ಕಲಬುರಗಿ: ಮಹಾನಗರಕ್ಕೆ ಅವಶ್ಯಕ ತಕ್ಕಂತೆ ಆಧುನಿಕ ಯೋಜನೆ ಹಾಗೂ ಕಾರ್ಯ ಕೈಗೊಳ್ಳುವ ಮೂಲಕ ಸ್ಮಾರ್ಟ್‌ಸಿಟಿ ಕನಸು ನನಸು ಮಾಡಲು ಉದ್ದೇಶಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.
ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆ ಅಡಿಯಲ್ಲಿ ದಕ್ಷಿಣ ಮತಕ್ಷೇತ್ರದ ವಾರ್ಡ್ ನಂ.55 ರಲ್ಲಿ ಬರುವ ಗಣೇಶ ನಗರ ಮತ್ತು ಬ್ಯಾಂಕ್ ಕಾಲೋನಿಯಲ್ಲಿ 1 ಕೋಟಿ ಸಿ.ಸಿ ರಸ್ತೆ, ಮಾನಕರ ಲೇಔಟ್‌ನಲ್ಲಿ 1.50 ಕೋಟಿ ಡಾಂಬರೀಕರಣ ರಸ್ತೆ ಹಾಗೂ ಜಗಜ್ಯೋತಿ ನಗರದಲ್ಲಿ 1.50 ಸಿ.ಸಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಒಳರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಅಮೃತ ಯೋಜನೆ, 24/7 ಕುಡಿಯುವ ನೀರಿನ ಯೋಜನೆ, ಸಿಆರ್‌ಎಫ್ ಯೋಜನೆ ಹಾಗೂ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ ಅನುದಾನವನ್ನು ಮಂಜೂರು ಮಾಡಿಸಿ ಕಲಬುರಗಿ ಮಹಾನಗರವನ್ನು ಸ್ಮಾಟ್ ìಸಿಟಿಯನ್ನಾಗಿ ನಿರ್ಮಾಣ ನಿರ್ಮಿಸುವ ಕನಸು ಹೊಂದಿದ್ದಾಗಿ ತಿಳಿಸಿದ ಅಪ್ಪುಗೌಡ, ಕಲಬುರಗಿ ಮಹಾನಗರಕ್ಕೆ 24/7 ಕುಡಿಯುವ ನೀರಿನ ಯೋಜನೆ ಕಾರ್ಯಾನುಷ್ಠಾನ ಸಂಬಂಧ ಈಗಾಗಲೇ ಸರ್ವೇ ಕಾರ್ಯ ಪ್ರಾರಂಭವಾಗಿದ್ದು, ಶೀಘ್ರದಲ್ಲಿ ಕಾಮಗಾರಿಗಳಿಗೂ ಕೂಡ ಚಾಲನೆ ನೀಡಲಾಗುವುದು ಎಂದು ವಿವರಿಸಿದರು.
ರಾಜು ವಾಡೇಕರ, ಶಿವು ಸ್ವಾಮಿ, ವಿಶ್ವನಾಥ ಸಾಲಿಮಠ, ಗುಂಡಪ್ಪ ಜಮಶೆಟ್ಟಿ, ಪ್ರಭು ಪಾಟೀಲ, ಪದ್ಮಾಜಿ ರೆಡ್ಡಿ, ನಂದಕುಮಾರ ಮಾಲಿಪಾಟೀಲ, ಶ್ರೀನಿವಾಸ ದೇಸಾಯಿ, ಧನಂಜಯ ಪೂರಿ, ಪ್ರದೀಪ ಮಾನಕರ್, ಮಲ್ಲಾರೆಡ್ಡಿ, ಜಗದೀಶ ಬಡಶೆಟ್ಟಿ, ಡಾ.ಕೇಶವ ಎಸ್.ಕಾಬಾ, ಅಪ್ಪಸಾಹೇಬ, ಬಸವರಾಜ ಬಿರಾಳ, ಶಾಂತಯ್ಯ ಹಿರೇಮಠ, ರಾಜಶೇಖರ ರೆಡ್ಡಿ, ಆದಪ್ಪ ಬಗಲಿ, ಎಸ್.ಎಸ್. ಮೈನಾಳ, ಜಯಕುಮಾರ ಮೂಲಿಮನಿ, ಸುಂದರ ಕುಲಕರ್ಣಿ, ಶಿವಾನಂದ ರೆಡ್ಡಿ ಮಾಲಿ ಪಾಟೀಲ್, ಪವನ ಕುಲಕರ್ಣಿ, ಸುರೇಶ ಕುಲಕರ್ಣಿ, ಕುಪೇಂದ್ರ ಶಾಹಪೂರಕರ, ರಾಜಶೇಖರ ಪಾಟೀಲ, ಈಪಾಕ ಪಟೇಲ್, ರಾಜು ದೇವದುರ್ಗ, ಮಜರ ಖಾನ್, ನಾಗರಾಜ ಸಜ್ಜನ್, ಅಭಿಶೇಕ, ಗುತ್ತಿಗೆದಾರ ಎಸ್.ಎಂ.ಪಿ ಕನ್‌ಸ್ಟ್ರಕ್ಷನ್ ಮಹ್ಮದ ಶಿರಾಜೋದ್ದಿನ್, ಕೆಎಂಪಿ ಕನ್‌ಸ್ಟ್ರಕ್ಷನ್ ಇಸಾಕ್ ಪಟೇಲ್ ಸಾಬ್ ಹಾಗೂ ಬಡಾವಣೆಯ ಹಿರಿಯ ಮುಖಂಡರಿದ್ದರು.