Advertisement

Smart city ರಾಜ್ಯದ 3 ನಗರಗಳಿಗೆ ಸ್ಮಾರ್ಟ್‌ ಸಿಟಿ ಪ್ರಶಸ್ತಿ

01:38 AM Aug 26, 2023 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಸ್ಮಾರ್ಟ್‌ ಸಿಟಿ ಪ್ರಶಸ್ತಿಯನ್ನು ಶುಕ್ರವಾರ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಘೋಷಿಸಿದ್ದು, ಬೇರೆ ಬೇರೆ ವಿಭಾಗಗಳಲ್ಲಿ ರಾಜ್ಯದ 3 ನಗರಗಳು ಪ್ರಶಸ್ತಿ ಗಳಿಸಿವೆ.

Advertisement

ನಗರ ಪರಿಸರ ವಿಭಾಗದಲ್ಲಿ ಶಿವಮೊಗ್ಗವು ಪ್ರಶಸ್ತಿಯನ್ನು ಬಾಚಿಕೊಂಡರೆ, ನಾವೀನ್ಯದ ಪರಿಕಲ್ಪನೆ ವಿಭಾಗದಲ್ಲಿ ಹುಬ್ಬಳ್ಳಿ-ಧಾರವಾಡ ಪ್ರಶಸ್ತಿ ಗಳಿಸಿದೆ. ಬೆಳಗಾವಿಗೆ ವಲಯ ಸ್ಮಾರ್ಟ್‌ ಸಿಟಿ ಪ್ರಶಸ್ತಿ (ದಕ್ಷಿಣ ವಲಯ) ಲಭಿಸಿದೆ.

ಇಂದೋರ್‌ ನಗರವು ಅತ್ಯುತ್ತಮ ರಾಷ್ಟ್ರೀಯ ಸ್ಮಾರ್ಟ್‌ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೆ, ಸೂರತ್‌ ಮತ್ತು ಆಗ್ರಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದಿವೆ. ಅತ್ಯುತ್ತಮ ರಾಜ್ಯ ಪ್ರಶಸ್ತಿ ಮಧ್ಯಪ್ರದೇಶಕ್ಕೆ ಲಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next