Advertisement
ಕಿಂಡಿ ಅಣೆಕಟ್ಟುಗಳ ನಿರ್ಮಾಣತಾಲೂಕಿನ 41 ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಮಹತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕಳೆದ ವರ್ಷ 65 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಈ ವರ್ಷ 10 ಕಿಂಡಿ ಅಣೆಕಟ್ಟುಗಳು ಸೇರಿ ಒಟ್ಟು 75 ನಿರ್ಮಾಣಗೊಂಡಿವೆ. ಸಣ್ಣ ನೀರಾವರಿ ಇಲಾಖೆ ಮತ್ತು ಜಲಾನಯನ ಇಲಾಖೆ ಪ್ರತ್ಯೇಕವಾಗಿದ್ದ ಸಂದರ್ಭದಲ್ಲಿಯೂ ಸುಮಾರು ಇಷ್ಟೇ ಪ್ರಮಾಣದ ಕಿಂಡಿ ಅಣೆಕಟ್ಟುಗಳ ನಿರ್ಮಾಣವಾಗಿತ್ತು. ಇದಕ್ಕೆ ಕೆಲವು ಕಡೆಗಳಲ್ಲಿ ಮಾತ್ರ ಹಲಗೆ ಅಳವಡಿಸಲಾಗುತ್ತಿದೆ.
ಬಹಳ ಪ್ರಯೋಜನ
ತೋಟ, ಗದ್ದೆಗಳು ಇರುವ ಗ್ರಾಮಾಂತರ ಭಾಗದಲ್ಲಿ ಸಣ್ಣ ತೋಡುಗಳು, ತೊರೆ, ಕಣಿ, ಹೊಳೆಗಳು ಹರಿಯುತ್ತವೆ. ಡಿಸೆಂಬರ್, ಜನವರಿ ತನಕ ಇಲ್ಲಿ ಹರಿಯುವ ನೀರಿಗೆ ತಡೆಕಟ್ಟಿದರೆ ನೀರು ಶೇಖರಣೆಗೊಂಡು ಇಂಗುವಿಕೆ ಜತೆಗೆ ಸುತ್ತಲಿನ ಪರಿಸರದಲ್ಲಿರುವ ತೋಟಗಳಿಗೂ ಪ್ರಯೋಜನವಾಗುತ್ತದೆ. ಮುಂದೆ ನೀರಿನ ಕೊರತೆಯಾದರೆ ಶೇಖರಣೆಗೊಂಡ ನೀರಿನ ಪರಿಣಾಮದ ಲಾಭ ಸುತ್ತಲಿನ ತೋಟ, ಬಾವಿ, ಕೊಳವೆ ಬಾವಿಗಳಿಗೆ ಸಿಗುತ್ತದೆ. ಸಾಂಪ್ರದಾಯಿಕ ಕ್ರಮ
ಅಡಿಕೆ ಸಹಿತ ತೋಟಗಳ ಬೆಳೆಯನ್ನು ಬೆಳೆಯುವ ರೈತರು ಹಿಂದಿನಿಂದಲೇ ಇಂತಹ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ತೋಟದ ಮಧ್ಯೆ ಇರುವ ಕಣಿಗಳಲ್ಲಿ ಮಣ್ಣಿನ ತಡೆಯೊಡ್ಡಿ ನೀರು ನಿಲ್ಲಿಸುವ ಯೋಜನೆಯಿಂದ ಪ್ರಯೋಜನ ಪಡೆಯುವಲ್ಲಿ ಅವರು ಯಶಸ್ಸಿಯಾಗಿದ್ದಾರೆ. ಆದ್ದರಿಂದ ಬೆಳೆಗಾರರಿಗೆ ಇದು ಸಾಂಪ್ರದಾಯಿಕ ಕ್ರಮ. ಜಲಸಾಕ್ಷರತೆಯತ್ತ ರೈತವರ್ಗದ ಜಾಗೃತಿಯಿಂದ ಗ್ರಾಮೀಣ ಭಾಗದಲ್ಲಿ ಈ ಕಿಂಡಿ ಅಣೆಕಟ್ಟು ನಿರ್ಮಾಣದ ಜತೆಗೆ ನೀರು ಉಳಿಸುವ, ನೀರು ಇಂಗಿಸುವ ಕಾಯಕದತ್ತ ಮುಖಮಾಡಿರುವುದು ಆಶಾದಾಯಕ ಬೆಳವಣಿಗೆೆಯಾಗಿದೆ.
Related Articles
ಕಳೆದ ವರ್ಷ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 2.92 ಲಕ್ಷ ರೂ. ವೆಚ್ಚದಲ್ಲಿ ಬನ್ನೂರು ಗ್ರಾ.ಪಂ. ಮೂಲಕ ಕಿಂಡಿ ಅಣೆಕಟ್ಟು ನಿರ್ಮಿಸಿ ಹಲಗೆ ಅಳವಡಿಸಿದ್ದೇನೆ. ಅಡಿಕೆ ತೋಟಕ್ಕೆ ಹೆಚ್ಚು ಪ್ರಯೋಜನವಾಗಿದೆ. ಸುತ್ತಮುತ್ತಲ ಹಲವು ರೈತರ ಕೃಷಿಗೆ ಹಾಗೂ ಕೊಳವೆ ಬಾವಿಗಳಿಗೂ ಇದರ ಪ್ರಯೋಜನ ಕಂಡುಬಂದಿದೆ. ಈ ಬಾರಿ ಒಸರಿನ ಪ್ರಮಾಣ ಹೆಚ್ಚು ಕಂಡುಬಂದಿರುವುದರಿಂದ ಮಾರ್ಚ್ ತನಕ ತೋಟಕ್ಕೆ ನೀರು ಸಾಕಾಗಬಹುದು.
– ಕೃಷ್ಣಪ್ಪ ಗೌಡ ಕೆಮ್ಮಾಯಿ ಕೃಷಿಕರು
Advertisement
ಈ ಬಾರಿಯಿಂದ ಸಿಮೆಂಟ್ ಹಲಗೆಉದ್ಯೋಗ ಖಾತರಿ ಯೋಜನೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 75 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಇನ್ನೂ ಬೇಡಿಕೆ ಬರುತ್ತಿದೆ. 2 ವೆಂಟ್ ನಿರ್ಮಿಸಿದರೆ ಕೂಲಿ ಹಾಗೂ ಕೂಲಿಯೇತರ ವೆಚ್ಚವಾಗಿ ಗರಿಷ್ಠ 5 ಲಕ್ಷ ರೂ. ತನಕ ಉದ್ಯೋಗ ಖಾತರಿಯಲ್ಲಿ ಅನುದಾನ ನೀಡಲು ಸಾಧ್ಯವಾಗುತ್ತದೆ. ಈ ಬಾರಿ ಮರದ ಹಲಗೆಯ ಬದಲು ಸಿಮೆಂಟ್ ಹಲಗೆ ಅಳವಡಿಕೆ ಮಾಡುತ್ತಿದ್ದೇವೆ. ಇದು ಹೆಚ್ಚು ವರ್ಷ ಬಾಳಿಕೆ ಬರಬಹುದು. ಇದರ ಪ್ರಯೋಜನವನ್ನು ರೈತರು ಪಡೆದುಕೊಳ್ಳಬಹುದು.
– ನವೀನ್ ಭಂಡಾರಿ, ಸ. ನಿರ್ದೇಶಕರು, ತಾ.ಪಂ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ — ರಾಜೇಶ್ ಪಟ್ಟೆ