಿಲ್ಲಿಯಲ್ಲಿ ನಡೆಯುವ ಕೇಂದ್ರ ಸ್ಥಾನದ ಆನ್‌ಲೈನ್‌ ಉದ್ಘಾಟನೆಯನ್ನು ಕೇಂದ್ರ ಮಾನವ ಸಂಪದ ಅಭಿವೃದ್ಧಿ ಸಚಿವರು ನೆರವೇರಿಸುವರು. ಆ. 1ರ ರಾತ್ರಿ 7ಕ್ಕೆ ಪ್ರಧಾನಿಯವರು ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್‌ನಲ್ಲಿ ಸಂವಾದ ನಡೆಸುವರು.

Advertisement

ದಿನ ನಿತ್ಯದ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ವಿದ್ಯಾರ್ಥಿಗಳಿಗೆ ರೂಪಿಸಿದ ರಾಷ್ಟ್ರ ಮಟ್ಟದ ವೇದಿಕೆ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ ಆಗಿದೆ. 2017ರಿಂದ ಎಸ್‌ಐಎಚ್‌ ಸಾಫ್ಟ್ವೇರ್‌ ಮತ್ತು ಎಸ್‌ಐಎಚ್‌ ಹಾರ್ಡ್‌ವೇರ್‌ ವಿಭಾಗದಲ್ಲಿ ಹ್ಯಾಕಥಾನ್‌ ನಡೆಸಲಾಗುತ್ತಿದೆ. ಪ್ರತಿ ವರ್ಷ ವಿವಿಧ ನೋಡಲ್‌ ಸೆಂಟರ್‌ಗಳಲ್ಲಿ ವಿದ್ಯಾರ್ಥಿಗಳು, ಕೈಗಾರಿಕಾ ಪ್ರತಿನಿಧಿಗಳು ಪಾಲ್ಗೊಂಡು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವರು.

ಆನ್‌ಲೈನ್‌ ನಡೆಯುವ ಹ್ಯಾಕಥಾನ್‌ನಲ್ಲಿ ವಿದ್ಯಾರ್ಥಿಗಳು, ಸಮನ್ವಯಕಾರರು, ಕೈಗಾರಿಕಾ ಮೌಲ್ಯಮಾಪಕರು ಡಿಜಿಟಲ್‌ ವೇದಿಕೆಯಲ್ಲಿ ಜತೆಗೂಡಿ ಕಾರ್ಯನಿರ್ವಹಿಸುವರು. ಸಚಿವಾಲಯದ ಇನ್ನೋವೇಶನ್‌ ಸೆಂಟರ್‌ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಕೇಂದ್ರ ಸ್ಥಾನದಲ್ಲಿದ್ದು ಮೇಲ್ವಿಚಾರಣೆ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next