Advertisement

ಸ್ಮಾರ್ಟ್‌ ಸಿಟಿ ಪರಿಸರಕ್ಕೆ ಮಾರಕ!

07:45 AM Jul 23, 2017 | Team Udayavani |

ಲಂಡನ್‌: ವೇಗವಾಗಿ ಹೆಚ್ಚುತ್ತಿರುವ ನಗರ ಜನಸಂಖ್ಯೆಗೆ ಪೂರಕ ವಾಗಿ ದೇಶಾದ್ಯಂತ 100 “ಸ್ಮಾರ್ಟ್‌ ಸಿಟಿ’ಗಳನ್ನು ಅಭಿವೃದ್ಧಿಪಡಿ ಸಲು ಯೋಜನೆ ರೂಪಿಸಿರುವ ಕೇಂದ್ರ ಸರಕಾರ, ಆಯ್ಕೆಯಾದ ಎಲ್ಲ ನಗರಗಳಿಗೂ ಮೂಲ ಸೌಲಭ್ಯ ಕಲ್ಪಿಸುವ ಮೂಲಕ ನವ ನಗರಗಳ ನಿಮಾಣದಲ್ಲಿ ತೊಡಗಿದೆ. ಆದರೆ ಸ್ಮಾರ್ಟ್‌ ಸಿಟಿ ಯೋಜನೆ ಪರಿಸರಕ್ಕೆ ಮಾರಕವಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.

Advertisement

ಸ್ಮಾರ್ಟ್‌ ಸಿಟಿ ಯೋಜನೆಯ ಭಾಗವಾಗಿ 40ರಿಂದ 60 ಮಹಡಿ ಕಟ್ಟಡಗಳ ಬದಲು ಮೂರರಿಂದ ಐದು ಅಂತಸ್ತಿನ ಮಧ್ಯಮ ಎತ್ತರದ ಕಟ್ಟಡಗಳನ್ನು ನಿರ್ಮಿಸುತ್ತಿರು ವುದರಿಂದ ಪರಿಸರಕ್ಕಾಗುತ್ತಿರುವ ಹಾನಿ ಕುರಿತು ಬ್ರಿಟನ್‌ನ ಲಿಂಕನ್‌ ವಿವಿ ಸಂಶೋ ಧಕರು ಸಮಗ್ರ ವಿಶ್ಲೇಷಣೆ ನಡೆಸಿದ್ದಾರೆ. ಕಟ್ಟಡಗಳ ಸಂಖ್ಯೆ ಮತ್ತು ಎತ್ತರ, ಜನಸಂಖ್ಯೆ, ಪಾರ್ಕಿಂಗ್‌ ಅವಕಾಶ, ರಸ್ತೆ ಸೇರಿ ಇತರ ಪ್ರಮುಖ ಅಂಶಗಳನ್ನು ಗಮನದಲ್ಲಿರಿಸಿ ಕೊಂಡು ಹಾಲಿ ನಗರ ಮಾದರಿಯನ್ನು ಸ್ಮಾರ್ಟ್‌ ಸಿಟಿಯೊಂದಿಗೆ ಹೋಲಿಸಲಾಗಿದೆ. ಅದರಂತೆ ಜನ ಸಾಂದ್ರತೆ ಹೆಚ್ಚಾಗುವುದರಿಂದ ವಿದ್ಯುತ್‌, ನೀರಿನಂಥ ಸಂಪನ್ಮೂಲಗಳ ಬೇಡಿಕೆ ಹೆಚ್ಚಲಿದೆ. ಇದರೊಂದಿಗೆ ಘನತ್ಯಾಜ್ಯ, ಚರಂಡಿ ತ್ಯಾಜ್ಯದ ಪ್ರಮಾಣ ಹೆಚ್ಚಾಗಿ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಲಿದೆ ಎನ್ನಲಾಗಿದೆ.

ಮುಖ್ಯವಾಗಿ ಜನವಸತಿ ಸಾಂದ್ರತೆ ಅತಿ ಯಾಗಿರುವ ಮುಂಬೈ ರೀತಿಯ ನಗರಗಳಲ್ಲಿ ಪರಿಸರಕ್ಕೆ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಲಿದೆ. “ಸ್ಮಾರ್ಟ್‌ ಸಿಟಿ ಯೋಜನೆ ಗುರಿ ತಲುಪುತ್ತಿದ್ದಂತೆ ಮೂಲ ಸಂಪನ್ಮೂಲಗಳ ಕೊರತೆ ಉದ್ಭವಿಸುತ್ತದೆ. ಇದು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ,’ ಎನ್ನುತ್ತಾರೆ ಪ್ರೊ| ಹಗ್‌ ಬೈರ್ಡ್‌.

Advertisement

Udayavani is now on Telegram. Click here to join our channel and stay updated with the latest news.

Next