Advertisement
ಪರಿಪೂರ್ಣವಾದ ಜೀವನವನ್ನು ನಡೆ ಸಲು ನಾವೇನು ಮಾಡಬೇಕೆಂಬುದು ನಮ್ಮಲ್ಲಿ ಬಹಳಷ್ಟು ಮಂದಿಗೆ ತಿಳಿದಿದೆ. ಆದರೆ ಇಲ್ಲಿರುವ ನಿಜವಾದ ಸಮಸ್ಯೆ ಎಂದರೆ ನಮಗೆ ಏನು ತಿಳಿದಿದೆಯೋ ಅದನ್ನು ನಾವು ಮಾಡುವುದಿಲ್ಲ. ಜ್ಞಾನ ಕೇವಲ ಸಂಭಾವ್ಯವಾದ ಶಕ್ತಿ ಅಷ್ಟೇ. ನಮ್ಮಲ್ಲಿ ಇರುವ ಸೂಕ್ತ ಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅದನ್ನು ಸಮರ್ಪಕವಾಗಿ ಅನುಷ್ಠಾನಿ ಸಿದರೆ ಅದು ನೈಜ ಶಕ್ತಿಯಾಗಿ ತನ್ನಿಂದ ತಾನಾಗಿಯೇ ಪರಿವರ್ತನೆಗೊಳ್ಳುತ್ತದೆ.
Related Articles
Advertisement
ಬಹಳಷ್ಟು ಮಂದಿ ನಮಗೆ ಒಳ್ಳೆಯ ಮತ್ತು ಸರಿಯಾದ ಸಮಯ (ಅವಕಾಶ) ಬರಲಿ ಎಂದು ಕಾಯುತ್ತಾ ಕುಳಿತು, ತಮ್ಮ ಮುಂದೆ ಇರುವ ಸಮಯವನ್ನು (ಅವಕಾಶ) ಕಳೆದು ಬಿಡುತ್ತಾರೆ. ಒಳ್ಳೆಯ ಸಮಯವು ಧನಾತ್ಮಕವಾಗಿ ಮುಂದಕ್ಕೆ ಸಾಗಿದಾಗ ಬರುತ್ತದೆಯೇ ಹೊರತು ಕಾಯುತ್ತಾ ಕುಳಿತಾಗ ಬರುವುದಿಲ್ಲ ಎನ್ನುವುದನ್ನು ಮರೆಯಬಾರದು. ಜೀವನದಲ್ಲಿ ಕನಸನ್ನು ಕಾಣುವುದು ಒಳ್ಳೆಯದೇ, ಆದರೆ ಕೇವಲ ಕನಸನ್ನು ಕಾಣುವುದರಿಂದ ಯಶಸ್ಸಿನ ಉತ್ತುಂಗಕ್ಕೆ ಏರಲು, ಮಾದರಿ ವ್ಯಕ್ತಿಯಾಗಲು, ಬದುಕಿನ ಖರ್ಚುವೆಚ್ಚಗಳನ್ನು ತೂಗಿಸಿ ಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಪ್ರಯತ್ನ ಬಹಳ ಮುಖ್ಯ. ವ್ಯಕ್ತಿಯೊಬ್ಬನ ವಿಚಾರ ಧಾರೆಗಳು ಎಷ್ಟೇ ಶ್ರೇಷ್ಠವಾಗಿದ್ದರೂ ಅದರ ಅನುಷ್ಠಾನವಾಗದೇ ಯಶಸ್ಸು ಸಾಧ್ಯ ವಿಲ್ಲ. ಕೇವಲ ದೊಡ್ಡ ದೊಡ್ಡ ವಿಚಾರ ಗಳನ್ನು ಮಾಡುವುದಕ್ಕಿಂತ, ದೃಢ ವಾದ ನಿರ್ಧಾರದೊಂದಿಗೆ ಚಿಕ್ಕ ಚಿಕ್ಕ ವಿಚಾರ ಗಳನ್ನು ಅನುಷ್ಠಾನಿಸುವುದು ಹೆಚ್ಚು ಶ್ರೇಷ್ಠ. ಈ ಸಣ್ಣ ಕೆಲಸಗಳೇ ಯಶಸ್ಸಿನ ಪಥದಲ್ಲಿ ನಮ್ಮನ್ನು ಕರೆದೊಯ್ಯುತ್ತದೆ. ಈ ರೀತಿ ಮಾಡಿದಾಗ ಸಣ್ಣ ಸಣ್ಣ ಯಶಸ್ಸಿನ ಮೂಲಕ ದೊಡ್ಡ ಪ್ರಮಾಣದ ಯಶಸ್ಸಿಗೆ ಅಗತ್ಯವಿರುವ ಪೂರ್ವ ತಯಾರಿಯನ್ನು ಮಾಡಿಕೊಳ್ಳಲು ಸಹಾಯವಾಗುತ್ತದೆ.
– ಸಂತೋಷ್ ರಾವ್, ಪೆರ್ಮುಡ