Advertisement

GDP;ಕಡಿಮೆ ಸರಕಾರಿ ವೆಚ್ಚದಿಂದಾಗಿ ಬೆಳವಣಿಗೆ ನಿಧಾನವಾಗಿದೆ: ಶಕ್ತಿಕಾಂತ ದಾಸ್

07:42 PM Aug 31, 2024 | |

ಭುವನೇಶ್ವರ:”ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು 15 ತಿಂಗಳ ಕನಿಷ್ಠ 6.7 ಶೇಕಡಾಕ್ಕೆ ನಿಧಾನವಾಗಿದೆ. ಇದಕ್ಕೆ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆಯ ಜಾರಿ ಹಿನ್ನೆಲೆಯಲ್ಲಿ ಕಡಿಮೆ ಸರಕಾರಿ ವೆಚ್ಚ ಪ್ರಮುಖ ಕಾರಣ” ಎಂದು ಆರ್‌ಬಿಐ(RBI) ಗವರ್ನರ್ ಶಕ್ತಿಕಾಂತ ದಾಸ್ ಶನಿವಾರ(ಆ 31) ಹೇಳಿದ್ದಾರೆ.

Advertisement

”ಈ ವಿತ್ತೀಯ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ.7.1ರಷ್ಟು ಬೆಳವಣಿಗೆ ದರವನ್ನು ಆರ್ ಬಿಐ ಅಂದಾಜಿಸಿತ್ತು.ಆದಾಗ್ಯೂ, ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಬಿಡುಗಡೆ ಮಾಡಿದ ಮೊದಲ ಮುಂಗಡ ಅಂದಾಜು ದತ್ತಾಂಶವು ಬೆಳವಣಿಗೆ ದರವನ್ನು 6.7 ಪ್ರತಿಶತ ಎಂದು ತೋರಿಸಿದೆ’ ಎಂದು ಶಕ್ತಿಕಾಂತ ದಾಸ್ ತಿಳಿಸಿದರು.

ಹೂಡಿಕೆ, ಉತ್ಪಾದನೆ,ಬಳಕೆ, ಸೇವೆಗಳು ಮತ್ತು ನಿರ್ಮಾಣದಂತಹವುಗಳು ಜಿಡಿಪಿ ಬೆಳವಣಿಗೆಗೆ ಕಾರಣವಾದ ಅಂಶಗಳು ಶೇಕಡಾ 7 ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ದಾಖಲಿಸಲು ಕಾರಣವಾಗುತ್ತದೆ ಎಂದು ಹೇಳಿದರು.

ಕೇವಲ ಎರಡು ಅಂಶಗಳು ಬೆಳವಣಿಗೆಯ ದರವನ್ನು ಸ್ವಲ್ಪಮಟ್ಟಿಗೆ ಕೆಳಗೆ ಎಳೆದಿವೆ. ಅವುಗಳೆಂದರೆ-ಸರಕಾರ (ಕೇಂದ್ರ ಮತ್ತು ರಾಜ್ಯ ಎರಡೂ) ಖರ್ಚು ಮತ್ತು ಕೃಷಿ. ಮುಂಬರುವ ತ್ರೈಮಾಸಿಕಗಳಲ್ಲಿ ಸರಕಾರದ ವೆಚ್ಚವು ಹೆಚ್ಚಾಗುತ್ತದೆ ಮತ್ತು ಬೆಳವಣಿಗೆಗೆ ಅಗತ್ಯವಾದ ಬೆಂಬಲವನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಆರ್ ಬಿಐ ಗವರ್ನರ್ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next